Karnataka Times
Trending Stories, Viral News, Gossips & Everything in Kannada

Mahindra Thar 5-Door: 5 ಡೋರ್ Thar ನ ಫೀಚರ್ ಹಾಗೂ ಬೆಲೆ ನೋಡಿ ಖುಷಿಪಟ್ಟ ಯುವಕರು! ಡಿಟೇಲ್ಸ್ ವೈರಲ್

advertisement

ಮಹಿಂದ್ರ ಪವರ್ ಫುಲ್ ವಾಹನಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಇದೇ ಕಾರಣಕ್ಕೆ ಜನರ ಮೆಚ್ಚುಗೆಯನ್ನು ಗಳಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಮಹೀಂದ್ರ ಥಾರ್ ಲೋಕಲ್ ಡ್ರೈವ್ನಿಂದ ಹಿಡಿದು ದೂರದ ಪ್ರಯಾಣದವರೆಗೂ ಜನರು ಹೆಚ್ಚು ಬಳಕೆ ಮಾಡುವ ಕಾರುಗಳಲ್ಲಿ ಒಂದಾಗಿದೆ. ಆಫ್ ರೋಡ್ ಹಾಗೂ ಆನ್ ರೋಡ್ ಯಾವುದೇ ರೀತಿಯ ಪ್ರಯಾಣಕ್ಕೂ ಕೂಡ ಮಹೀಂದ್ರ ಥಾರ್ ಹೇಳಿ ಮಾಡಿಸಿದಂತೆ ಇದೆ.

ಇದೀಗ 2024ರ ಥಾರ್ ಹೊಸ ವರ್ಷ ಬಿಡುಗಡೆ ಆಗಲಿದ್ದು, ಇದರಲ್ಲಿ ಏನೆಲ್ಲ ವೈಶಿಷ್ಟತೆಗಳು ಇದೆ ? ಎಷ್ಟು ಶಕ್ತಿಶಾಲಿಯಾಗಿದೆ ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.

New Mahindra Thar 5-Door 2024:

 

Image Source: Cartoq

 

5 ಡೋರ್ ಇರುವ ಹೊಸ ಮಹಿಂದ್ರ ಥಾರ್ ಅನ್ನು ಕಂಪನಿ ಪರಿಚಯಿಸಲಿದೆ.ಇದು ಮೊದಲಿಗೆ ಇದ್ದ ಥಾರ್ ಕಾರಿಗಿಂತಲೂ, ಹೆಚ್ಚು ಪವರ್ ಫುಲ್ ಆಗಿದೆ. ಅಷ್ಟೇ ಅಲ್ಲ ಸಾಕಷ್ಟು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಈ ಹೊಸ ಕಾರಿನಲ್ಲಿ ಐದು ಡೋರ್ (Mahindra Thar 5-Door) ನೀಡಿರುವುದು ವಿಶೇಷ.

New Mahindra Thar 5-Door Features:

 

advertisement

Image Source: Gaadiwaadi.com

 

ಇದೊಂದು ಆಕರ್ಷಣೀಯವಾಗಿರುವ ಎಸ್ಯುವಿ ಆಗಿದ್ದು ಸಿಂಗಲ್ ಪೆನ್ ಸನ್ ರೂಫ್ ಕೊಡಲಾಗಿದೆ. ಇದು ಪನೋರಮಿಕ್ ನೋಟವನ್ನು ಒದಗಿಸುತ್ತದೆ. ಈ ಕಾರಿನಲ್ಲಿ ಪ್ರಯಾಣಿಕರ ಹಿತ ದೃಷ್ಟಿಯಿಂದ ಆರು ಏರ್ ಬ್ಯಾಗ್ ಗಳನ್ನು ಅಳವಡಿಸಿರುವ ಸಾಧ್ಯತೆ ಇದೆ. ಮುಂಭಾಗದಲ್ಲಿ ಎರಡು ಏರ್ ಬ್ಯಾಗ್ ಗಳು ಹಾಗೂ ಉಳಿದ ಏರ್ ಬ್ಯಾಗ್ ಗಳನ್ನು ಹಿಂಭಾಗದಲ್ಲಿ ಕಾಣಬಹುದು. ಇದರ ಜೊತೆಗೆ ಸುರಕ್ಷತೆಯ ದೃಷ್ಟಿಯಿಂದ ಇನ್ನಷ್ಟು ತಂತ್ರಜ್ಞಾನವನ್ನು ಅಳವಡಿಸಿಸಲಾಗಿದೆ.

ಮಹಿಂದ್ರ ಹೊಸ ಥಾರ್ ನಲ್ಲಿ, 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕೊಡಲಾಗಿದೆ. ವಯರ್ಲೆಸ್ ಆಪಲ್, ಆಂಡ್ರಾಯ್ಡ್ ಕಾರ್ ಪ್ಲೇ, ಒದಗಿಸಲಾಗಿದೆ. ಒಟ್ಟಿನಲ್ಲಿ ಹೊಸ ಥಾರ್ ನಲ್ಲಿ ಒಳಾಂಗಣ ವಿನ್ಯಾಸವನ್ನು ಇನ್ನಷ್ಟು ಉತ್ತಮಗೊಳಿಸಲಾಗಿದೆ.

ಹಿಂದಿಗಿಂತಲೂ ಉತ್ತಮ ಆಧುನಿಕ ತಂತ್ರಜ್ಞಾನ ಅಳವಡಿಕೆ:

ಥಾರ್ ಹಳೆಯ ಮಾದರಿಯಲ್ಲಿ ಮೂರು ಡೋರ್ ಗಳು ಇದ್ದು, ಸ್ವಯಂಚಾಲಿತ ಎಸಿ ಒದಗಿಸಲಾಗಿತ್ತು. ಆದರೆ ಈಗ ಇನ್ನಷ್ಟು ಮುಂದುವರೆದು, ಡುಯಲ್ ಜೋನ್ ಎಸಿ ಕೊಡಲಾಗಿದೆ. ಹಿಂಭಾಗದ ಎಸಿ ವೆಂಟ್ ಹಿಂದೆ ಕುಳಿತವರಿಗೂ ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ.

ಮುಂದಿನ ದಿನಗಳಲ್ಲಿ ಈ ಮಾದರಿಯಲ್ಲಿ ಎಲೆಕ್ಟ್ರಿಕ್ ಪ್ಯೂಯಲ್ ಲೀಡ್ ಓಪನರ್ ಅಳವಡಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಹೊಸ ಮಹಿಂದ್ರ ಥಾರ್ 2024, ಮಾರುಕಟ್ಟೆಯಲ್ಲಿ ಮೋಡಿ ಮಾಡಲಿದೆ. ಇನ್ನು ಇದರ 4*4 ಮಾದರಿಯ ಬೆಲೆ ಸುಮಾರು 25 ಲಕ್ಷದ ವರೆಗೆ ಇರಲಿದೆ

advertisement

Leave A Reply

Your email address will not be published.