Karnataka Times
Trending Stories, Viral News, Gossips & Everything in Kannada

LPG Subsidy: ಇಂತಹ ಮಹಿಳೆಯರ ಗ್ಯಾಸ್ ಸಬ್ಸಿಡಿ ಹೆಚ್ಚಳ ಭರ್ಜರಿ ಗುಡ್ ನ್ಯೂಸ್!

advertisement

ಇಂದು ಹಿಂದಿನಕಾಲದಂತೆ ಕಟ್ಟಿಗೆ, ಇದ್ದಿಲು ಬಳಸಿ ಅಡುಗೆ ಮಾಡುವ ಕೆಲಸ ಕಡಿಮೆ ಯಾಗಿ ಬಿಟ್ಟಿದೆ. ಕೆಲಸ ಸುಲಭವಾಗಲು, ಅಡುಗೆ ಬೇಗನೆ ತಯಾರಾಗಲು ಮಹೀಳೆಯರು ಗ್ಯಾಸ್ ಸ್ಟವ್ ಅನ್ನೇ ಬಳಕೆ ಮಾಡುತ್ತಿದ್ದಾರೆ‌. ಇಂದು ಗ್ಯಾಸ್ ಕೂಡ‌ ಪ್ರತಿಯೊಬ್ಬರಿಗೂ ಕೂಡ ಮೂಲಭೂತ ವಸ್ತು ವಾಗಿದೆ. ಅದರೆ ಹೆಚ್ಚುತ್ತಿರುವ ಬೆಲೆಯಿಂದಾಗಿ ಬಡವರ್ಗದ ಜನತೆಗೆ ಗ್ಯಾಸ್ ಖರೀದಿ ಕಷ್ಟವೇ ಸಹಿ.‌ ಅದಕ್ಕಾಗಿ ದೇಶದ ಎಲ್ಲಾ ಬಿಪಿಎಪ್ ಕಾರ್ಡ್ ದಾರರಿಗೆ ಮನೆಯಲ್ಲಿ ಎಲ್‌ಪಿಜಿ ಸಂಪರ್ಕವನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಉಜ್ವಲ ಯೋಜನೆ (PM Ujjwala Yojana) ಯನ್ನು ಆರಂಭ ಮಾಡಿದೆ.

ಏನು ಈ ಯೋಜನೆ?

 

Image Source: Jagran

 

ಬಡತನ ರೇಖೆಗಿಂತ ಕೆಳಗಿರುವ ಮಹಿಳಾ ಸದಸ್ಯರಿಗೆ ಗ್ಯಾಸ್ ಸಿಲಿಂಡರ್‌ (LPG Cylinder) ಅಡುಗೆ ಅನಿಲ ಸಂಪರ್ಕ ಒದಗಿಸುವ ಗುರಿ ಹೊಂದಿದ್ದು ಬಡವರಿಗೆ ಉಚಿತ ರೀಫಿಲ್ ಮತ್ತು ಸ್ಟೌವ್ ಜೊತೆಗೆ ವಿತರಿಸುತ್ತದೆ. ಅದರ ಜೊತೆ ‌ಸಬ್ಸಿಡಿ ಹಣವು ಮಹೀಳಾ ಸದಸ್ಯ ರಿಗೆ ದೊರೆಯುತ್ತದೆ. ಇದೀಗ ಈ ಯೋಜನೆಯ ಕುರಿತಂತೆ ಕೇಂದ್ರ ಸರಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದೆ.

advertisement

LPG Subsidy ಹೆಚ್ಚಳ:

 

Image Source: Times Now

 

ಇದೀಗ ಕೇಂದ್ರ ಸರಕಾರ ಈ ಬಗ್ಗೆ ಆಪ್ಡೆಟ್ ನೀಡಿದ್ದು ಪಿಎಂ ಉಜ್ವಲ ಯೋಜನೆ (PM Ujjwala Yojana) ಯ ಮೂಲಕ ಗ್ರಾಹಕರಿಗೆ ಇನ್ನೂ ಒಂದು ವರ್ಷ ಎಲ್​ಪಿಜಿ ಗ್ಯಾಸ್​ಗೆ 300 ರೂ ಸಬ್ಸಿಡಿ ಸಿಗಲಿದೆ ಎಂದು ಮಾಹಿತಿ ನೀಡಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಬ್ಸಿಡಿಯನ್ನು 200 ರೂ ಗೆ ನಿಗದಿ ಮಾಡಿತ್ತು. ಇದೀಗ ಉಜ್ವಲ ಫಲಾನುಭವಿಗಳಿಗೆ ಸಬ್ಸಿಡಿ (LPG Subsidy) ಮೊತ್ತವನ್ನು 100 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಐನೂರು ರೂ ಗೆ ಖರೀದಿ:

ಇದೀಗ ಕೇಂದ್ರ ಸರ್ಕಾರ ಮತ್ತೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಮೇಲೆ ಸಬ್ಸಿಡಿ (LPG Subsidy) ಯನ್ನು ಘೋಷಣೆ ಮಾಡಿರುವ ವಿಚಾರ ಮಹೀಳೆಯರಿಗೆ ಬಹಳಷ್ಟು ಖುಷಿ ನೀಡಿದೆ. ಆದ್ದರಿಂದ ಇನ್ನು ಮುಂದೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆ ಕೇವಲ ಐನೂರು ಬೆಲೆ ಗೆ ಖರೀದಿ ಮಾಡಬಹುದಾಗಿದೆ. ಇನ್ನೂ ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡದವರಿಗೆ ಇನ್ನೂ ಕೂಡ ಅರ್ಜಿ ಹಾಕಲು ಅವಕಾಶ ಇದೆ.ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆದಾರರು pmujjwalayojana.com ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಿ ಈ ಸಬ್ಸಿಡಿ ಪಡೆಯಬಹುದು.

advertisement

Leave A Reply

Your email address will not be published.