Karnataka Times
Trending Stories, Viral News, Gossips & Everything in Kannada

Digital Payment: ದೇಶಾದ್ಯಂತ ಇನ್ಮೇಲೆ ಗೂಗಲ್ ಪೇ, ಹಾಗೂ ಫೋನ್ ಪೇ ಬಳಸುವವರಿಗೆ ಕಹಿಸುದ್ದಿ! ಕೇಂದ್ರದ ಈ ನಿರ್ಧಾರ ಶೀಘ್ರದಲ್ಲೇ

advertisement

ಇತ್ತೀಚಿನ ದಿನದಲ್ಲಿ ಡಿಜಿಟಲ್ ಪೇಮೆಂಟ್ (Digital Payment) ಆ್ಯಪ್ ಅನ್ನು ಬಳಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಸಣ್ಣ ಪುಟ್ಟ ಕಿರಾಣಿ ಅಂಗಡಿಯಿಂದ ದೊಡ್ಡ ದೊಡ್ಡ ವ್ಯವಹಾರದ ವರೆಗೂ ಕೂಡ ಈಗ ಡಿಜಿಟಲ್ ಪೇಮೆಂಟ್ ಬಹಳ ಪ್ರಾಮುಖ್ಯತೆ ಪಡೆದಿದೆ. ಇದರಿಂದಾಗಿ ಚಿಲ್ಲರೆ ಸಮಸ್ಯೆ ಬರುತ್ತಿಲ್ಲ ಅದರ ಜೊತೆಗೆ ಹಣವನ್ನು ಸುಲಭವಾಗಿ ವರ್ಗಾಯಿಸಲು ಈ ಯೋಜನೆ ಬಹಳ ಸಹಕಾರಿ ಆಗಿದೆ ಎನ್ನಬಹುದು. ಆದರೆ ಈಗ ಡಿಜಿಟಲ್ ಪೇಮೆಂಟ್ ಮೇಲೆ NPCI ಹೊಸ ನಿರ್ಬಂಧ ಹೇರಲು ಮುಂದಾಗಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಡಿಜಿಟಲ್ ಪೇಮೆಂಟ್ (Digital Payment) ಪ್ರಕ್ರಿಯೆಗಾಗಿ ಗ್ರಾಹಕರಿಗೆ ಅನೇಕ ಆಯ್ಕೆ ಸಿಗಲಿದೆ ಎನ್ನಬಹುದು. ಗೂಗಲ್ ಪೇ (Google pay), ಪೇಟಿಎಂ (Paytm), ಫೋನ್ ಪೇ (PhonePe), ಭೀಮ್ (BHIM)ಹಾಗೂ ಇತರ ಕಂಪೆನಿಯ ಪೇಮೆಂಟ್ ಆ್ಯಪ್ ಕೂಡ ಸೇರಿದೆ ಎನ್ನಬಹುದು. ಹಾಗಾಗಿ ಡಿಜಿಟಲ್ ಪೇ ಮಾಡುವವರು ಈ ವಿಚಾರವನ್ನು ಸಂಪೂರ್ಣ ಓದುವುದು ಅತ್ಯವಶ್ಯಕವಾಗಿದೆ.

Image Source: Zoom News

ಯಾವುದು ಈ ಮಿತಿ?

National Payment Corporation Of India ಡಿಜಿಟಲ್ ಪೇಮೆಂಟ್ ಸಿಸ್ಟಮ್ ಮೇಲೆ ಹದ್ದಿನ ಕಣ್ಣು ಇಟ್ಟಿದ್ದು ಯಾವುದೆ ಅವ್ಯವಸ್ಥೆ ಬರದಂತೆ ಅಗತ್ಯ ಕ್ರಮ ಆಗಾಗ ಕಂಡುಕೊಳ್ಳುತ್ತದೆ. ಹಾಗಾಗಿ ಇತ್ತೀಚೆಗಷ್ಟೇ KYC ನಿಯಮ ಉಲ್ಲಂಘನೆ ಕಾರಣಕ್ಕೆ ಪೇಟಿಎಂ ಪೇಮೆಂಟ್ ಆ್ಯಪ್ ಮೇಲೆ ತೀವ್ರ ತರನಾದ ನಿರ್ಬಂಧ ವಿಧಿಸಿದೆ. ಹಾಗಾಗಿ ಈಗ ಉಳಿದ ಆ್ಯಪ್ ಗಳ ಮಿತಿ ಮೀರಿದ ಕೆಲ ವ್ಯವಹಾರ ಕಂಡು ಬಂದಿದ್ದು ಅದರ ವಿರುದ್ಧ ಹೊಸ ವ್ಯವಸ್ಥೆ ನಿರ್ವಹಣೆಗೆ NPCI ಮುಂದಾಗಿದೆ.

advertisement

ಗೂಗಲ್ ಪೇ, ಫೋನ್ ಪೇ ಗೆ ಮಿತಿ ಹೇರಿಕೆ

ಇತ್ತೀಚಿನ ದಿನದಲ್ಲಿ ಅನೇಕ ಪೇಮೆಂಟ್ ಆ್ಯಪ್ ಜಾರಿಗೆ ಬಂದರೂ ಕೂಡ ಗೂಗಲ್ ಪೇ ಮತ್ತು ಫೋನ್ ಪೇ ಮೇಲೆ ಹೊಂದಿರುವ ಪ್ರಾಬಲ್ಯ ಅಧಿಕವಾಗೆ ಇದೆ ಹಾಗಾಗಿ ಈ ಎರಡು ಆ್ಯಪ್ ಮೇಲೆ NPCI ಮಿತಿವಿಧಿಸಲು ತೀರ್ಮಾನ ಕೈಗೊಂಡಿದೆ. ಪ್ರಸ್ತುತ ಅನಿಯಮಿತ ನಗದು ವ್ಯವಹಾರ ಅವಕಾಶ ಇದ್ದು ಮುಂದಿನ ದಿನದಲ್ಲಿ UPI ಪೇಮೆಂಟ್ ನಲ್ಲಿ ಇಂತಿಷ್ಟು ಮೊತ್ತ ಮಾತ್ರ ಗೂಗಲ್ ಪೆ, ಫೋನ್ ಪೇ ಬಳಕೆ ಮಾಡಬಹುದು ಎಂಬ ಮಿತಿ ಬರಲಿದ್ದು ಇದು ಅಭಿವೃದ್ಧಿಗೆ ಹಿನ್ನಡೆ ಆಗುವ ಸಾಧ್ಯತೆ ಕೂಡ ಇದೆ.

Image Source: Times Bull

ಉದ್ದೇಶ ಏನು?

UPI ವ್ಯವಹಾರದಲ್ಲಿ 80% ನಷ್ಟು ಗೂಗಲ್ ಪೇ ಹಾಗೂ ಫೋನ್ ಪೇ ತನ್ನ ಪ್ರಾಬಲ್ಯ ಹೊಂದಿದ್ದು ಈ ಬೆಳವಣಿಗೆ ಉಳಿದ ಅಪ್ಲಿಕೇಶನ್ ಬೆಳವಣಿಗೆಯನ್ನು ಕುಂಟಿತಗೊಳಿಸಲಿದೆ.ಅಲ್ಲದೆ ಮಿತಿ ಮೀರಿದ ಜನರ ಅಪ್ಲಿಕೇಶನ್ ಬಳಕೆಯಿಂದಾಗಿ PhonePe ಮತ್ತು Google pay ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಒಂದು ವೇಳೆ ಎರಡು ಆ್ಯಪ್ ಗಳು ಏಕಕಾಲಕ್ಕೆ ತಾಂತ್ರಿಕ ಸಮಸ್ಯೆ ಅನುಭವಿಸಿದರೆ ಅದು UPI ವ್ಯವಸ್ಥೆ ಕಳಪೆಗೆ ಕಾರಣವಾಗಲಿದೆ ಹಾಗಾಗಿ ಮುನ್ನೆಚ್ಚರಿಕೆ ಭಾಗವಾಗಿ ಈ ನಿರ್ಣಯಕ್ಕೆ ಬಂದಿದ್ದಾಗಿ UPI ವ್ಯವಹಾರಗಳ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

advertisement

Leave A Reply

Your email address will not be published.