Karnataka Times
Trending Stories, Viral News, Gossips & Everything in Kannada

Land Records: ಈ 7 ದಾಖಲೆ ನಿಮ್ಮ ಬಳಿ ಇದ್ದರೆ ಆ ಜಮೀನು/ಆಸ್ತಿ ನಿಮ್ಮದ್ದೇ! ಬದಲಾಯ್ತು ನಿಯಮ, ಬಡವರಿಗೆ ಗುಡ್ ನ್ಯೂಸ್

advertisement

Land Records in India: ಜಮೀನು ಆಸ್ತಿ ಇತ್ಯಾದಿ ವಿಚಾರ ವಾಗಿ ಇಂದು ಸ್ವಂತ ಅಣ್ಣ ತಮ್ಮ,ಅಕ್ಕ ತಂಗಿಯರ ನಡುವೆಯೇ ಜಗಳ ಆಗುವುದನ್ನು ನಾವು ದಿನ ನಿತ್ಯ ಜೀವನದಲ್ಲಿ ಕೇಳುತ್ತಿದ್ದೇವೆ. ಹಿಂದೆ ಆಸ್ತಿ ವಿಚಾರವಾಗಿ ಆಸಕ್ತಿ ಇದ್ದದ್ದು ಕಡಿಮೆ.‌ ಆಸಕ್ತಿ ಇದ್ದರೂ ಜಗಳ ಇತ್ಯಾದಿ ಆಗುತ್ತಿರಲಿಲ್ಲ. ಆದರೆ ಇಂದು ಆಸ್ತಿಗೆ ಹೆಚ್ಚು ಬೇಡಿಕೆ ಇರುವುದರಿಂದ ತಮಗೂ ಆಸ್ತಿ ಪಾಲು ಬೇಕು. ತಮಗೂ ಹಕ್ಕಿದೆ ಎಂದು ಜಗಳಕ್ಕೆ ಇಳಿಯುವವರೇ ಹೆಚ್ಚು. ಇನ್ನು ಆಸ್ತಿ ನಿಮ್ಮದೇ ಎಂದು ಸಾಬೀತು ಆಗಲು ಜಮೀನಿನ ದಾಖಲಾತಿ, ಮೂಲ ಮಾಹಿತಿಗಳು ಸರಿಯಾಗಿ‌ ಇದ್ದರೆ ನಿಮಗೆ ಅನುಕೂಲ ಆಗಲಿದೆ.

ದಾಖಲಾತಿ ಇರಬೇಕು
ನಿಮ್ಮಲ್ಲಿ ಆಸ್ತಿ ಇದೆ ಎಂದರೆ ಆದರ ಹಕ್ಕು ಕೂಡ ನಿಮ್ಮದಾಗಬೇಕು, ಅದರ ಸ್ವಾದೀನತೆ ಪಡೆದುಕೊಂಡಿರ ಬೇಕು. ನಿಮ್ಮ ಜಮೀನಿನ ಪಹಣಿ ಪತ್ರದಲ್ಲಿ ನಿಮ್ಮ ಹೆಸರು ಇಲ್ಲ, ಇದ್ದರೂ ಇತರ ಮಕ್ಕಳ ಹೆಸರು ಕೂಡ ಇದೆ ಎಂದರೆ ಸಾಧ್ಯ ಇಲ್ಲ.ಅವರಿಗೂ ಆಸ್ತಿ ಹಂಚಿಕೆ ಮಾಡಬೇಕು. ಹಾಗಾಗಿ ನಿಮ್ಮ ಬಳಿ ಕೆಲವೊಂದು ಅಗತ್ಯ ದಾಖಲಾತಿ ಇದ್ದರೆ ಆ ಜಮೀನು ನಿಮ್ಮ ಹೆಸರಿಗೆ ಇರಲಿದೆ. ಹಾಗಾದರೆ ಜಮೀನು ನಿಮ್ಮದೇ ಎಂದು ಖಾತ್ರಿ ಪಡಿಸಲು ದಾಖಲಾತಿ ಯಾವುದೆಲ್ಲ ಬೇಕು. ನೀವು ನಿಮ್ಮ ಹೆಸರಿಗೆ ಜಮೀನು ಹೇಗೆ ಪಡೆಯಬಹುದು ಎನ್ನುವ ಮಾಹಿತಿ ಇಲ್ಲಿದೆ.

advertisement

ಆಸ್ತಿ ದಾಖಲೆ ಇಲ್ಲ ಎಂದಾದರೆ ಆಸ್ತಿ ನಿಮ್ಮದಾಗಲ್ಲ.‌ ಇಂತಹ ವಿಚಾರಗಳೆ ನಿಮ್ಮ ಕುಟುಂಬದ ನಡುವೆ ಆಸ್ತಿ ಜಗಳ ಆಗಲು ಮುಖ್ಯ ಕಾರಣ ಆಗಲಿದೆ. ಹಾಗಾಗಿ ನಿಮ್ಮದೆ ಆಸ್ತಿ ಎಂದು ಹೇಳಲು ಈ ದಾಖಲೆ ಬೇಕು.

ಈ ದಾಖಲೆ ಬೇಕು
*ನಿಮ್ಮ ಬಳಿ ಕೃಷಿ ಭೂಮಿ ಅಥವಾ ಇತರ ಭೂಮಿ ಇದೆ ಎಂದು ಸಾಬೀತು ಮಾಡಲು ಸರ್ವೇ ನಕ್ಷೆ ಪಡೆದಿರಬೇಕು.
*ಅದೇ ರೀತಿ ಆಸ್ತಿಗೆ ಸಂಬಂಧಿಸಿದ ಟ್ಯಾಕ್ಸ್ ಪಾವತಿ ರಶೀದಿ ಬಿಲ್ ಗಳು ತೆಗೆದು ಇಡಬೇಕು.
*encumbrance certificate ಮುಖ್ಯವಾಗಿ ಬೇಕು.
*Mutation registration extract
*ಅದೇ ರೀತಿ NOC ಸರ್ಟಿಫಿಕೇಟ್.
*ಜನರಲ್ ಪವರ್ ಆಫ್ ಅಟಾರ್ನಿ ಹೊಂದಿರಬೇಕು.
*Occupation certificate
*ಪ್ರೊಸೆಶನ್ ಲೆಟರ್ ಇತ್ಯಾದಿ ಬೇಕು.

ನಕಲಿ ದಾಖಲೆಗಳು ಹೆಚ್ಚಳ
ಇತ್ತೀಚಿನ ದಿನದಲ್ಲಿ ಭೂಮಿ ಮಾರಾಟ ಮಾಡಲು ನಕಲಿ ದಾಖಲಾತಿ ಸೃಷ್ಟಿಸಿ ಮಾರಾಟ ಮಾಡುವ ಸನ್ನಿವೇಶ ಗಳು ಹೆಚ್ಚಾಗುತ್ತ ಇದೆ. ನಕಲಿ ದಾಖಲಾತಿ ಸೃಷ್ಟಿ ಮಾಡಿ ಭೂಮಿ ಕಬ್ಜ ಮಾಡಿ‌ ಮಾರಾಟ ಮಾಡುತ್ತಾರೆ.ಆಸ್ತಿ ಪಡೆದುಕೊಂಡವರು ಬಳಿಕ ತೊಂದರೆಗೆ ಸಿಲುಕುತ್ತಾರೆ. ಹಾಗಾಗಿ ಆಸ್ತಿಗೆ ಸಂಬಂಧಿಸಿದ ದಾಖಲೆಯನ್ನು ನೀವು ಸುರಕ್ಷಿತವಾಗಿ ಇಟ್ಟುಕೊಂಡಲ್ಲಿ ಯಾವುದೇ ಸಮಸ್ಯೆ ಇಲ್ಲ.

advertisement

Leave A Reply

Your email address will not be published.