Karnataka Times
Trending Stories, Viral News, Gossips & Everything in Kannada

Arecanut Plantation: ಅಡಿಕೆ ತೋಟದ ಆಯಸ್ಸು ಹಾಗೂ ಇಳುವರಿ ಹೆಚ್ಚಾಗಬೇಕಾ? ಬೀಜಗಳ ಆಯ್ಕೆ ಈ ರೀತಿ ಇರಬೇಕು

advertisement

ಅಡಿಕೆ ಎನ್ನುವುದು ಭಾರತೀಯ ಸಂಸ್ಕೃತಿ ಪರಂಪರೆಯ ಒಂದು ಭಾಗವೇ ಆಗಿದೆ. ಅದರಲ್ಲೂ ಹಿಂದೂ ಧರ್ಮದಲ್ಲಿ ಅಡಿಕೆ ಶುಭ ಎಂದು ಭಾವಿಸಲಾಗಿದೆ. ಮದುವೆ, ನಿಶ್ಚಿತಾರ್ಥ ಇತರ ಸಂದರ್ಭದಲ್ಲಿ ತಾಂಬೂಲದಲ್ಲಿ ಅಡಿಕೆ (Arecanut) ಬಳಕೆ ಮಾಡುವುದು ಸಹ ಶುಭವನ್ನೇ ಸಂಕೇತಿಸಲಿದೆ. ಅಡಿಕೆಗೆ ಅನೇಕ ವರ್ಷಗಳ ಇತಿಹಾಸ ಇದ್ದು ಇಂದಿಗೂ ಕೃಷಿಯಲ್ಲಿ (Arecanut Plantation) ಉಳಿದು ರೈತರಿಗೆ ಆದಾಯ ನೀಡುವ ಪ್ರಮುಖ ತೋಟಗಾರಿಕೆ ಕೃಷಿಯಲ್ಲಿ ಇದರ ಸ್ಥಾನ ನಾವು ಕಾಣಬಹುದು.

ಅಡಿಕೆ ಸಸಿಯನ್ನು ನೆಡುವಾಗ ಯಾವ ತಳಿ ಹಾಗೂ ಅದರ ಗುಣಮಟ್ಟದ ಬಗ್ಗೆ ಅವಲೋಕನ ಮಾಡುವುದು ತುಂಬಾ ಮುಖ್ಯ ಅಡಿಕೆ ಸಸಿ ನಿಮ್ಮ ಮಣ್ಣಿನ ಫಲವತ್ತತೆಗೆ ತಕ್ಕದಾಗಿ ಇಲ್ಲದೆ ಹೋದರೆ ಅದು ನಿಮಗೆ ಸಮಸ್ಯೆ ಆಗುವ ಸಾಧ್ಯತೆ ಇರಲಿದೆ. ಹಾಗಾಗಿ ಮೊದಲು ಅಡಿಕೆ ಬೀಜಗಳ ಆಯ್ಕೆ ಮಾಡುವಾಗ ಹೆಚ್ಚಿನ ನಿಗಾ ವಹಿಸುವುದು ಬಹಳ ಪ್ರಾಮುಖ್ಯತೆ ಪಡೆಯಲಿದೆ.

ಯಾವ ರೀತಿ ಅಡಿಕೆ ಬೀಜ ಅಗತ್ಯ?

 

Image Source: Kuensel Online

 

  • ಅಡಿಕೆ ಸಸಿಗಳ ಬಗ್ಗೆ ಮಾಹಿತಿ ಇಲ್ಲದೇ ಕೃಷಿ ಮಾಡಿದರೆ ಮೊದಲ ಒಂದೆರೆಡು ವರ್ಷ ಇಳುವರಿ ಬರಬಹುದು ಆಮೇಲೆ ಇಳುವರಿ ಬರಲಾರದು ಹಾಗಾಗಿ ಅಡಿಕೆ ಸಸಿಯ ಆಯ್ಕೆ ಮಾಡುವಾಗ ತುಂಬಾ ನಿಗ ವಹಿಸಬೇಕು.
  • ಅಡಿಕೆ (Arecanut) ಬೀಜವನ್ನು ನಮ್ಮ ತೋಟದ ವಾತಾವರಣಕ್ಕೆ ಅನುಗುಣವಾಗಿ ಆಯ್ಕೆ ಮಾಡಬೇಕು.
  • ಈಗಾಗಲೇ ಆ ಮರವು ಉತ್ತಮ ಇಳುವರಿ ನೀಡುತ್ತಿದ್ದರೆ ಅಂತವುಗಳನ್ನು ಆಯ್ಕೆ ಮಾಡಬೇಕು.
  • 25-30ವರ್ಷಗಳ ಒಳಗಿನ ಅಡಿಕೆ ಮರದಿಂದ ಬೀಜವನ್ನು ಆಯ್ಕೆ ಮಾಡಬೇಕು.
  • 25 ವರ್ಷದ ಅಡಿಕೆ ಮರದಲ್ಲಿ ಪೋಷಕಾಂಶ ಅಧಿಕ ಇರುವ ಕಾರಣ ನಿಮ್ಮ ಸಸಿ ಕೂಡ ಬೇಗ ಇಳುವರಿ ನೀಡಬಹುದು.

advertisement

ಯಾವ ರೀತಿ ಮರ ಇರಬೇಕು?

 

Image Source: Nimbus Agro Farms

 

  • ಮರದ ಗಾತ್ರ ಬುಡದಿಂದ ತುದಿ ತನಕ ಏಕರೀತಿ ಇರಬೇಕು.
  • ಪ್ರತೀ ವರ್ಷ ಒಂದೇ ಸಮನೆ ಫಸಲು ನೀಡುವ ಅಡಿಕೆ ಮರದಿಂದಲೇ ಬೀಜದ ಆಯ್ಕೆ ಮಾಡಬೇಕು.
  • ಗಿಡ ಮಾಡಿ ಸಸಿ ನೆಡುವ ಅಡಿಕೆ ಬೀಜ 35ಗ್ರಾಂ ತೂಕ ಇದ್ದರೆ ಉತ್ತಮ.
  • ಪೆಟ್ಟಾದ ಅಡಿಕೆಯನ್ನು ಸಸಿಯ ಉದ್ದೇಶಕ್ಕೆ ಬಳಸಬಾರದು.
  • ಅಡಿಕೆ ಬೀಜವನ್ನು ನೀರಿನಲ್ಲಿ ನೆನೆಹಾಕಿದರೆ ಅದರ ತೊಟ್ಟು ಮೇಲೆ ಬರಬೇಕು ಅದು ಉತ್ತಮ ಅಡಿಕೆ ಎಂದು ಹೇಳಬಹುದು.
  • ಮರದ ಫಲವತ್ತತೆ ಬೀಜಕ್ಕೂ ಇರುವ ಕಾರಣ ಯಾವ ಮರದಿಂದ ನೀವು ಬೀಜದ ಆಯ್ಕೆ ಮಾಡುತ್ತೀರಿ ಎಂಬುದರ ಅರಿವಿರಬೇಕು.

ಒಟ್ಟಾರೆಯಾಗಿ ಯಾವುದೇ ಅಡಿಕೆಯಾದರೂ ಅದನ್ನು ಮಣ್ಣಿನಲ್ಲಿ ಸಮೃದ್ಧವಾಗಿ ನೆಡುವ ಮುನ್ನ ಅದು ಯಾವ ತಳಿ ಎಂಬುದು ಸಹ ರೈತರು ತಿಳಿಯಬೇಕು. ಯಾಕೆಂದರೆ ಒಂದೊಂದು ತಳಿಗೂ ಪೋಷಣೆ ವಿಚಾರದಲ್ಲಿ ವ್ಯತ್ಯಾಸ ಕಾಣಲಿದೆ. ಮಣ್ಣಿನ ಪರೀಕ್ಷೆಯನ್ನು ಕೃಷಿ  (Arecanut Plantation) ಸಂಶೋಧನಾ ಕೇಂದ್ರ ಅಥವಾ ಇತರ ಮೂಲದಿಂದ ಮಾಡಿಸಿ ತಜ್ಞರ ಸಲಹೆ ಪಡೆದು ಸಸಿ ಹಾಕುವುದು ಬಹಳ ಉತ್ತಮ ಆಲೋಚನೆ ಆಗಿದೆ.

 

advertisement

Leave A Reply

Your email address will not be published.