Karnataka Times
Trending Stories, Viral News, Gossips & Everything in Kannada

HSRP Number Plate: HSRP ನಂಬರ್ ಪ್ಲೇಟ್ ಇನ್ನೂ ಹಾಕಿಸಿಲ್ಲ ಅಥವಾ ಬುಕ್ ಕೂಡ ಮಾಡದವರಿಗೆ ಮಹತ್ವದ ಅಪ್ಡೇಟ್!

advertisement

HSRP ನಂಬರ್ ಪ್ಲೇಟ್  ಅಳವಡಿಕೆಯನ್ನು ವಾಹನಗಳಿಗೆ ಕಡ್ಡಾಯ ಮಾಡಲಾಗುತ್ತಿದೆ. ಹಳೆ ವಾಹನಗಳಿಗೆ ಈ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಮಾಡಲಾಗುತ್ತಿದ್ದು ಇಂತಿಷ್ಟು ದಿನಾಂಕದ ಒಳಗೆ HSRP ನಂಬರ್ ಪ್ಲೇಟ್ ಅಳವಡಿಸಲೇ ಬೇಕು ಎಂದು ತಿಳಿಸಲಾಗಿತ್ತು ಇದೀಗ ಆ ನಿಯಮ ಕೂಡ ಬದಿಗೊತ್ತುತ್ತಿದ್ದಾರೆ ಅನೇಕರು ಇನ್ನೂ ಕೂಡ HSRP Number Plate ಅನ್ನು ಇನ್ನೂ ಅಳವಡಿಕೆ ಮಾಡಿಕೊಂಡಿಲ್ಲ ಎಂದೇ ಹೇಳಬಹುದು.

ಇನ್ನು ಬಂದಿಲ್ಲ:

ಅತಿ ಸುರಕ್ಷತಾ ನೋಂದಣಿ (HSRP) ಯನ್ನು 2019ಕ್ಕಿಂತ ಮೊದಲು ನೋಂದಣಿ ಆದ ವಾಹನಗಳಿಗೆಕಡ್ಡಾಯ ಮಾಡಲಾಗಿದೆ. ನೂತನ ವಾಹನಕ್ಕೆ HSRP ನಂಬರ್ ಪ್ಲೇಟ್ ಅನ್ನು ಆಯಾ ಕಂಪೆನಿಗಳೇ ನೋಡಿಕೊಳ್ಳಬೇಕು ಎಂದು ಸಹ ತಿಳಿಸಿದೆ. ಹಾಗಾಗಿ ಹಳೆ ವಾಹನ ಹೊಂದಿದ್ದವರು ಆನ್ಲೈನ್ ಮೂಲಕ HSRP ನಂಬರ್ ಪ್ಲೇಟ್ ಪಡೆಯುತ್ತಿದ್ದಾರ.  ಆದರೆ ಕೆಲವೊಂದು ತಾಂತ್ರಿಕ ಕಾರಣದಿಂದಾಗಿ ಆನ್ಲೈನ್ ಮೂಲಕ HSRP Number Plate ಗೆ ರಿಜಿಸ್ಟ್ರೇಶನ್ ಆದರೂ ಕೂಡ ಅನೇಕರಿಗೆ ನಂಬರ್ ಪ್ಲೇಟ್ ಇನ್ನು ಕೂಡ ಬಂದಿಲ್ಲ.

ಈಗಾಗಲೇ ಗಡುವು ವಿಸ್ತರಣೆ:

 

Image Source: Spinny

advertisement

2019 ಎಪ್ರಿಲ್ ಒಂದಕ್ಕಿಂತ ಹಿಂದೆ ಖರೀದಿ ಮಾಡಿದ್ದ ವಾಹನಕ್ಕೆ HSRP ಅಳವಡಿಕೆ ಮಾಡಲು ಈ ಹಿಂದೆ ನವೆಂಬರ್ 17 , 2023 ಕೊನೆಯ ದಿನ ಎಂದು ಹೇಳಲಾಗಿತ್ತು. ಆದರೆ ಆಗ ಜನರಿಗೆ ಇದರ ಬಗ್ಗೆ ಅರಿವು ಇರಲಿಲ್ಲ. ಬಳಿಕ   ಗಡುವು ವಿಸ್ತರಣೆ ಮಾಡಲಾಗಿದೆ. ಫೆಬ್ರವರಿ 17 , 2024 ಕೊನೆಯ ದಿನ ಎಂದು ಹೇಳಲಾಗಿತ್ತು ಆದ್ದರೂ ನಂಬರ್ ಪ್ಲೇಟ್ ಅಳವಡಿಕೆ ಮಾಡಿದ್ದ ಪ್ರಮಾಣ ಕಡಿಮೆ ಹಾಗಾಗಿ ಈ ಗಡುವನ್ನು ಮೇ 31, 2024ರ ವರೆಗೆ ವಿಸ್ತರಣೆ ಮಾಡಲಾಗಿದೆ.

ಇನ್ನು ಬಾಕಿ ಇದೆ:

 

Image Source: Paytm

 

ಈ ಹಿಂದೆ ಸಾಕಷ್ಟು ಸಲ ಗಡುವು ವಿಸ್ತರಣೆ ಮಾಡಿದ್ದರೂ ಕೂಡ ಇನ್ನೂ ಕೂಡ ಪೂರ್ತಿ ಪ್ರಮಾಣದಲ್ಲಿ HSRP Number Plate ಅಳವಡಿಕೆ ಮಾಡಿಲ್ಲ. ರಾಜ್ಯದಲ್ಲಿ 34ಲಕ್ಷ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಎಪ್ರಿಲ್ ತಿಂಗಳಿನಲ್ಲಿ 18 ಲಕ್ಷ ದಷ್ಟು ನೋಂದಣಿ ಈಗ ಕೂಡ ನಡೆಯುತ್ತಿದೆ. ಎರಡು ಕೋಟಿ ವಾಹನಗಳಿಗೆ HSRP ಅಳವಡಿಕೆ ಮಾಡಬೇಕಿದ್ದು ಮೇ 31ರ ಒಳಗೆ 75ಲಕ್ಷ ನಂಬರ್ ಪ್ಲೇಟ್ ನೋಂದಣಿ ಆಗಲಿದೆ. ಹಾಗಿದ್ದರೂ ಮೇ ಬಳಿಕ ಗಡುವಿನ ವಿಸ್ತರಣೆ ಆಗಬಹುದು ಎಂದು ಕಾಯುತ್ತಿರುವವರು ಇದ್ದಾರೆ.

ಉದಾಸೀನತೆ ಬೇಡ:

HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲು ನೋಂದಣಿ ಶೀಘ್ರವೇ ಮಾಡಿಸಿ. ಮೇ 31ರ ಬಳಿಕ ಗಡುವು ವಿಸ್ತರಣೆ ಆಗುವುದಿಲ್ಲ ಎನ್ನಬಹುದು. ಮುಂದೆ ಅನಗತ್ಯ ತೊಂದರೆಗೆ ಒಳಪಡುವುದಕ್ಕಿಂತಲೂ ಈಗಲೇ ಈ ಸಂಬಂಧಿತ ಸಮಸ್ಯೆ ನಿವಾರಿಸುವುದು ಬಹಳ ಮುಖ್ಯ ಎನ್ನಬಹುದು. ಮೇ 31ರ ಬಳಿಕ ಗಡುವು ವಿಸ್ತರಣೆ ಆಗದಿದ್ದರೆ ದಂಡ ವಿಧಿಸಲಾಗುವುದು 500-1500 ವರೆಗೂ ದಂಡ ವಿಧಿಸುವ ಸಾಧ್ಯತೆ ಕೂಡ ಇದೆ.

advertisement

Leave A Reply

Your email address will not be published.