Karnataka Times
Trending Stories, Viral News, Gossips & Everything in Kannada

BSNL Offers: ಇಡೀ ಭಾರತಕ್ಕೆ ಹೊಸ ಉಚಿತ ಆಫ಼ರ್ ಘೋಷಿಸಿದ ಜಿಯೋ! ಕಂಗಾಲಾದ ಅಂಬಾನಿ

advertisement

BSNL starts offering free 4G SIM : ಸ್ನೇಹಿತರೆ ಭಾರತದ ಸರ್ಕಾರಿ ಟೆಲಿಕಾಂ ದೈತ್ಯ ಎಂದೇ ಹೆಸರುವಾಸಿಯಾಗಿರುವಂತಹ BSNL ಸದ್ಯ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದು, ಈ ಹಿಂದೆ ರಿಚಾರ್ಜ್ ವೆಚ್ಚವನ್ನು ಕಡಿತಗೊಳಿಸಿ, ಒಳ್ಳೊಳ್ಳೆ ಆಫರ್ ಗಳನ್ನು ನೀಡುವ ಮೂಲಕ ಭಾರೀ ಜನಪ್ರಿಯತೆ ಪಡೆದಿದ್ದ BSNL ಸದ್ಯ ಉಚಿತವಾಗಿ 4G SIM ಅನ್ನು ವಿತರಣೆ ಮಾಡುವ ಮೂಲಕ ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಉತ್ತಮ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದೆ.

BSNLನಿಂದ ದೇಶದಾದ್ಯಂತ ಉಚಿತ 4G SIM ವಿತರಣೆ

ದೇಶದಾದ್ಯಂತ ಇರುವಂತಹ ತಮ್ಮ ಗ್ರಾಹಕರನ್ನು 4G SIM ಯುಗಕ್ಕೆ ಪರಿವರ್ತನೆ ಮಾಡುವ ಗುರಿಯನ್ನು ಹೊಂದಿರುವಂತಹ ಬಿಎಸ್ಎನ್ಎಲ್ ಟೆಲಿಕಾಂ ಕಂಪನಿ(BSNL telecom company) ಅದಾಗಲೇ ಭಾರತದ ಕೆಲವು ವಲಯಗಳಲ್ಲಿ ಉಚಿತ ಸಿಮ್ ವಿತರಣಾ ಕೆಲಸವನ್ನು ಪ್ರಾರಂಭಿಸಿದೆ ಹಾಗೂ ದೇಶದ ಮೂಲೆ ಮೂಲೆಗೂ ತಲುಪಿ ಈ ಕೆಲಸವನ್ನು ಯಶಸ್ವಿಗೊಳಿಸುವ ಉದ್ದೇಶದಲ್ಲಿದೆ. ಹೀಗಾಗಿ ಸರಿಯಾದ ಸಂಪರ್ಕ ಸಿಗದೆ ತೊಂದರೆ ಅನುಭವಿಸುತ್ತಿರುವಂತಹ ಗ್ರಾಹಕರಿಗೆ 4G SIM ಉಚಿತವಾಗಿ ನೀಡುವ ಮೂಲಕ ಅಪ್ ಡೇಟ್ ಆಗುವಂತೆ ಉತ್ತೇಜಿಸುತ್ತಿದ್ದಾರೆ.

BSNL starts offering free 4G SIM upgrades with complimentary data benefits
Image Credit: India Today

ಉಚಿತ 4G SIM ಸಿಮ್ ಪಡೆಯುವುದು ಹೇಗೆ?

advertisement

BSNL ಟೆಲಿಕಾಂ ಕಂಪನಿ ನೀಡುತ್ತಿರುವಂತಹ 4G ಉಚಿತ ಸಿಮ್ ಪಡೆಯಲು ನಿಮ್ಮ ಹತ್ತಿರದ ಬಿಎಸ್ಎನ್ಎಲ್ ಗ್ರಾಹಕರ ಸೇವಾ ಕೇಂದ್ರ, ಫ್ರಾನ್ಚೈಸಿ/CSE ಗಳಿಗೆ ಭೇಟಿ ನೀಡಿ, ನಿಮ್ಮ ದಾಖಲಾತಿಗಳಾದ ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್(voter ID or driving licence) ನೀಡುವ ಮೂಲಕ ಉಚಿತವಾದ 4G SIM ಅನ್ನು ನಿಮ್ಮದಾಗಿಸಿಕೊಳ್ಳಬಹುದು.

ಡಿಜಿಟಲ್ MODE  ಪರಿವರ್ತನೆ

BSNL ಟೆಲಿಕಾಂ ಕಂಪನಿಯು ತನ್ನ ಗ್ರಾಹಕರನ್ನು ಡಿಜಿಟಲ್ ಮೊಡ್(digital mode)ಗೆ ಪರಿವರ್ತಿಸಲು ವಿಶೇಷ ಕ್ರಮ ತೆಗೆದುಕೊಂಡಿದ್ದು, ಬಿಎಸ್ಎನ್ಎಲ್ ಬಳಕೆದಾರರು ಈ ಹಿಂದೆ ಕಾಗದದ ಅರ್ಜಿಗಳ ಮೂಲಕ ತೆಗೆದುಕೊಂಡಿದ್ದಂತಹ ಸಿಮ್ಗಳನ್ನು ಡಿಜಿಟಲ್ ಮೊಡ್ಗೆ ಪರಿವರ್ತಿಸಿಕೊಳ್ಳಬೇಕೆಂಬ ಆದೇಶವನ್ನು ಹೊರಡಿಸಿದೆ. ಈಗಾಗಲೇ ಈ ಪ್ರಕ್ರಿಯೆಯು ಹಲವೆಡೆ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದಿದ್ದು, ಹಲವು‌ BSNL ಗ್ರಾಹಕರು ತಮ್ಮ ಸಿಮ್ ಗಳನ್ನು ಡಿಜಿಟಲ್ ಮೊಡ್ಗೆ ಮರುಪರಿಶೀಲಿಸಿಕೊಂಡಿದ್ದಾರೆ.

BSNL starts offering free 4G SIM upgrades with complimentary data benefits
Image Credit: India Today

ಡಿಜಿಟಲ್ MODE  ಅಗತ್ಯತೆ

ಈ ಪ್ರಕ್ರಿಯೆಯು BSNL ಬಳಕೆದಾರರ ಗುರುತನ್ನು ದೃಢೀಕರಿಸಲು ಮತ್ತು ಭದ್ರತೆಯನ್ನು ಮತ್ತಷ್ಟು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ನಿಮ್ಮ ಹತ್ತಿರದ BSNL ಗ್ರಾಹಕ ಸೇವಾ ಕೇಂದ್ರ, BSNL ಫ್ರಾನ್ಚೈಸಿ ಅಥವಾ ರಿಟೇಲ್ ಅಂಗಡಿ(BSNL franchise or retail shop)ಗೆ ತೆರಳಿ ಗುರುತಿನ ಚೀಟಿಯನ್ನು ಒದಗಿಸುವ ಮೂಲಕ ಮರು ಪರಿಶೀಲನೆ ಮಾಡಿಸಿಕೊಳ್ಳಬಹುದು, ಎಲ್ಲಾ BSNL ಬಳಕೆದಾರರು ಏಪ್ರಿಲ್ 30ನೇ ತಾರೀಖಿನೊಳಗೆ ಕಡ್ಡಾಯವಾಗಿ ಡಿಜಿಟಲ್ ಮೊಡ್ಗೆ ಪರಿವರ್ತನೆಗೊಳ್ಳಬೇಕಿದೆ ಎಂಬ ಆದೇಶವನ್ನು ಟೆಲಿಕಾಂ ಕಂಪನಿ ಹೊರಡಿಸಿದೆ.

advertisement

Leave A Reply

Your email address will not be published.