Karnataka Times
Trending Stories, Viral News, Gossips & Everything in Kannada

BSNL: ಕೇವಲ ₹106 ಕ್ಕೆ ಹೊಸ ಆಫರ್ ಕೊಟ್ಟ BSNL! ಅಂಬಾನಿಗೆ ಮತ್ತೆ ಸೆಡ್ಡು, ಏನೆಲ್ಲಾ ಫ್ರಿ ಗೊತ್ತಾ?

advertisement

ಸ್ನೇಹಿತರೆ ಕಳೆದ ಕೆಲವು ದಿನಗಳ ಹಿಂದೆ ಪ್ರಿಪೇಯ್ಡ್ ಸೇವೆಗಳ (Prepaid Services) ಮೇಲಿನ ತೆರಿಗೆ ಹೆಚ್ಚಾದ ಕಾರಣ ರಿಲೈನ್ಸ್, ಏರ್ಟೆಲ್, ಜಿಯೋ ಹಾಗೂ ವೊಡಾಫೋನ್ ನಂತಹ ಟೆಲಿಕಾಂ ಕಂಪನಿಗಳು ರಿಚಾರ್ಜ್ ಹಣವನ್ನು ದುಬಾರಿ ಮಾಡಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ಅದ್ಭುತ ಕೊಡುಗೆಗಳನ್ನು ನೀಡುವ ಯೋಜನೆಯನ್ನು ಹೂಡಿರುವ BSNL ಅತಿ ಕಡಿಮೆ ಬೆಲೆಗೆ ಗ್ರಾಹಕರಿಗೆ ಇಷ್ಟವಾಗುವಂತಹ ಪ್ಲಾನ್ ಗಳನ್ನು ಒದಗಿಸುತ್ತಿದೆ.‌

ಅದರಂತೆ ಸದ್ಯ BSNL ಕಂಪನಿ ಗ್ರಾಹಕರಿಗೆ ಬಹಳನೇ ಲಾಭದಾಯಕವೆನಿಸುವ 106 ರೂಪಾಯಿಯ ಅದ್ಭುತ ರಿಚಾರ್ಜ್ ಪ್ಲಾನನ್ನು (Best Recharge Plan) ತನ್ನ ಪೋರ್ಟ್ ಪೋಲಿಯೋದಲ್ಲಿ (Portfolio) ಅಳವಡಿಕೆ ಮಾಡಿದೆ. ಹಾಗಾದ್ರೆ ಈ ವಿಶೇಷ ಆಫರ್ ನಲ್ಲಿ ಏನೆಲ್ಲಾ ಅತ್ಯಾಕಾಶಕ ಕೊಡುಗೆಗಳಿದೆ ಎಂಬುದನ್ನು ಈಗಲೇ ತಿಳಿದುಕೊಳ್ಳಿ.

ಜನರನ್ನು ಆಕರ್ಷಿಸುವುದರಲ್ಲಿ BSNL No.1 ಸ್ಥಾನ!

 

Image Source: India TV Hindi

 

BSNL ಕಳೆದು ಒಂದು ವರ್ಷದಲ್ಲಿ ಒಂದು ಮಿಲಿಯನ್ಗೂ ಹೆಚ್ಚಿನ ಗ್ರಾಹಕರನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಇತರೆ ಟೆಲಿಕಾಂ ಕಂಪನಿ (Telecom Companies) ಗಳಿಗಿಂತ ಕಡಿಮೆ ಬೆಲೆಗೆ ಅತ್ಯಾಕರ್ಷಕವಾದ ರಿಚಾರ್ಜ್ ಪ್ಲಾನ್ ಗಳನ್ನು ಒದಗಿಸಿಕೊಡುತ್ತಾ, ಅತಿಹೆಚ್ಚಿನ ಚಂದದಾರರನ್ನು ಸೆಳೆಯುತ್ತಿರುವ ಬಿಎಸ್ಎನ್ಎಲ್ ಕಂಪನಿಯಿಂದಾಗಿ ರಿಲಯನ್ಸ್, ಏರ್ಟೆಲ್, ವೊಡಾಫೋನ್ ಹಾಗೂ ಜಿಯೋ ಕಂಪನಿಗಳು 1.9 ಮಿಲಿಯನ್ಗು ಅಧಿಕ ಗ್ರಾಹಕರನ್ನು ಕಳೆದುಕೊಂಡಿದೆ.

advertisement

ಇದೇ ನಿಟ್ಟಿನಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತಿರುವ BSNL, ಭಾರತದಾದ್ಯಂತ ಒಂದು ಲಕ್ಷಕ್ಕೂ ಅಧಿಕ BSNL ಟವರ್ (BSNL Tower) ಗಳನ್ನು ಸ್ಥಾಪನೆ ಮಾಡಿ ಜನರಿಗೆ ನೆಟ್ವರ್ಕ್ ನಲ್ಲಿ ಯಾವುದೇ ಸಮಸ್ಯೆ ಯಾಗದಂತೆ ನೋಡಿಕೊಳ್ಳುವುದರ ಜೊತೆಗೆ ಉಚಿತವಾಗಿ 4G ಸಿಮ್ ಗಳನ್ನು ವಿತರಣೆ ಮಾಡುತ್ತಾ, ತಮ್ಮ ಗ್ರಾಹಕರನ್ನು ಅಪ್ಗ್ರೇಡ್ ಆಗುವಂತೆ ಕೇಳಿಕೊಳ್ಳುತ್ತಿದ್ದಾರೆ.

ಕೇವಲ 106 ರಿಚಾರ್ಜ್ ಮಾಡಿ ಅತ್ಯಾಕರ್ಷಕ ಸೇವೆಯನ್ನು ನಿಮ್ಮದಾಗಿಸಿಕೊಳ್ಳಿ:

 

Image Source: Gizbot

 

BSNL ತನ್ನ ಗ್ರಾಹಕರಿಗೆ 84 ದಿನದ ಈ ಅತ್ಯಾಕರ್ಷಕ ಪ್ಲಾನನ್ನು ಒದಗಿಸಿಕೊಟ್ಟಿದ್ದು, ನೀವೇನಾದರೂ ಈ ಪ್ಲಾನನ್ನು ಆಯ್ದುಕೊಂಡು ರಿಚಾರ್ಜ್ ಮಾಡಿಕೊಂಡರೆ 84 ದಿನಗಳಿಗೆ ಸರಾಸರಿ 3GB ಡೇಟಾ (ಪ್ರತಿದಿನ 3GB ಡೇಟಾ ಸೌಲಭ್ಯವಿಲ್ಲ) ಯಾವುದೇ ಲೋಕಲ್ ಅಥವಾ STD ಗಳಿಗೆ 100 ನಿಮಿಷಗಳ ಉಚಿತ ಕರೆ ಸೌಲಭ್ಯ ಹಾಗೂ BSNL PRBT ಕಾಲರ್ ಟ್ಯೂನ್ ಸೌಲಭ್ಯವಿದ್ದು, ಗ್ರಾಹಕರು ತಮಗೆ ಇಷ್ಟ ಬಂದಂತಹ ಹಾಡುಗಳನ್ನು ಕೇವಲ 60 ದಿನಗಳ ಕಾಲ ಕಾಲರ್ ಟ್ಯೂನ್ ಆಗಿ ಉಪಯೋಗಿಸಬಹುದು. ಆದರೆ 84 ದಿನದ ಪ್ಲಾನ್ ನಲ್ಲಿ ಯಾವುದೇ ರೀತಿಯ SMS ಸಂದೇಶದ ಕೊಡುಗೆಯನ್ನು ಈ ಪ್ಲಾನ್ನಲ್ಲಿ ನೀಡಿಲ್ಲ.

ಹೀಗೆ ನೀವೇನಾದರೂ ಅತಿ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲಾನನ್ನು ಎದುರು ನೋಡುತ್ತಿದ್ದರೆ, BSNL ನ ಪೋರ್ಟ್ ಪೋಲಿಯೋದಲ್ಲಿ ಲಭ್ಯವಿರುವ 106ರೂಗಳ ಈ ಪ್ಲಾನ್ ನಿಮಗೆ ಅತ್ಯುತ್ತಮ ಆಯ್ಕೆ ಎನ್ನಬಹುದು.

advertisement

Leave A Reply

Your email address will not be published.