Karnataka Times
Trending Stories, Viral News, Gossips & Everything in Kannada

LPG Cylinder: ಗ್ಯಾಸ್ ಕನೆಕ್ಷನ್ ಇದ್ದವರಿಗೆ ಭರ್ಜರಿ ಸಿಹಿಸುದ್ದಿ!

advertisement

ಇಂದು ಪ್ರತಿಯೊಬ್ಬರಿಗೂ ಮೂಲಭೂತ ಅವಶ್ಯಕ ವಸ್ತುಗಳು ಬಹಳ ಪ್ರಮುಖವಾಗುತ್ತದೆ.ಅದರಲ್ಲೂ ಇಂದು ಹೆಚ್ಚುತ್ತಿರುವ ಬೆಲೆ ಏರಿಕೆ ಯಿಂದಾಗಿ ಅಗತ್ಯ ವಸ್ತುಗಳನ್ನು ಖರೀದಿ ಮಾಡುವುದೇ ಕಷ್ಟವಾಗಿ ಬಿಟ್ಟಿದೆ.ಇಂಧನ ಬೆಲೆಗಳು ಹೆಚ್ಚಾಗುತ್ತಿದ್ದಂತೆ ಸರ್ಕಾರವು ಮೇ 2022 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PM Ujjwala Yojana) ಫಲಾನುಭವಿಗಳಿಗೆ ನೀಡಲು ಆರಂಭಿಸಿತು. ಇಂದು ಹೆಚ್ಚಿನ ಮಹೀಳೆಯರು ಈ ಯೋಜನೆಯ ಸೌಲಭ್ಯ ವನ್ನು ಪಡೆದು ಕೊಳ್ಳುತ್ತಿದ್ದಾರೆ.

What is PM Ujjwala Yojana:

 

 

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಹಾಗೂ ಸಿಲಿಂಡರ್ ನೀಡುವ ಯೋಜನೆಯಾಗಿದ್ದು ಮಹೀಳಾ ಫಲಾನುಭವಿಗಳಿಗಾಗಿ ಕೇಂದ್ರ ಸರಕಾರ ಈ ಯೋಜನೆಯನ್ನು ರೂಪಿಸಿದೆ.ಈ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಈ ಆರ್ಥಿಕ ವರ್ಷದಲ್ಲಿ ಸುಮಾರು 1 ಕೋಟಿ ಗಿಂತಲೂ ಅಧಿಕ ಗ್ಯಾಸ್ ಸಂಪರ್ಕಗಳನ್ನು ಬಡವರಿಗೆ ಉಚಿತ ರೀಫಿಲ್ ಮತ್ತು ಸ್ಟೌವ್ ಅನ್ನು ವಿತರಣೆ ಮಾಡುತ್ತಿದೆ.

advertisement

ವಿಸ್ತರಣೆ ಮಾಡಿದೆ:

ಇದೀಗ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PM Ujjwala Yojana) ಅಡಿಯಲ್ಲಿ ಸಿಗುವ ಎಲ್ಪಿಜಿ ಸಿಲಿಂಡರ್ (LPG Cylinder) ಗೆ 300 ರೂ.ಗಳ ಸಬ್ಸಿಡಿಯನ್ನು ಮಾರ್ಚ್ 31, 2025 ರವರೆಗೆ ಒಂದು ವರ್ಷ ಮತ್ತೆ ವಿಸ್ತರಿಸಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ನೀಡುತ್ತಿದ್ದ 200 ರೂಪಾಯಿ ಸಬ್ಸಿಡಿಯನ್ನು 300 ರೂಪಾಯಿಗೆ ಹೆಚ್ಚು ಮಾಡಿದ್ದು ಇದೀಗ ಈ ಯೋಜನೆಯನ್ನು ಮತ್ತೆ ವಿಸ್ತರಣೆ ಮಾಡಿದೆ, ಹಾಗಾಗಿ ಮತ್ತೆ ಮಹೀಳೆಯರು ಈ ಯೋಜನೆಯ ಸದುಪಯೋಗ ಮಾಡಬಹುದು.

ಈ ಷರತ್ತು ಇದೆ:

ಈ ಯೋಜನೆಗೆ ಅರ್ಜಿ ಹಾಕಬೇಕಾದ್ರೆ ಅರ್ಜಿದಾರರು ಮಹಿಳೆಯೇ ಆಗಿದ್ದು ಮಹಿಳೆಯ ವಯಸ್ಸು 18ಕ್ಕಿಂತ ಮೇಲೆ ಇರಬೇಕು. ಬಿಪಿಎಲ್ ಕಾರ್ಡ್ (BPL Card) ಹೊಂದಿದ್ದರೆ ಅರ್ಜಿ ಸಲ್ಲಿಕೆ ಮಾಡಬಹುದು.ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಆಧಾರ್ ಕಾರ್ಡ್ (Aadhaar Card), ಪಡಿತರ ಚೀಟಿ ದಾಖಲೆ, ಬ್ಯಾಂಕ್ ಪುಸ್ತಕ ವಿವರಗಳನ್ನು ನೀಡಬೇಕು.

advertisement

Leave A Reply

Your email address will not be published.