Karnataka Times
Trending Stories, Viral News, Gossips & Everything in Kannada

HSRP: HSRP ನಂಬರ್ ಪ್ಲೇಟ್ ಗಿಂತ ಮುನ್ನ ಇಂತಹವರಿಗೆ ದಂಡ ಫಿಕ್ಸ್! ರಾಜ್ಯ ಪೋಲೀಸರ ನಿರ್ಧಾರ

advertisement

ಇಂದು ರಸ್ತೆಯಲ್ಲಿ ಓಡಾಡುವ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗಿದೆ.ಅದರಲ್ಲೂ ಟ್ರಾಫಿಕ್ ‌ನಿಯಮಗಳನ್ನು ಎಷ್ಟೇ ಕಟ್ಟುನಿಟ್ಟಾಗಿ ಜಾರಿಗೆ ತಂದರೂ ಕೂಡ ವಾಹನಗಳನ್ನು ಬೇಕಾಬಿಟ್ಟಿ ಯಾಗಿ ಚಲಾಯಿಸಿ ಪ್ರಾಣಕಳೆದು ಕೊಂಡ ಘಟನೆಗಳು ಬಹಳಷ್ಟು ನಡೆದಿದೆ. ಹಾಗಾಗಿ ಟ್ರಾಫಿಕ್ ಪೊಲೀಸರು ವಾಹನ ಸವಾರರ ಮೇಲೆ ಬಹಳಷ್ಟು ಕಣ್ಣಿಟ್ಟಿದ್ದಾರೆ.ಟ್ರಾಫಿಕ್ ನಿಯಮ ಪಾಲನೆ ಅತೀ ಅಗತ್ಯವಾಗಿದ್ದು ಸಿಗ್ನಲ್ ಜಂಪ್, ರಾಂಗ್ ಸೈಡ್ ,ಅತೀ ವೇಗ, ಹೆಲ್ಮೆಟ್ ಇಲ್ಲದೆ ಪ್ರಯಾಣ ಸೇರಿದಂತೆ ಒಂದೊಂದು ನಿಯಮ ಉಲ್ಲಂಘನೆಗೂ ಒಂದೊಂದು ರೀತಿಯ ದಂಡ ವಿಧಿಸಲಾಗುತ್ತದೆ.

HSRP ಕಡ್ಡಾಯ

ಇನ್ನು ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್‌ (HSRP) ಅಳವಡಿಕೆ ಕಡ್ಡಾಯ ಮಾಡಿದ್ದು ಸಾರಿಗೆ ಇಲಾಖೆ ಎಷ್ಟೇ ಅವಕಾಶ ನೀಡಿದ್ದರೂ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಕೆ ಮಾಡಲು ಬಾಕಿ ಇದ್ದಾರೆ. 2019 ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ ಎಚ್‌ಎಸ್‌ಆರ್‌ಪಿ (HSRP) ಅಳವಡಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಮತ್ತೆ ಮತ್ತೆ ಅಧಿಸೂಚನೆ ನೀಡ್ತಾ ಇದ್ದು ಇನ್ನೂ ಮೇ 31ರ ವರೆಗೆ ಅವಕಾಶ ನೀಡಿದೆ. ಎಚ್‌ಎಸ್‌ಆರ್‌ಪಿ ಅಳವಡಿಸದವರಿಗೆ ಮೊದಲ ಬಾರಿಗೆ 500 ರೂಪಾಯಿ ದಂಡ ವಿಧಿಸುವ ಬಗ್ಗೆಯು ಸೂಚನೆ ‌ನೀಡಿದೆ.

Image Source: Jagran English

ವಾಹನ ಸವಾರರಿಗೆ ಮತ್ತೊಂದು ಶಾಕ್

advertisement

ಇಂದು ಸಂಚಾರ ನಿಯಮಗಳನ್ನು ಪಾಲಿಸದೇ ಇದ್ದವರಿಗೆ ಸಂಚಾರಿ ಪೋಲೀಸರು ಇದೀಗ ಶಾಕ್ ನೀಡಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸದೇ ಬೇಕಾಬಿಟ್ಟಿಯಾಗಿ ವಾಹನ ಚಲಾವಣೆ ಮಾಡುತ್ತಿದ್ದ ವಾಹನ ಸವಾರರಿಗೆ ಟ್ರಾಫಿಕ್​ ಪೊಲೀಸರು‌ ದಂಡ ವಿಧಿಸಿದ್ದಾರೆ.

ಬಾಕಿ ಇದ್ದ ದಂಡ ವಸೂಲಿ

ಈಗಾಗಲೇ ಬೆಂಗಳೂರಿನಲ್ಲಿ ಲಕ್ಷಾಂತರ ವಾಹನ ಸವಾರರು ನಿಯಮ ಮೀರಿ ತಿರುಗಾಡಿರುವ ಬಗ್ಗೆ ಸೂಕ್ತ ವಾಗಿ ಪರಿಶೀಲನೆ ಮಾಡಿದ ಟ್ರಾಫಿಕ್ ಪೊಲೀಸರು ಬಾಕಿ ಇದ್ದ ದಂಡವನ್ನು ವಸೂಲಿ ಮಾಡಲಿದ್ದಾರೆ.ಇದೀಗ 19 ಕೋಟಿ ಹಣಕ್ಕಾಗಿ ಮೆಗಾ ಆಪರೇಷನ್ ಕೈಗೊಳ್ಳಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ.ಈಗಾಗಲೇ ನಗರದಲ್ಲಿ 3,71,516 ವಾಹನಗಳ‌ ಮೇಲೆ ಬರೋಬ್ಬರಿ 19,54,16,400 ರೂಪಾಯಿ ದಂಡ ಇದ್ದು 19 ಕೋಟಿ ರೂಪಾಯಿ ದಂಡವನ್ನ ವಸೂಲಿ ಮಾಡಲು ಮುಂದಾಗಿರುವ ಸಂಚಾರಿ ಪೊಲೀಸರು 1 ಲಕ್ಷ ರೂಪಾಯಿಗೂ ಅಧಿಕ ದಂಡ ಇರುವ 123 ವಾಹನಗಳ ಪಟ್ಟಿ ತಯಾರು ಮಾಡುವ ಮೂಲಕ ವಾಹನಗಳ ಮಾಲೀಕರಿಗೆ ನೋಟಿಸ್ ಕೊಟ್ಟು ದಂಡ ವಸೂಲಿ ಮಾಡಲು ಇದೀಗ ಮುಂದಾಗಿದ್ದಾರೆ.

hsrp number plate hsrp karnataka hsrp karnataka online siam hsrp book my hsrp hsrp number plate rules hsrp number plate bangalore siam hsrp karnataka
Image Source: Deccan Herald

ಡಿಎಲ್ ರದ್ದು

ದಂಡ ಕಟ್ಟದೇ ಇದ್ದಲ್ಲಿ ಅಂತವರ ವಿರುದ್ಧ ಕೋರ್ಟ್​ನಲ್ಲಿ ಚಾರ್ಜ್​ ಶೀಟ್ ಹಾಕಲು ಸಿದ್ದತೆ ಮಾಡಿದ್ದಾರೆ‌. ಅಲ್ಲದೆ ವಾಹನ ಮಾಲೀಕರ ಡಿಎಲ್ ರದ್ದುಗೊಳಿಸುವ ಸೂಚನೆ ನೀಡಿದ್ದಾರೆ. ಹಾಗಾಗಿ ಎಚ್ ಎಸ್ ಅರ್ ಪಿ ಅಳವಡಿಕೆ ಮಾಡುವ ಮೊದಲು ಈ ವಿಚಾರ ವಾಹನ ಸವಾರರಿಗೆ ಮತ್ತೊಂದು ಶಾಕಿಂಗ್ ಆಗಿದೆ.

advertisement

Leave A Reply

Your email address will not be published.