Karnataka Times
Trending Stories, Viral News, Gossips & Everything in Kannada

BSNL: ಅಂಬಾನಿಗೆ ಆಘಾತ ನೀಡಲಿರುವ BSNL! ಆಗಸ್ಟ್ ನಲ್ಲಿ ಹೊಸ ಘೋಷಣೆ.

advertisement

ಭಾರತದ ಟೆಲಿಕಾಂ ಇಂಡಸ್ಟ್ರಿಯಲ್ಲಿ ಮುಕೇಶ್ ಅಂಬಾನಿ ಅವರ ಒಡೆತನದಲ್ಲಿರುವಂತಹ ರಿಲಯನ್ಸ್ ನ ಜಿಯೋ ಸಂಸ್ಥೆ ಕಾಲಿಟ್ಟ ನಂತರದಿಂದ ಭಾರತದ ಟೆಲಿಕಾಂ ಇಂಡಸ್ಟ್ರಿಯ ರೂಪವೇ ಬದಲಾಗಿದೆ ಅಂತ ಹೇಳಬಹುದಾಗಿದೆ. ಸಾಕಷ್ಟು ವರ್ಷಗಳ ಹಿಂದೆ ಹೋದರೆ ಸಿಮ್ ಕಂಪನಿಗಳ ರಿಚಾರ್ಜ್ ಪ್ಲಾನಿನ ಬೆಲೆ ಸಾಕಷ್ಟು ಅಧಿಕವಾಗಿತ್ತು. ಆದರೆ ಈಗ ಅವುಗಳ ಬೆಲೆ ಹಾಗೂ ಸರ್ವಿಸ್ ಎರಡು ಕೂಡ ಈ ಹಿಂದೆ ಹೋಲಿಸಿದರೆ ಇನ್ನೂ ಚೆನ್ನಾಗಾಗಿದೆ ಅಂದ್ರೆ ಅದಕ್ಕೆ ಕಾರಣ ಖಂಡಿತವಾಗಿ ಜಿಯೋ (Jio)ಅನ್ನೋದನ್ನ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

Jio ಭಾರತದ ಟೆಲಿಕಾಂ ಇಂಡಸ್ಟ್ರಿಯ ಭವಿಷ್ಯ ಬದಲಾಯಿಸಿದಂತಹ ಸಂಸ್ಥೆ ಅನ್ನೋದ್ರಲ್ಲಿ ಕೂಡ ಯಾವುದೇ ಅನುಮಾನವಿಲ್ಲ. ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಟೆಲಿಕಾಂ ಸೇವೆಗಳನ್ನು ನೀಡುತ್ತಾ ಬಂದಿರುವಂತಹ ಈ ಸಂಸ್ಥೆ ಸದ್ಯದ ಮಟ್ಟಿಗೆ ಭಾರತದ ಟೆಲಿಕಾಂ ಇತಿಹಾಸವನ್ನು ನೋಡೋದಾದ್ರೆ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಕಂಪನಿಯಾಗಿದೆ. ಈ ಕಂಪೆನಿಗಿಂತ ಮುಂಚೆ ಭಾರತ ದೇಶದಲ್ಲಿ ಸಾಕಷ್ಟು ಕಂಪನಿಗಳು ಇದ್ದರೂ ಕೂಡ ತಾನು ಬಂದ ನಂತರ ಹೆಚ್ಚಿದ ಗ್ರಾಹಕರನ್ನು ಸೆಳೆಯೋದಕ್ಕೆ ಯಶಸ್ವಿಯಾಗಿದೆ.

ಆದರೆ ಈಗ ಕೇಳಿ ಬರುತ್ತಿರುವಂತಹ ಹೊಸ ಮಾಹಿತಿ ಪ್ರಕಾರ Jio ಸಂಸ್ಥೆಗೆ ಟಕ್ಕರ್ ನೀಡೋದಕ್ಕೆ ಭಾರತದ ಸರ್ಕಾರಿ ಟೆಲಿಕಾಂ ಕಂಪನಿ ಆಗಿರುವಂತಹ BSNL ಸಜ್ಜಾಗಿದೆ ಎಂಬುದಾಗಿ ತಿಳಿದು ಬಂದಿದೆ. ಮಾಹಿತಿ ಬಗ್ಗೆ ಸಂಪೂರ್ಣ ವಿವರವನ್ನು ಪಡೆದುಕೊಳ್ಳೋಣ.

advertisement

BSNL ನಿಂದ ಮುಕೇಶ್ ಅಂಬಾನಿಗೆ ಸಿಕ್ಕಿದೆ ನೋಡಿ, ಬ್ಯಾಡ್ ನ್ಯೂಸ್!

 

Image Source: 91 Mobiles

 

ಆಗಸ್ಟ್ ತಿಂಗಳಿನಲ್ಲಿ ಭಾರತದಾದ್ಯಂತ BSNL ಸಂಸ್ಥೆ ತನ್ನ ಗ್ರಾಹಕರಿಗೆ 4G ಸರ್ವಿಸ್ ಅನ್ನು ಲಾಂಚ್ ಮಾಡೋದಕ್ಕೆ ಹೊರಟಿದೆ. ಸದ್ಯದ ಮಟ್ಟಿಗೆ ಕಡಿಮೆ ಬೆಲೆಯಲ್ಲಿ ಸರ್ವಿಸ್ ನೀಡುವಂತಹ ಟೆಲಿಕಾಂ ಕಂಪನಿಗಳಲ್ಲಿ BSNL ಕೂಡ ಒಂದಾಗಿದೆ. ಬೇರೆ ನೆಟ್ವರ್ಕ್ ಗಳಿಗಿಂತ ಇದು ನೆಟ್ವರ್ಕ್ ಸಿಗದೇ ಇರುವಂತಹ ಪ್ರದೇಶಗಳಲ್ಲಿ ಕೂಡ ಜನರಿಗೆ ನೆಟ್ವರ್ಕ್ ಅನ್ನು ಒದಗಿಸುವಂತಹ ಕೆಲಸವನ್ನು ಮಾಡುತ್ತಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಈ ಹೊಸ ಸರ್ವಿಸ್ ಲಾಂಚ್ ಮೂಲಕ BSNL ಸಂಸ್ಥೆ ಅತ್ಯಂತ ಸ್ಪೀಡ್ ನೆಟ್ವರ್ಕ್ ಅನ್ನು ನೀಡುವಂತಹ ಸಂಸ್ಥೆಯ ರೂಪದಲ್ಲಿ ಕಾಣಿಸಿಕೊಳ್ಳಲಿದೆ.

BSNL ಅಧಿಕಾರಿಗಳು ತಮ್ಮ 4G ನೆಟ್ವರ್ಕ್ ಅನ್ನು ಟೆಸ್ಟ್ ಮಾಡಿದ್ದು ಪ್ರತಿ ಸೆಕೆಂಡಿಗೆ 40 ರಿಂದ 45 ಮೆಗಾ ಬಿಟ್ ಇಂಟರ್ನೆಟ್ ಅನ್ನು ಒದಗಿಸುವಂತಹ ಸಾಮರ್ಥ್ಯವನ್ನ ಹೊಂದಿದೆ ಅನ್ನೋದಾಗಿ ಸಾಬೀತಾಗಿದೆ. ಖಂಡಿತವಾಗಿ ಇದು ಮಾರುಕಟ್ಟೆಯಲ್ಲಿ ಜಿಯೋ ಸಂಸ್ಥೆಗೆ ದೊಡ್ಡ ಮಟ್ಟದಲ್ಲಿ ಕಾಂಪಿಟೇಶನ್ ಇಡುವುದರಲ್ಲಿ ಯಾವುದೇ ಅನುಮಾನವಿಲ್ಲ ಹಾಗೂ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಜಿಯೋ ಸಂಸ್ಥೆಯ ಗ್ರಾಹಕರನ್ನ ತನ್ನ ಕಡೆಗೆ ಸೆಳೆದುಕೊಳ್ಳುವಲ್ಲಿ BSNL ಸಂಸ್ಥೆ ಯಶಸ್ವಿಯಾಗಲಿದೆ.

advertisement

Leave A Reply

Your email address will not be published.