Karnataka Times
Trending Stories, Viral News, Gossips & Everything in Kannada

Dubai Gold Price: ಕುಸಿಯುತ್ತಿದೆ ದುಬೈ ಚಿನ್ನದ ದರ; ಇಂದು ಎಷ್ಟಿದೆ ಗೊತ್ತೇ!

advertisement

ದುಬೈ ಅನ್ನು “ಸಿಟಿ ಆಫ್ ಗೋಲ್ಡ್” ಎಂದು ಕರೆಯುತ್ತಾರೆ. ಭಾರತಕ್ಕೆ ಹೋಲಿಸಿದರೆ ದುಬೈ ನಲ್ಲಿ ಚಿನ್ನ (Gold) ದ ದರ ಬಹಳ ಕಡಿಮೆ. ಇದೇ ಕಾರಣಕ್ಕೆ ಭಾರತೀಯರು ಚಿನ್ನದ ಶಾಪಿಂಗ್ ಮಾಡೋದಕ್ಕೆ ದುಬೈವರೆಗೂ ಪ್ರಯಾಣ ಮಾಡುತ್ತಾರೆ ಅಂದ್ರೆ ತಪ್ಪಾಗುವುದಿಲ್ಲ.

ದುಬೈನಲ್ಲಿ ತೆರಿಗೆ ಮುಕ್ತ ಚಿನ್ನದ ಖರೀದಿ:

 

Image Source: iStock

 

ಭಾರತೀಯರು ದುಬೈಗೆ ಹೋಗಿ ಚಿನ್ನ ಖರೀದಿ (Gold Purchase) ಮಾಡುವುದಕ್ಕೆ ಬಹುಶ: ಇದೆ ಮುಖ್ಯ ಕಾರಣವಾಗಿರಬೇಕು. ದುಬೈನಲ್ಲಿ ತೆರಿಗೆ ಮುಕ್ತ ಸ್ಥಿತಿಯಲ್ಲಿ ಭಾರತೀಯರು ಚಿನ್ನ ಖರೀದಿ ಮಾಡಬಹುದಾಗಿದೆ. ಅಂದ್ರೆ ನೀವು ಖರೀದಿಸುವ ಚಿನ್ನಕ್ಕೆ ಯಾವುದೇ ರೀತಿಯ ವ್ಯಾಟ್ ಅಥವಾ ಇತರ ಯಾವುದೇ ಟ್ಯಾಕ್ಸ್ ಇರುವುದಿಲ್ಲ. ಹಾಗಾಗಿ ಚಿನ್ನದ ಹೂಡಿಕೆಯ ಮೇಲೆ ಒಟ್ಟಾರೆ ವೆಚ್ಚದಲ್ಲಿ ಸಾಕಷ್ಟು ಹಣವನ್ನು ಉಳಿತಾಯ ಮಾಡಬಹುದು.

ಎಷ್ಟು ಗ್ರಾಂ ಚಿನ್ನ ಭಾರತಕ್ಕೆ ತರಬಹುದು?

ದುಬೈನಲ್ಲಿ ನೀವು ಚಿನ್ನಕ್ಕೆ ತೆರಿಗೆ ಪಾವತಿ ಮಾಡಬೇಕಾಗಿಲ್ಲ. ಸರಿ ಆದರೆ ನೀವು ದುಬೈನಿಂದ ಎಷ್ಟು ಬೇಕಾದರೂ ಚಿನ್ನ ಖರೀದಿ ಮಾಡ್ಕೊಂಡು ಬರಬಹುದೇ? ಎನ್ನುವ ಪ್ರಶ್ನೆ ಬಂದಾಗ ಖಂಡಿತವಾಗಿಯೂ ಇಲ್ಲ ಅದಕ್ಕೂ ಕೂಡ ಮಿತಿಯನ್ನು ವಿಧಿಸಲಾಗಿದೆ. ಇತ್ತೀಚಿನ ಮಾರ್ಗಸೂಚಿ ಪ್ರಕಾರ ಪುರುಷ ಪ್ರಯಾಣಿಕರು ದುಬೈನಿಂದ ಹಿಂತಿರುಗಿ ಬರುವಾಗ ತಮ್ಮ ಜೊತೆಗೆ ಇಪ್ಪತ್ತು ಗ್ರಾಂ ಚಿನ್ನವನ್ನು ಅಷ್ಟೇ ತರಬಹುದು. ಅಂದರೆ 50,000 ರೂ.ಮೌಲ್ಯದ ಚಿನ್ನವನ್ನು ಖರೀದಿ ಮಾಡಿ ಭಾರತಕ್ಕೆ ತರಬಹುದು. ಅದೇ ರೀತಿ ಮಹಿಳಾ ಪ್ರಯಾಣಿಕರು 40 ಗ್ರಾಂ ಚಿನ್ನ ಅಂದ್ರೆ ಒಂದು ಲಕ್ಷ ರೂಪಾಯಿಗಳವರೆಗಿನ ಮೌಲ್ಯದ ಚಿನ್ನವನ್ನು ಭಾರತಕ್ಕೆ ಹಿಂತಿರುಗಿ ತರಬಹುದು. ಇನ್ನು ಭಾರತದ ಹೊರಗೆ ಒಂದು ವರ್ಷದ ಅವಧಿಯನ್ನು ಕಳೆದಿದ್ದರೆ ಆಗ 38.5% ನಷ್ಟು ಕಸ್ಟಮ್ಸ್ ಸುಂಕವನ್ನು ಪಾವತಿಸಬೇಕಾಗುತ್ತದೆ.

advertisement

ದುಬೈನಲ್ಲಿ ಸಿಗುತ್ತೆ ಶುದ್ಧ ಚಿನ್ನ:

 

Image Source: Bayut

 

ದುಬೈ ಚಿನ್ನವನ್ನು ಬಯಸಿ ಬಯಸಿ ಖರೀದಿ ಮಾಡುವುದಕ್ಕೆ ಮತ್ತೊಂದು ಪ್ರಮುಖ ಕಾರಣ ದುಬೈನಲ್ಲಿ ಸಿಗುವ ಚಿನ್ನ (Gold), ಬೆಳ್ಳಿ (Silver), ಪ್ಲಾಟಿನಂ, ರತ್ನದ ಕಲ್ಲುಗಳು ಹೆಚ್ಚು ಶುದ್ಧತೆಯಿಂದ ಕೂಡಿರುತ್ತವೆ ಎಂದು ಹೇಳಲಾಗುತ್ತೆ. ಇಲ್ಲಿನ ಚಿನ್ನದ ಬಾರ್ ಗಳು ಹಾಗೂ ಆಭರಣಗಳ ಮೇಲೆ ಪ್ರಮಾಣಿಕೃತ ಹಾಲ್ಮಾರ್ಕ್ ಇರುತ್ತೆ. ಇದು ಶುದ್ಧತೆಯನ್ನು ಸೂಚಿಸುವ ಸಂಕೇತ.

ದುಬೈ ನಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ (Dubai Gold Price) ಎಷ್ಟು?

ಭಾರತಕ್ಕೆ ಹೋಲಿಕೆ ಮಾಡಿದರೆ ದುಬೈ ಚಿನ್ನದ ಬೆಲೆ ಕಡಿಮೆ ಎನ್ನಬಹುದು. ಆದರೆ ದುಬೈ ನಿಂದ ಬೇಕಾದಷ್ಟು ಚಿನ್ನವನ್ನು ಖರೀದಿ ಮಾಡಿಕೊಂಡು ಬರುವ ಹಾಗಿಲ್ಲ. ದೇಶಕ್ಕೆ ಬರುತ್ತಿದ್ದ ಹಾಗೆ ಏರ್ಪೋರ್ಟ್ ನಲ್ಲಿಯೇ ಕಸ್ಟಮ್ಸ್ ಸುಂಕ (Customs Duty) ವನ್ನ ಪಾವತಿ ಮಾಡಬೇಕಾಗುತ್ತೆ. ಇನ್ನು ವಿದೇಶದಿಂದ ದೇಶಕ್ಕೆ ಚಿನ್ನ ತರುವಾಗ ಕಳ್ಳತನ ಆಗುವ ಭಯವೂ ಇರುತ್ತೆ. ಹಾಗಾಗಿ ಇಂತಹ ಅನಾನುಕೂಲತೆಗಳ ಬಗ್ಗೆ ಗಮನವಹಿಸಿ ನಂತರ ಬೇರೆ ದೇಶಗಳಿಂದ ಚಿನ್ನ ಖರೀದಿ ಮಾಡಿದ್ರೆ ಒಳ್ಳೆಯದು.

ಇನ್ನು ದುಬೈನಲ್ಲಿ ಚಿನ್ನದ ದರ ಎಷ್ಟಿದೆ ಎಂಬುದನ್ನು ನೋಡೋಣ:

ಇಂದು 22 ಕ್ಯಾರೆಟ್ ಚಿನ್ನದ ಬೆಲೆ (Dubai Gold Price) ಭಾರತೀಯ ಕರೆನ್ಸಿಯಲ್ಲಿ, 10 ಗ್ರಾಂ ಚಿನ್ನದ ಬೆಲೆ 54,836.84 ರೂ.ಗಳು. ಅದೇ ರೀತಿ 24 ಕ್ಯಾರೆಟ್ ಚಿನ್ನದ ಬೆಲೆ, 10 ಗ್ರಾಂ ಗೆ 59,180.91 ರೂಪಾಯಿಗಳು. ಅಂದರೆ ಭಾರತದ ಬೆಲೆಗೆ ಹೋಲಿಸಿದರೆ ಚಿನ್ನದ ಬೆಲೆ ದುಬೈ ನಲ್ಲಿ ಕಡಿಮೆ ಇದೆ ಎನ್ನಬಹುದು.

advertisement

Leave A Reply

Your email address will not be published.