Karnataka Times
Trending Stories, Viral News, Gossips & Everything in Kannada

LPG Subsidy: ಗ್ಯಾಸ್ ಸಿಲಿಂಡರ್ ಸಬ್ಸಿಡಿ ಸಿಗುವವರ ಹೊಸ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಚೆಕ್ ಮಾಡಿ

advertisement

ಇಂದು ಮಹಿಳೆಯರ ಅಭಿವೃದ್ಧಿ ಗಾಗಿ ಸರಕಾರ ಹಲವು ರೀತಿಯ ಯೋಜನೆಗಳನ್ನು ‌ರೂಪಿಸುತ್ತಲೇ ಬಂದಿದೆ. ಮಹಿಳೆಯರಿಗೂ ಮೂಲಭೂತ ಅವಶ್ಯಕ ವಸ್ತುಗಳು ಸಿಗುವಂತೆ ಆಗಬೇಕು.ಆರ್ಥಿಕವಾಗಿ ಅವರು ಸಬಲ ರಾಗಬೇಕು ಎನ್ನುವ ಉದ್ದೇಶದಿಂದ ಕೆಲವೊಂದು ಯೋಜನೆಯನ್ನು ರೂಪಿಸಿದ್ದು ಅದರಲ್ಲಿ ಉಜ್ವಲ ಯೋಜನೆ (Ujjwala Yojana) ಕೂಡ ಒಂದಾಗಿದೆ.‌

ಹಿಂದೆಲ್ಲಾ ಮಹಿಳೆಯರು ಅಡುಗೆ‌ ಮಾಡಲು ಕಟ್ಟಿಗೆ, ಇದ್ದಿಲು ಬಳಕೆ‌ಮಾಡುವ ಮೂಲಕ ಅಡುಗೆ ‌ಮಾಡುತ್ತಿದ್ದರು.‌ಇಂದು ಕೂಡ ಹೆಚ್ಚಿನ‌ಕಡೆ ಇದನ್ನೆ ಅಳವಡಿಕೆ ಮಾಡಿಕೊಂಡಿದ್ದು ಇದರಿಂದ ಅಡುಗೆ ಕೆಲಸ ಮಾಡಲು ಕಷ್ಟ ಮತ್ತು ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಹಾಗಾಗಿ ‌ಮಹಿಳೆಯರಿಗೆ ಕೆಲಸ ಸುಲಭ ವಾಗ ಬೇಕು ಎಂಬ ನಿಟ್ಟಿನಲ್ಲಿ ಉಜ್ವಲ ಯೋಜನೆ (Ujjwala Yojana) ಯನ್ನು ಜಾರಿಗೆ ತಂದಿದೆ.

ಯಾರಿಗೆ ಈ ಯೋಜನೆ?

 

Image Source: Aaj Tak

 

ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಈ‌ ಯೋಜನೆಯನ್ನು ಜಾರಿಗೆ ತರಲಾಗಿದೆ.‌ ಮುಖ್ಯವಾಗಿ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕಾದರೆ ಬಿಪಿಎಲ್‌ ಕಾರ್ಡ್ (BPL Card) ‌ಹೊಂದುವುದು ಕಡ್ಡಾಯವಾಗಿದೆ. ಈ ಯೋಜನೆ (Ujjwala Yojana) ಯಲ್ಲಿ ಸಬ್ಸಿಡಿ‌ (LPG Subsidy) ಜೊತೆಗೆ ಉಚಿತ ರೀಫಿಲ್ ಮತ್ತು ಫಲಾನುಭವಿಗಳಿಗೆ ಉಚಿತ ಸ್ಟೌವ್ (Free Stove) ಒದಗಿಸಲಾಗುತ್ತದೆ.

advertisement

ಪ್ರಧಾನ ಮಂತ್ರಿ ಉಜ್ವಲ ಯೋಜನೆ (PM Ujjwala Yojana) ಯ ಅಡಿಯಲ್ಲಿ, 300 ರೂಪಾಯಿಗಳ ಸಬ್ಸಿಡಿ ಮೊತ್ತವನ್ನು ಸಹ ಪಡೆದುಕೊಳ್ಳಬಹುದು. ಸಬ್ಸಿಡಿ ಮೊತ್ತವು‌ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.

ನಿಮ್ಮ ಹೆಸರು ಇದೆಯಾ?

ಮೊದಲಿಗೆ‌ ನೀವು https://mylpg.in ಈ ಲಿಂಕ್ ಗೆ ಭೇಟಿ ನೀಡಿ. ನಂತರ ನಿಮ್ಮ ವಿವರಗಳನ್ನು ನೀಡಿ, ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಇತ್ಯಾದಿ ನಮೂದಿಸಿ ನಂತರ ಅರ್ಜಿ ಸಲ್ಲಿಕೆ ಮಾಡಿದ್ದಲ್ಲಿ ಫಲಾನುಭವಿಗಳ ಹೆಸರು ಕಾಣಿಸಲಿದೆ.‌ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಈ ತಿಂಗಳ ಹಣವು ನಿಮ್ಮ ಖಾತೆಗೆ ಜಮೆ ಆಗಲಿದೆ.

ಅರ್ಜಿ ಹಾಕಬಹುದು:

ಉಚಿತ ಗ್ಯಾಸ್ ಸಿಲಿಂಡರ್ ಕನೆಕ್ಷನ್ (Free Gas Cylinder Connection) ಪಡೆಯಲು ಈಗಲೂ ಕೂಡ ಅವಕಾಶವಿದ್ದು, ಆನ್ಲೈನ್ ಮೂಲಕ ಅರ್ಜಿ ಹಾಕಬಹುದಾಗಿದೆ. https://www.mylpg.in/ ವೆಬ್ಸೈಟ್ ಗೆ ಹೋಗಿ ಅಲ್ಲಿ ಮೂರು‌ ಆಯ್ಕೆಗಳು ಇರಲಿದೆ. Bharat, HP, Indian ಈ ಮೂರು ಆಯ್ಕೆಗಳು ಇರಲಿದ್ದು ನಿಮ್ಮ ಆಯ್ಕೆ ಇದರಲ್ಲಿ‌ ಕ್ಲಿಕ್ ಮಾಡಿ. ನಂತರ Ujjwala Beneficiaries ಆಯ್ಕೆ ಇರಲಿದ್ದು ಅದರ ಮೇಲೆ ಕ್ಲಿಕ್ ಮಾಡಿ. ಬಳಿಕ‌ ನಿಮ್ಮ ರಾಜ್ಯ ಜಿಲ್ಲೆ ಮೊದಲಾದ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

advertisement

Leave A Reply

Your email address will not be published.