Karnataka Times
Trending Stories, Viral News, Gossips & Everything in Kannada

K.J George: ಫ್ರಿ ವಿದ್ಯುತ್ ಬಳಸುತ್ತಿರುವ ರಾಜ್ಯದ ಜನತೆಗೆ ವಿದ್ಯುತ್ ಇಲಾಖೆಯಿಂದ ಅಧಿಕೃತ ಸಿಹಿಸುದ್ದಿ!

advertisement

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ (Gruha Jyothi)ಯೋಜನೆ ಕೂಡ ಒಂದಾಗಿದ್ದು ಜನತೆಗೆ ಉಚಿತ ವಿದ್ಯುತ್ ಸೌಲಭ್ಯ ಕೂಡ ದೊರಕುತ್ತಿದೆ. ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠವಾಗಿ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಅನ್ನು ನೀಡುವ ಯೋಜನೆ ಇದಾಗಿದೆ. ಆದ್ರೆ ಈ ಭಾರಿ ಜನತೆಯು ಬೇಕಾಬಿಟ್ಟಿ ಯಾಗಿ ವಿದ್ಯುತ್ ನ ಬಳಕೆ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಸಹ ಕೇಳಿಬಂದಿತ್ತು. ಹಾಗಾಗಿ ಹೆಚ್ಚುವರಿ ವಿದ್ಯುತ್ ಪಾವತಿಯ ಬಿಲ್ ಅನ್ನು ಗ್ರಾಹಕರೇ ಪಾವತಿ ಮಾಡಬೇಕು ಎನ್ನುವ ನಿಯಮ ಕೂಡ ಜಾರಿಗೆ ಬಂದಿತ್ತು. ಆದ್ರೆ ಈ ಬೇಸಿಗೆ ಸಂದರ್ಭದಲ್ಲಿ ಬಹಳಷ್ಟು ವಿದ್ಯುತ್ ಕೊರತೆ ಉಂಟಾಗಿ ಹಲವಷ್ಟು ರೈತರಿಗೆ ತೊಂದರೆ ಉಂಟಾಗಿತ್ತು. ರಾಜ್ಯದ ಎಲ್ಲೆಡೆಯೂ ಹೇಳಿದ್ದಕ್ಕಿಂತ ಹೆಚ್ಚಾಗಿಯೇ ಕರೆಂಟು ಕೈ ಕೊಟ್ಟಿದ್ದು, ವಿದ್ಯುತ್ ಉತ್ಪಾದನೆಯೂ ಬಹಳಷ್ಟು ಕುಂಠಿತವಾಗಿದೆ.

ಇಂಧನ ಸಚಿವ (K.J George)ರಿಂದ ಸ್ಪಷ್ಟನೆ:

ಈ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ (K.J George)ಗುಡ್ ನ್ಯೂಸ್ ನೀಡಿದ್ದು ಜನತೆಗೆ ಬೇಕಾದ ವಿದ್ಯುತ್ ಪೂರೈಕೆ ಕೈಗೊಳ್ಳಲು ಹೊಸ ಕ್ರಮವನ್ನು ಕೈಗೊಂಡಿದ್ದು, ರಾಜ್ಯದ ಯಾವುದೇ ವರ್ಗದ ಗ್ರಾಹಕರಿಗೆ ಲೋಡ್‌ ಶೆಡ್ಡಿಂಗ್‌ ಬಿಸಿ ತಟ್ಟದಂತೆ ಇಲಾಖೆ ಕ್ರಮ ವಹಿಸಿಕೊಂಡಿದೆ ಎಂದಿದ್ದಾರೆ. ವಿದ್ಯಾರ್ಥಿಗಳಿಗೆ ಈಗಾಗಲೇ ಪರೀಕ್ಷೆ ಆರಂಭ ವಾಗಿದ್ದು ಮಕ್ಕಳಿಗೆ ಓದಲು ಸಮಸ್ಯೆಯಾಗದಂತೆ ವಿದ್ಯುತ್‌ ಸರಿಯಾಗಿ ಪೂರೈಕೆ ಮಾಡುತ್ತಿದೆ. ಅದೇ ರೀತಿ ಕೃಷಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಯಾಗಬಾರದು ಎನ್ನುವ ನಿಟ್ಟಿನಲ್ಲಿ ಪಂಪ್‌ಸೆಟ್‌ಗಳಿಗೆ 7 ಘಂಟೆಯ ವರೆಗೆ ವಿದ್ಯುತ್‌ ಪೂರೈಕೆ ಮಾಡಲು ಆದೇಶ ಕೂಡ ನೀಡಲಾಗಿದೆ.

advertisement

ಈ ಕ್ರಮ ವಹಿಸಲಾಗಿದೆ

  • ಜನರ ಬೇಡಿಕೆಗೆ ಅನುಗುಣವಾಗಿ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಗರಿಷ್ಠ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು ಈ ಬಾರಿ ಮಳೆ ಅಭಾವದಿಂದ ಜಲಾಶಯಗಳು ಕೇವಲ ಅರ್ಧದಷ್ಟು ತುಂಬಿರುವ ಕಾರಣ ನೀರನ್ನು ಸಂರಕ್ಷಿಸಿ, ಬಹಳ ಎಚ್ಚರಿಕೆಯಿಂದ ಬಳಸಲಾಗುತ್ತಿದೆ.
  • ಅದೇ ರೀತಿ ರಾಜ್ಯದಾದ್ಯಂತ ಸಮರ್ಪಕ ವಿದ್ಯುತ್ ಸರಬರಾಜಿನ ಪೂರೈಕೆಯ ಮೇಲ್ವಿಚಾರಣೆಗೆ ಪ್ರತಿ ಜಿಲ್ಲೆಗೆ ಮುಖ್ಯ ಇಂಜಿನಿಯರ್ ಶ್ರೇಣಿಯ ಅಧಿಕಾರಿಗಳನ್ನು ಕೂಡ ನೇಮಕ ಮಾಡಲಾಗಿದೆ.
  • ಅದೇ ರೀತಿ‌ 370 ಮೆ.ವ್ಯಾಟ್ ಸಾಮರ್ಥ್ಯದ ಯಲಹಂಕ ಅನಿಲ ಸ್ಥಾವರದಲ್ಲಿ ಶೀಘ್ರದಲ್ಲೇ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ.
  • ವಿದ್ಯುತ್ ಉತ್ಪಾದನೆ ಮಾಡಲು ಈಗಾಗಲೇ ಕೆಲವೊಂದು ಕ್ರಮಗಳನ್ನು ಆಯ್ದುಕೊಂಡಿದ್ದು ಯಾವುದೇ ರೀತಿಯಲ್ಲಿ ವಿದ್ಯುತ್ ಕೊರತೆ ಯಾಗದಂತೆ ಕ್ರಮ ಕೈಗೊಳ್ಳಲಾಗಿದೆ

advertisement

Leave A Reply

Your email address will not be published.