Bank Account: ರಾಷ್ಟೀಕೃತ ಬ್ಯಾಂಕಿನಲ್ಲಿ ಒಂದಕ್ಕಿಂತ ಹೆಚ್ಚು ಖಾತೆ ಇದ್ದವರಿಗೆ ಹೊಸ ಸೂಚನೆ!
ಇಂದು ಬ್ಯಾಂಕ್ ವ್ಯವಹಾರಗಳು ಹೆಚ್ಚಾದಂತೆ ಹಣದ ವಹಿವಾಟು ಗಳು ಕೂಡ ಹೆಚ್ಚಾಗಿದೆ.ಹಣಕಾಸಿನ ವಹಿವಾಟು ಮಾಡಬೇಕಾದರೆ ಬ್ಯಾಂಕ್ ಗಳಿಗೆ ಭೇಟಿ ನೀಡುವುದು ಸಹ ಮುಖ್ಯವಾಗುತ್ತದೆ.ಅದೇ ರೀತಿ ಯಾವುದೇ ಬ್ಯಾಂಕ್ ನಲ್ಲಿ ಖಾತೆ ತೆರೆಯುದಾದರೂ ನಿಮಗೆ ಬ್ಯಾಂಕ್ ಪಾಸ್ ಪುಸ್ತಕ (Bank Pass Book) ಅಗತ್ಯವಾಗಿ ಬೇಕು. ಇಂದು ಹಣ ಸೇವಿಂಗ್ ಮಾಡಲು,ಸ್ಯಾಲರಿ ಹಣ ಬರಲು, ಸಾಲ ಪಡೆಯಲು, ಕ್ರೆಡಿಟ್ ಕಾರ್ಡ್ (Credit Card) ಪಡೆಯಲು ಹೀಗೆ ಹೊಸ ಹೊಸ ಖಾತೆಯನ್ನು ತೆರೆಯಲೇ ಬೇಕಾಗುತ್ತದೆ.
ಅದರಲ್ಲೂ ಇಂದು ಬ್ಯಾಂಕ್ ಕಾರ್ಯ ವೈಖರಿ ಡಿಜಿಟಲ್ ಆಗಿರುವ ಕಾರಣದಿಂದಾಗಿ ಬ್ಯಾಂಕಿಗೆ ತೆರಳಿ ಬ್ಯಾಂಕ್ ನಿಯಮಗಳ ಬಗ್ಗೆ ನಾವು ತಿಳಿದುಕೊಳ್ಳುವುದು ಕಮ್ಮಿಯೇ ಆಗಿದೆ. ಯಾವುದೇ ರೀತಿ ಹಣಕಾಸಿನ ವ್ಯವಹಾರ ಮಾಡುದಾದ್ರೂ ಬೇರೆ, ಬೇರೆ ಬ್ಯಾಂಕ್ ನಲ್ಲಿ ಖಾತೆ (Bank Account) ಯನ್ನು ಹೊಂದಿದ್ದರು ಇದ್ದ ಸ್ಥಳದಲ್ಲಿಯೇ ಹಣದ ವಹಿವಾಟು, ಬ್ಯಾಂಕ್ ಮೊತ್ತ ಪರಿಶೀಲನೆ, ಸಾಲದ ಮೊತ್ತ ಇತ್ಯಾದಿ ಪರಿಶೀಲನೆ ಮಾಡುತ್ತೇವೆ.
ಬಹು ಖಾತೆ ನಿರ್ವಹಣೆ
ಇಂದು ಹೆಚ್ಚಿನ ಜನರು ಕೆಲವು ಕಾರಣದಿಂದಾಗಿ ನಾಲ್ಕೈದು ಆದರೂ ಬ್ಯಾಂಕ್ ಖಾತೆಯನ್ನು ಬೇರೆ ಬೇರೆ ಬ್ಯಾಂಕ್ ನಲ್ಲಿ ತೆರೆಯುತ್ತಾರೆ. ಈ ಎಲ್ಲ ಬ್ಯಾಂಕ್ ಖಾತೆಯನ್ನು ಸಹ ನಿರ್ವಹಣೆ ಮಾಡಬೇಕಾಗುತ್ತದೆ. ಬ್ಯಾಂಕ್ ನಿಯಮಗಳ ಪ್ರಕಾರ ಇಷ್ಟೇ ಖಾತೆಯನ್ನು ಒಬ್ಬ ವ್ಯಕ್ತಿ ತೆರೆಯಬೇಕು ಎನ್ನುವ ನಿಯಮ ಇಲ್ಲ.
ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆ (Bank Account) ಯನ್ನು ಸಹ ತೆರೆಯಬಹುದಾಗಿದೆ. ಇದಕ್ಕೆ ಯಾವುದೇ ರೀತಿಯ ಮಿತಿ ಇಲ್ಲ. ಆದರೆ ನೀವು ಒಂದಕ್ಕಿಂತ ಹೆಚ್ಚು ಖಾತೆಯನ್ನು ತೆರೆಯುವಾಗ ಈ ಬಗ್ಗೆ ಗಮನ ಹರಿಸಬೇಕು.
ಈ ನಿಯಮ ಇರಲಿದೆ:
ಬ್ಯಾಂಕ್ ನಲ್ಲಿ ಖಾತೆ (Bank Account) ತೆರೆಯುವಾಗ ನಾವು ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳುವುದು ಸಹ ಬಹಳಷ್ಟು ಮುಖ್ಯ ವಾಗಲಿದೆ. ಕೆಲವೊಂದು ಬ್ಯಾಂಕ್ ನಲ್ಲಿ ಆ ಬ್ಯಾಂಕ್ ಗೆ ಅನುಗುಣವಾಗಿ ಕನಿಷ್ಟ ಮೊತ್ತ ಇರಲಿದೆ. ಹಾಗಾಗಿ ನೀವು ಒಂದಕ್ಕಿಂತ ಹೆಚ್ಚು ಖಾತೆಯನ್ನು ಹೊಂದಿದ್ದಾಗ ಪ್ರತಿಯೊಂದು ಖಾತೆಯಲ್ಲಿಯೂ ಮಿನಿಮಮ್ ಬ್ಯಾಲೆನ್ಸ್ ಇಡಬೇಕಾಗುತ್ತದೆ. ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳುವುದು ಬಹಳ ಅವಶ್ಯಕ. ಈ ನಿರ್ವಹಣೆಯನ್ನು ಮಾಡದಿದ್ದರೆ, ದಂಡವನ್ನು ಪಾವತಿ ಮಾಡಬೇಕಾಗುತ್ತದೆ.
ಈ ಸಮಸ್ಯೆ ಬರಲಿದೆ
- ನಿಮ್ಮ ಬಳಿ ಹೆಚ್ಚು ಖಾತೆ ಇದ್ದರೆ ನಿರ್ವಹಣೆ ಮಾಡಲು ಕಷ್ಟ.ನಿಮ್ಮ ಖಾತೆಯಲ್ಲಿ ಕನಿಷ್ಠ ಬಾಕಿ ಉಳಿಸದೇ ಇದ್ದಲ್ಲಿ ಕ್ರೆಡಿಟ್ ಸ್ಕೋರ್ ಹದಗೆಡುತ್ತದೆ.
- ಒಂದು ಬ್ಯಾಂಕ್ ಖಾತೆಯಿಂದ ಹೆಚ್ಚಿನ ಕಾಲ ನೀವು ಯಾವುದೇ ವಹಿವಾಟು ನಡೆಸದೇ ಇದ್ದರೆ ಅದು ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇದೆ.
- ಒಂದೊಂದು ಬ್ಯಾಂಕಿನಲ್ಲೂ ಶುಲ್ಕ ನಿಯಮ ಬೇರೆ ಇರಲಿದ್ದು ನೀವು ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ಎಲ್ಲ ಬ್ಯಾಂಕುಗಳ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
- ಹೆಚ್ಚಿನ ಖಾತೆ ಇರುವುದರಿಂದ, ತೆರಿಗೆಯನ್ನು ಠೇವಣಿ ಮಾಡುವಾಗ ಅನೇಕ ಸಮಸ್ಯೆಗಳು ಬರಲಿದೆ.