Bank Account: ಭಾರತದ ಯಾವುದೇ ನಾಗರೀಕ ಎಷ್ಟು ಬ್ಯಾಂಕ್ ಖಾತೆ ಹೊಂದಿರಬಹುದು! ನಿಯಮ ಹೊರಡಿಸಿದ RBI.
ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಬ್ಯಾಂಕ್ ಖಾತೆ (Bank Account) ಹೊಂದಿರುತ್ತಾರೆ. ಸಾಮಾನ್ಯ ನಾಗರಿಕರನ್ನು ಬ್ಯಾಂಕ್ಗಳೊಂದಿಗೆ ಸಂಪರ್ಕಿಸಲು ಸರ್ಕಾರವು ಜನ್ ಧನ್ ಖಾತೆಯಂತಹ ಯೋಜನೆಗಳನ್ನು ರೂಪಿಸಿದೆ. ಇದಾದ ನಂತರ ಎಲ್ಲ ಯೋಜನೆಗಳಿಂದ ಬಂದ ಹಣ ಬ್ಯಾಂಕ್ ಖಾತೆಗೆ ಬರಲಾರಂಭಿಸಿತು. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಬ್ಯಾಂಕ್ ಖಾತೆ ತೆರೆದಿದ್ದಾರೆ. ಅನೇಕ ಜನರು ಎರಡರಿಂದ ಮೂರು ಬ್ಯಾಂಕ್ಗಳಲ್ಲಿ ಖಾತೆ ತೆರೆಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಬಹುದು ಎಂಬ ಪ್ರಶ್ನೆ ಹಲವಾರು ಜನರ ಮನಸ್ಸಿನಲ್ಲಿ ಮೂಡುತ್ತಿರುತ್ತದೆ. ಹಾಗಾದರೆ ಇಂದು ವಿವರವಾಗಿ ತಿಳಿದುಕೊಳ್ಳೋಣ.
ಎಷ್ಟು ಬಗೆಯ ಬ್ಯಾಂಕ್ ಖಾತೆ (Bank Account)ಗಳಿವೆ?
- Savings Account
- Current Account
- Salary Account
- Joint Account
ಯಾರು ಯಾವ ಖಾತೆಯನ್ನು ಬಳಸಬಹುದು?
ಸಾಮಾನ್ಯವಾಗಿ ಹೆಚ್ಚಿನ ಜನ ಉಳಿತಾಯ ಖಾತೆ (Savings Account) ಗಳನ್ನು ತೆರೆಯುತ್ತಾರೆ. ಜನರು ಇದನ್ನು ತಮ್ಮ ಪ್ರಾಥಮಿಕ ಖಾತೆಯಾಗಿ ಬಳಸುತ್ತಾರೆ. ಜನರು ತಮ್ಮ ಗಳಿಕೆಯನ್ನು ಈ ಉಳಿತಾಯ ಖಾತೆಯಲ್ಲಿ ಠೇವಣಿ ಮಾಡುತ್ತಾರೆ ಮತ್ತು ನಂತರ ಈ ಹಣಕ್ಕೆ ಬ್ಯಾಂಕ್ನಿಂದ ಬಡ್ಡಿಯನ್ನು ಪಾವತಿಸಲಾಗುತ್ತದೆ. ಕೆಲವು ಬ್ಯಾಂಕುಗಳು ಪ್ರತಿ ತಿಂಗಳು, ಕೆಲವು ಮೂರು, ಕೆಲವು ಆರು ತಿಂಗಳು ಅಥವಾ ವಾರ್ಷಿಕವಾಗಿ ಬಡ್ಡಿಯನ್ನು ಪಾವತಿಸುತ್ತವೆ.
ಮತ್ತೊಂದೆಡೆ, ಉದ್ಯಮಿಗಳು ಚಾಲ್ತಿ ಖಾತೆ (Current Account) ಗಳನ್ನು ಬಳಸುತ್ತಾರೆ. ನೌಕರಿಯಲ್ಲಿ ಇರುವವರು ಸಂಬಳ ಖಾತೆ ಹೊಂದಿರುತ್ತಾರೆ. ಇನ್ನು ಕಂಪೆನಿ ಇಲ್ಲವೇ ವ್ಯವಹಾರ ನಡೆಸುವವರು, ಇಲ್ಲವೇ ಒಟ್ಟಾಗಿ ದುಡಿದು ನೆಮ್ಮದಿಯ ಜೀವನ ನಡೆಸಲು ಹಣ ಕೂಡಿಡಲು ಗಂಡ ಹೆಂಡತಿ ಜಂಟಿ ಖಾತೆ ಬಳಸುತ್ತಾರೆ.
ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆಗಳನ್ನು ತೆರೆಯಬಹುದು?
ಆರ್ಬಿಐ (RBI) ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಇಚ್ಛೆಯಂತೆ ದೇಶದಲ್ಲಿ ಎಷ್ಟು ಖಾತೆಗಳನ್ನು ಬೇಕಾದರೂ ತೆರೆಯಬಹುದು. ನೀವು ತೆರೆದಿರುವ ಎಲ್ಲಾ ಬ್ಯಾಂಕ್ ಖಾತೆ (Bank Account) ಗಳನ್ನು ನೀವು ಟ್ರ್ಯಾಕ್ ಮಾಡಬೇಕು. ಖಾತೆ ತೆರೆದ ನಂತರ ಆ ಖಾತೆಗಳತ್ತ ಗಮನ ಹರಿಸದವರ ಖಾತೆಗಳಿಗೆ ಬ್ಯಾಂಕ್ ನಿಂದ ಶುಲ್ಕ ವಿಧಿಸಲಾಗುತ್ತದೆ. ಅಂತಹ ದಂಡವನ್ನು ತಪ್ಪಿಸಲು, ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ನೀವು ಕಾಳಜಿ ವಹಿಸಬೇಕು. ಹಾಗೂ ಎಲ್ಲ ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಕೂಡ ಯಾವಾಗಲೂ ಮೆಂಟೇನ್ ಮಾಡಬೇಕು.