Karnataka Times
Trending Stories, Viral News, Gossips & Everything in Kannada

Driving License: ಟ್ರಾಫಿಕ್ ನಲ್ಲಿಯೇ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಕೊಡಬೇಕು! ಬಂತು ಹೊಸ ರೂಲ್ಸ್

advertisement

ಕೇರಳದಲ್ಲಿ ಡ್ರೈವಿಂಗ್ ಲೈಸೆನ್ಸ್ (Driving License) ಪಡೆದುಕೊಳ್ಳುವುದು ಈಗ ಮತ್ತಷ್ಟು ಕಷ್ಟವಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳುವುದಕ್ಕೆ ಮಾಡಬೇಕಾಗಿರುವ ಟೆಸ್ಟ್ ನಲ್ಲಿ ಇನ್ನಷ್ಟು ಕ್ಲಿಷ್ಟಕರ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ಬ್ಯುಸಿ ಟ್ರಾಫಿಕ್ ಇರುವಂತಹ ಪ್ರದೇಶದಲ್ಲಿ ಗಾಡಿಯನ್ನು ಚಲಾಯಿಸುವ ಮೂಲಕ ಟೆಸ್ಟ್ ಅನ್ನು ಸಾಬೀತುಪಡಿಸುವಂತಹ ಚಾಲೆಂಜ್ ಈಗ ಅಭ್ಯರ್ಥಿಗಳ ಮೇಲೆ ಇರುತ್ತದೆ. ಕೇವಲ ಇಷ್ಟು ಮಾತ್ರವಲ್ಲದ ಇನ್ನಷ್ಟು ಬದಲಾವಣೆಗಳನ್ನು ಜಾರಿಗೆ ತರಲಾಗಿದೆ.

ಯಾವುದು ಆ ಹೊಸ ಡ್ರೈವಿಂಗ್ ನಿಯಮ?

 

Image Source: SSH Self Drive

 

ಮೋಟಾರ್ ವೆಹಿಕಲ್ ಡಿಪಾರ್ಟ್ಮೆಂಟ್ ಹೊಸದಾಗಿ ಜಾರಿಗೊಳಿಸುವಂತಹ ನಿಯಮಗಳ ಪ್ರಕಾರ ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ (Driving License) ಗೆ ಅರ್ಜಿ ಹಾಕುವವರು ನಿಜವಾಗಿಯೂ ಬ್ಯುಸಿಯಾಗಿರುವಂತಹ ರೋಡ್ಗಳಲ್ಲಿ ವಾಹನವನ್ನು ಚಲಾಯಿಸುವ ಮೂಲಕ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಅನ್ನು ನೀಡಬೇಕಾಗಿದೆ ಎನ್ನುವಂತಹ ನಿಯಮವನ್ನು ಜಾರಿಗೆ ತಂದಿದೆ.

ಈ ಸಂದರ್ಭದಲ್ಲಿ ಆಂಗ್ಯುಲರ್ ಪಾರ್ಕಿಂಗ್, ಪ್ಯಾರಲಲ್ ಪಾರ್ಕಿಂಗ್, ಜಿಗ್ ಜಾಗ್ ಡ್ರೈವಿಂಗ್ ಅಂತಹ ಸಾಕಷ್ಟು ಟೆಸ್ಟ್ ಗಳನ್ನು ಈ ಸಂದರ್ಭದಲ್ಲಿ ಅರ್ಜಿದಾರರಿಗೆ ಮಾಡಿಸಲಿದೆ. ಇದಕ್ಕಿಂತ ಮುಂಚೆ H ಟೆಸ್ಟ್ ನಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಮುಂಚೆ ಗ್ರೇಡಿಯಂಟ್ ಟೆಸ್ಟ್ ಅನ್ನು ಪಾಸ್ ಮಾಡಬೇಕಾಗಿರುತ್ತದೆ.

ಇದು ಕೇವಲ ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸುವವರಿಗೆ ಮಾತ್ರವಲ್ಲದೆ ತಮ್ಮ ಡ್ರೈವಿಂಗ್ ಲೈಸೆನ್ಸ್ (Driving License) ಅನ್ನು ನವೀಕರಣ ಮಾಡಿಸಿಕೊಳ್ಳುವವರಿಗು ಕೂಡ ಅನ್ವಯಿಸುತ್ತದೆ. 15 ವರ್ಷಕ್ಕಿಂತ ಹಳೆಯದಾಗಿರುವಂತಹ ಕಾರುಗಳಲ್ಲಿ ಕೂಡ ಡ್ರೈವಿಂಗ್ ಟೆಸ್ಟ್ ಮಾಡುವ ಹಾಗಿಲ್ಲ ಅನ್ನುವ ನಿಯಮವನ್ನು ಕೂಡ ಜಾರಿಗೆ ತರಲಾಗಿದೆ.

advertisement

ಎಲೆಕ್ಟ್ರಿಕ್ ಹಾಗೂ ಆಟೋಮ್ಯಾಟಿಕ್ ಕಾರ್ ಗಳನ್ನು ಕೂಡ ಟೆಸ್ಟ್ ಗೆ ಬಳಸುವಂತಿಲ್ಲ:

ದ್ವಿಚಕ್ರ ವಾಹನದಲ್ಲಿ ಟೆಸ್ಟಿಂಗ್ ಗಾಗಿ 95 ಸಿಸಿ ಇಂಜಿನಿಗಿಂತ ಹೆಚ್ಚಿನ ಸಾಮರ್ಥ್ಯ ಇರುವಂತಹ ದ್ವಿಚಕ್ರ ವಾಹನಗಳನ್ನು ಮಾತ್ರ ಟೆಸ್ಟ್ಗೆ ಬಳಸಿಕೊಳ್ಳಬಹುದಾಗಿದೆ. ಇನ್ನು ಕಾರುಗಳಲ್ಲಿ ಕೂಡ ಆಟೋಮೆಟಿಕ್ ಹಾಗೂ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಟೆಸ್ಟಿಂಗ್ ನಲ್ಲಿ ಮಾಡುವ ಹಾಗಿಲ್ಲ. ಹೀಗಾಗಿ ವಾಹನದಲ್ಲಿ ಡ್ಯಾಶ್ ಬೋರ್ಡ್ ಕ್ಯಾಮರಾ ಹಾಗೂ ಜಿಪಿಎಸ್ ಟ್ರಾಕಿಂಗ್ ಸಿಸ್ಟಮ್ (GPS Tracking System) ಅನ್ನು ವಾಹನದಲ್ಲಿ ಅಳವಡಿಸುವುದು ಅನಿವಾರ್ಯವಾಗಿದೆ. ಇವುಗಳ ಮೂರು ತಿಂಗಳುಗಳ ರೆಕಾರ್ಡಿಂಗ್ ಕಾರಣಕ್ಕಾಗಿ ಮೆಮೊರಿ ಕಾರ್ಡ್ ಅನ್ನು ಕೂಡ ತಮ್ಮ ಬಳಿ ಇಟ್ಟುಕೊಳ್ಳಬೇಕಾಗುತ್ತದೆ.

ಇದರ ಬಗ್ಗೆ ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ ಹೇಳಿರುವುದು ಏನು?

 

Image Source: Telegraph India

 

ಇತ್ತೀಚಿಗಷ್ಟೇ ಈ ವಿಚಾರದ ಬಗ್ಗೆ ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ (Driving School Association) ರವರು ವಿರೋಧ ಮಾಡಿ ಹೈಕೋರ್ಟ್ ನಲ್ಲಿ ಕೂಡ ಪ್ರಕರಣವನ್ನು ದಾಖಲಿಸಿದ್ದರು ಕೋರ್ಟ್ ಈಗ ಈ ಪ್ರಕರಣವನ್ನು ಬರ್ಕಾಸ್ತು ಮಾಡಿದೆ. INTUC, CITU, ಹಾಗೂ ಕೇರಳ ರಾಜ್ಯದ ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ ಈ ಹೊಸ ನಿಯಮದ ಬಗ್ಗೆ ಸಂಪೂರ್ಣವಾಗಿ ಇದರ ವಿರೋಧವನ್ನು ಮಾಡುವಂತ ಕೆಲಸವನ್ನು ಮಾಡಿದೆ.

ಕೇವಲ ಈ ವಿಚಾರವನ್ನು ಬಹಿಷ್ಕಾರ ಮಾಡೋದು ಮಾತ್ರವಲ್ಲದೆ ಇದರ ವಿರುದ್ಧ ಪ್ರತಿಭಟನೆಯನ್ನು ಕೂಡ ಮಾಡಲಾಗಿದೆ. ಕೇರಳ ರಾಜ್ಯದಲ್ಲಿ ಬಂದಿರುವಂತಹ ಈ ನಿಯಮ ಮುಂದಿನ ದಿನಗಳಲ್ಲಿ ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ಜಾರಿಗೆ ಬಂದರೂ ಕೂಡ ಆಶ್ಚರ್ಯ ಪಡಬೇಕಾದ ಅಗತ್ಯ ಇಲ್ಲ.

advertisement

Leave A Reply

Your email address will not be published.