Karnataka Times
Trending Stories, Viral News, Gossips & Everything in Kannada

HSRP Number Plate: ಕೊನೆಯ ಕ್ಷಣದಲ್ಲಿ HSRP ನಂಬರ್ ಪ್ಲೇಟ್ ಬುಕ್ ಮಾಡುವವರಿಗೆ ಹೊಸ ಸೂಚನೆ! ಅಧಿಕಾರಿಗಳ ಆದೇಶ

advertisement

ವಾಹನಗಳಿಗೆ ಅಂದರೆ ಬೈಕ್, ಸ್ಕೂಟರ್ ಕಾರು , ಟ್ಯಾಕ್ಟರ್, ಜೀಪ್ ಎಲ್ಲ ತರಹದ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಕೆಯನ್ನು ಕಡ್ಡಾಯ ಮಾಡಲಾಗುತ್ತಿದೆ. ಅದರಲ್ಲೂ ಹಳೆ 2019ಕ್ಕೂ ಮೊದಲು ರಿಜಿಸ್ಟ್ರೇಶನ್ ಆದ ವಾಹನಗಳಿಗಂತೂ HSRP Number Plate ಅನ್ನು ಶೀಘ್ರವೇ ಅಳವಡಿಸಬೇಕು. ಸರಕಾರ ಈಗಾಗಲೇ ಅನೇಕ ಸಲ ಅವಕಾಶ ನೀಡಿದ್ದರೂ ಸರ್ವರ್ ಸಮಸ್ಯೆ ತಾಂತ್ರಿಕ ಕಾರಣದಿಂದ ಇನ್ನೂ ಕೂಡ HSRP ನಂಬರ್ ಪ್ಲೇಟ್ ಬಂದಿಲ್ಲ. HSRP Number Plate ವಿಳಂಬ ನೀತಿಯ ಬಗ್ಗೆ ಸರಕಾರ ಈಗ ಹೊಸದೊಂದು ಆದೇಶ ನೀಡಿದೆ.

ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು ಆನ್ಲೈನ್ ಮೂಲಕ ಹಾಕಿಸಿಕೊಳ್ಳಬಹುದು, HSRP Number Plate ಅಳವಡಿಕೆ‌ ಮಾಡುವ ಗಡುವು ವಿಸ್ತರಣೆ ಮಾಡಲಾಗುತ್ತಲೇ ಇದ್ದು ಆನ್ಲೈನ್ ಮೂಲಕ ಬೇಡಿಕೆ ಇಟ್ಟವರ ಪ್ರಮಾಣ ಅಧಿಕವಾಗುತ್ತಿದೆ‌.  ಆದರೆ ಅನೇಕ ತಾಂತ್ರಿಕ ಕಾರಣದಿಂದಾಗಿ ಆನ್ಲೈನ್ ಮೂಲಕ ರಿಜಿಸ್ಟ್ರೇಶನ್ ಆದರೂ ಕೂಡ ಅನೇಕರಿಗೆ ನಂಬರ್ ಪ್ಲೇಟ್ ಇನ್ನು ಕೂಡ ಬರುತ್ತಿಲ್ಲ. ಈ ನಡುವೆ ಇನ್ನು ಗಡುವು ವಿಸ್ತರಣೆ ಆಗಲಾರದು ಆನ್ಲೈನ್ ಮೂಲಕ ಸಿಗದಿದ್ದರೆ ಹೊಸ ಕ್ರಮ ಅನುಸರಿಸಲು ತಿಳಿಸಲಾಗುತ್ತಿದೆ.

ಯಾವುದು ಆ ಹೊಸ ಕ್ರಮ:

ಆನ್ಲೈನ್ ಮೂಲಕ HSRP Number Plate ಅಳವಡಿಸಲು ನೋಂದಣಿ ಮಾಡಿಕೊಳ್ಳಲು ಈಗಾಗಲೇ ಅನೇಕ ಸಲ ಗಡುವು ವಿಸ್ತರಣೆ ಮಾಡಿ ಆಗಿದೆ. ಮುಂದಿನ ತಿಂಗಳು ಅಂದರೆ ಮೇ 31 ಕೊನೆಯ ದಿನವಾಗಿದ್ದು ಅಷ್ಟರ ಒಳಗೆ ರಿಜಿಸ್ಟ್ರೇಶನ್ ಮಾಡಿಸಿಕೊಳ್ಳುವಂತೆ ಕೂಡ ಆದೇಶ ನೀಡಲಾಗುತ್ತಿದೆ. ರಿಜಿಸ್ಟ್ರೇಶನ್ ಆಗಿಯೂ ನಂಬರ್ ಪ್ಲೇಟ್ ಬರದೇ ಇದ್ದರೆ ಹತ್ತಿರದ ಶೋ ರೂಂ ನಲ್ಲೇ ಹಾಕಿಸಿಕೊಳ್ಳಬಹುದು ಎಂದು ಮಂಗಳೂರಿನ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಶಿಧರ್ ಮಲ್ನಾಡ್ ಅವರು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.

 

Image Source: Paytm

 

advertisement

ಅನೇಕ ಸಮಸ್ಯೆ:

ಸಾರಿಗೆ ಸಚಿವರು ಆದ ರಾಮಲಿಂಗ ರೆಡ್ಡಿ ಅವರು ಇತ್ತೀಚೆಗಷ್ಟೆ ಗಡುವು ವಿಸ್ತರಣೆ ಮಾಡಿ ಎಲ್ಲರೂ ಮೇ 31 ರ ಒಳಗೆ ಕಡ್ಡಾಯವಾಗಿ HSRP ಅಳವಡಿಸಬೇಕು ಇಲ್ಲವಾದರೆ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.ಈಗ ಸಾರಿಗೆ ಸಚಿವರ ಆದೇಶ ದಂತೆ ಪಾಲನೆ ಮಾಡಲು ಆನ್ಲೈನ್ ನಲ್ಲಿ ಸರ್ವರ್ ಹಾಗೂ ರಿಜಿಸ್ಟ್ರೇಶನ್ ಮಾಡಿಸಲು ತಾಂತ್ರಿಕ ಸಮಸ್ಯೆಗಳು ಕಂಡುಬರುತ್ತಿದೆ. ಹಾಗಾಗಿ ಇಂತಹ ಸಮಸ್ಯೆ ಇದ್ದರೆ ಈಗಾಗಲೇ ರಿಜಿಸ್ಟ್ರೇಶನ್ ಪ್ರಕ್ರಿಯೆ ಪೂರ್ಣ ಗೊಳಿಸಿದ್ದವರು ತಮ್ಮ ವಾಹನದ ನಂಬರ್ ಪ್ಲೇಟ್ ಅನ್ನು ಹತ್ತಿರದ ಶೋ ರೂಂ ಮೂಲಕ ಪಡೆಯಬಹುದು ಎಂದು ಮಂಗಳೂರಿನ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಶಿಧರ್ ಮಲ್ನಾಡ್ ಅವರು ತಿಳಿಸಿದ್ದಾರೆ.

 

Image Source: Huzur Bungalov

 

ಹೊಸ ವಾಹನ ಖರೀದಿಗೆ ರಿಲೀಫ್:

ಹೊಸದೊಂದು ವಾಹನ ಖರೀದಿ ಮಾಡ್ತೇವೆ ಅನ್ನುವವರಿಗೆ ಕಂಪೆನಿ ಕಡೆಯಿಂದಲೇ HSRP ಅಳವಡಿಸಿ ನೀಡಲಾಗುತ್ತದೆ. ಹಾಗಾಗಿ ಅಂತವರಿಗೆ ಈ ತಲೆ ಬಿಸಿ ಇರಲಾರದು ಅದೇ ರೀತಿ ಡೆಡ್ ಲೈನ್ ಮುಗಿಯುವವರೆಗೂ ಕಾದು ಬಳಿಕ ಕೂಡ HSRP ಅಳವಡಿಕೆ ಮಾಡಿಸಿಲ್ಲ ಎಂದರೆ ಅಂತವರಿಗೆ ದಂಡ ವಿಧಿಸಲಾಗುವುದು ತಪ್ಪಿದರೆ ಲೈಸೆನ್ಸ್ ಕೂಡ ರದ್ದಾಗುವ ಸಾಧ್ಯತೆ ಇದೆ.

advertisement

Leave A Reply

Your email address will not be published.