Karnataka Times
Trending Stories, Viral News, Gossips & Everything in Kannada

Fixed Deposit: ಈ ಬ್ಯಾಂಕಿನ FD ಯಲ್ಲಿ ಹಣ ಹೂಡಿಕೆ ಮಾಡಿದರೆ 9.10% ಬಡ್ಡಿ ದರ!

advertisement

ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ ಗಳಲ್ಲಿ ಲಭ್ಯವಿರುವಂತಹ ಎಫ್ ಡಿ ಯೋಜನೆಗಳಲ್ಲಿ (Fixed Deposit Schemes) ಹಣ ಹೂಡಿಕೆ ಮಾಡಿದರೆ ನಮ್ಮ ಹಣಕ್ಕೆ ಸಂಪೂರ್ಣ ಸುರಕ್ಷತೆಯ ಜೊತೆಗೆ ಹೆಚ್ಚಿನ ಗ್ಯಾರಂಟಿ ರಿಟರ್ನ್ಸ್ ಕೂಡ ದೊರಕುತ್ತದೆ. ಇದಲ್ಲದೆ ಯಾವುದೇ ಕಾರಣಕ್ಕೂ ಮೋಸ ಹೋಗುವಂತಹ ಭಯವೂ ಇರುವುದಿಲ್ಲ. ಹೀಗಿರುವಾಗ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ (Senior Citizen Will Get More Interest) ಹಣವನ್ನು ನೀಡುವ ವಿಶೇಷ ಯೋಜನೆ ಒಂದರ ಕುರಿತು ಮಾಹಿತಿ ತಿಳಿಸಲಿದ್ದೇವೆ. ಈ ಎಫ್ ಡಿ ಯಲ್ಲಿ 5 ಲಕ್ಷ ಹಣವನ್ನು ಹೂಡಿಕೆ ಮಾಡಿದರೆ 98,585 ಹಣವನ್ನು ಲಾಭದ ರೀತಿ ಪಡೆಯಬಹುದು.

5 ಲಕ್ಷ ಹೂಡಿಕೆ ಮಾಡಿ 98,585 ಲಾಭ ಪಡೆಯಿರಿ:

ಉತ್ಕರ್ಷ್ ಸಣ್ಣ ಹಣಕಾಸು ಬ್ಯಾಂಕ್ ರೈತರ ಅನುಕೂಲಕ್ಕೆ ತಕ್ಕನಾದ ಫಿಕ್ಸೆಡ್ ಡೆಪಾಸಿಟ್ ಯೋಜನೆಯನ್ನು (Fixed Deposit Scheme) ಜಾರಿಗೆ ತಂದಿದ್ದು, ಈ ಯೋಜನೆಯಲ್ಲಿ ರೈತರು 5 ಲಕ್ಷ ಹಣವನ್ನು ಎರಡು ವರ್ಷಗಳ ಕಾಲ ಹೂಡಿಕೆ ಮಾಡಿದರೆ ಸಾಕು ಮೆಚುರಿಟಿ ಪಿರಿಯಡ್ ನಲ್ಲಿ 9.10% ಬಡ್ಡಿ ದರದ ಮೇಲೆ 98,585 ಹಣವನ್ನು ಲಾಭದ ರೀತಿ ಹಿಂಪಡೆಯಬಹುದು.

 

Image Source: The NFA Post

 

ಹೌದು ಸ್ನೇಹಿತರೆ ಉತ್ಕರ್ಷ ಸಣ್ಣ ಹಣಕಾಸು ಬ್ಯಾಂಕ್ (Utkarsh Small Finance Bank) ಎರಡು ಕೋಟಿಗಿಂತ ಕಡಿಮೆ ಬೆಲೆಯ ಹೂಡಿಕೆ ಮೇಲಿನ ಇಂಟರೆಸ್ಟ್ ರೇಟ್ ಅನ್ನು ಬದಲಿಸಿದ್ದು, ಇದರ ಸಂಪೂರ್ಣ ಮಾಹಿತಿಯನ್ನು ಮೇ 1, 2024 ರಂದು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಹಂಚಿಕೊಂಡಿದೆ.

advertisement

8.5%-9.10% ಇಂಟರೆಸ್ಟ್:

ಉತ್ಕರ್ಷ ಸಣ್ಣ ಹಣಕಾಸು ಬ್ಯಾಂಕ್ ನಲ್ಲಿ ಸಾಮಾನ್ಯ ನಾಗರಿಕರು (General Citizen) ತಮ್ಮ ಹಣವನ್ನು 7 ದಿನಗಳಿಂದ 10 ವರ್ಷಗಳವರೆಗೆ ಹೂಡಿಕೆ ಮಾಡಿದರೆ 4%- 8.50% ವರೆಗಿನ ಬಡ್ಡಿ ದರದ ಮೇಲೆ ಲಾಭವನ್ನು ನೀಡಲಾಗುತ್ತದೆ.

 

Image Source: The New Indian Express

 

ಉದಾಹರಣೆಗೆ 60 ವರ್ಷಕ್ಕಿಂತ ಕೆಲ ವಯಸ್ಸಿನ ವ್ಯಕ್ತಿಯು ತನ್ನ 5 ಲಕ್ಷ ಹಣವನ್ನು ಉತ್ಕರ್ಷ ಬ್ಯಾಂಕಿನಲ್ಲಿ Fixed Deposit ಮಾಡಿ 3 ವರ್ಷಗಳ ಕಾಲ ಇಟ್ಟಲ್ಲಿ 8.50% ಬಡ್ಡಿ ಆಧಾರದ ಮೇಲೆ ಮೆಚುರಿಟಿ ಪಿರಿಯಡ್ನಲ್ಲಿ ಹೂಡಿಕೆ ಮೇಲಿನ ಲಾಭವನ್ನು ನೀಡಲಾಗುತ್ತದೆ. ಅದರಂತೆ ಹಿರಿಯ ನಾಗರಿಕರು (Senior Citizen) ಗರಿಷ್ಠ ಮೊತ್ತದ ಹಣವನ್ನು ಹೂಡಿಕೆ ಮಾಡಿದರೆ 4.6 ರಿಂದ 9.10% ಬಡ್ಡಿ ಆಧಾರದ ಮೇಲೆ ಲಾಭವನ್ನು ನೀಡಲಾಗುತ್ತದೆ. ಅಂದ್ರೆ 5 ಲಕ್ಷ ರೂಪಾಯಿ ಹಣವನ್ನು ಎರಡು ವರ್ಷಗಳ ಕಾಲ 9.10% ನಿಗದಿತ ಬಡ್ಡಿ ಆಧಾರದ ಮೇಲೆ ಹೂಡಿಕೆ ಮಾಡಿದರೆ ಒಟ್ಟು ₹5,98,585 ಹಣವನ್ನು ಹಿಂಪಡೆಯಬಹುದು.

ಮೆಚುರಿಟಿ ಪಿರಿಯಡ್ಗಿಂತ ಮುಂಗಡವಾಗಿ ಹಣವನ್ನು ಹಿಂಪಡೆಯುವ ಅವಕಾಶ

ಉತ್ಕರ್ಷ ಸಣ್ಣ ಹಣಕಾಸು ಬ್ಯಾಂಕ್ನಲ್ಲಿ ನಿಗದಿತ ಅವಧಿಯವರೆಗೂ ಎಫ್ ಡಿ ಮಾಡಿ ಹೂಡಿಕೆ ಮಾಡಿರುವ ಗ್ರಾಹಕರು ತುರ್ತು ಸಮಯದಲ್ಲಿ ತಮ್ಮ ಹಣವನ್ನು ಹಿಂಪಡೆಯಬಹುದು. ಮೆಚುರಿಟಿ ಪಿರಿಯಡ್ಗಿಂತ ಮುಂಗಡವಾಗಿ (Premature Period) ಹೂಡಿಕೆದಾರರು ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ಬ್ಯಾಂಕ್ ಒದಗಿಸಿ ಕೊಡುತ್ತಿದೆ ಆದರೆ ದಂಡದ ರೀತಿ ನಿಗದಿತ ಬಡ್ಡಿ ದರದಲ್ಲಿ 1% ಬಡ್ಡಿದರವನ್ನು ಕಡಿತಗೊಳಿಸಲಾಗುತ್ತದೆ.

advertisement

Leave A Reply

Your email address will not be published.