Karnataka Times
Trending Stories, Viral News, Gossips & Everything in Kannada

High Court: ಗಂಡ ಹೆಂಡತಿಗೆ ಹೊಸ ರೂಲ್ಸ್… ಹೈಕೋರ್ಟ್ ಮಹತ್ವದ ತೀರ್ಪು

advertisement

ಜೀವನದಲ್ಲಿ ಮದುವೆ ಎನ್ನುವುದು ಒಂದು ಸುಂದರ ಅನುಬಂಧ ಎಂದು ನಂಬಲಾಗುತ್ತದೆ. ಅದು ಅನೇಕ ವರ್ಷ ದಾಂಪತ್ಯ ಜೀವನಕ್ಕೆ ಅಣಿಯಾಗುವ ಕಾರಣ ಮದುವೆಯನ್ನು ಜೀವನದ ಒಂದು ಪ್ರಮುಖ ಘಟ್ಟ ಎಂದು ಹೇಳಲಾಗುತ್ತದೆ. ಆದರೆ ಇತ್ತೀಚಿನ ದಿನದಲ್ಲಿ ಹಳೆ ಪರಿಕಲ್ಪನೆ ಮರೆಯಾಗುತ್ತಿದೆ. ದಾಂಪತ್ಯ ಜೀವನದಲ್ಲಿ ಸಣ್ಣ ಪುಟ್ಟ ಕಾರಣಕ್ಕೆ ಕೂಡ ವಿರಸ ಬಂದು ಬೇರೆ ಆಗುತ್ತಿದ್ದಾರೆ. ಹೀಗೆ ಬೇರೆ ಆಗುವಾಗ ಪತಿಯರವರು ಪತ್ನಿಗೆ ಜೀವನಾಂಶ ನೀಡುವುದು ಕಾನೂನು ನಿಯಮವಾಗಿದ್ದು ಈ ಕಾರಣ ಬಂದರೆ ಜೀವನಾಂಶ ನೀಡಬೇಕಾಗಿಲ್ಲ ಎಂದು ರಾಜ್ಯದ ಹೈಕೋರ್ಟ್ (High Court) ತೀರ್ಪು ನೀಡಿದೆ.

ಡಿವೋರ್ಸ್ ಸಂಖ್ಯೆ ಹೆಚ್ಚಳ:

 

 

ಹಿಂದಿನ ಕಾಲಕ್ಕೆ ಹೋಲಿಸಿದರೆ ಇತ್ತೀಚಿನ ದಿನದಲ್ಲಿ ವಿವಾಹ ವಿಚ್ಚೇದನ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಅದರಲ್ಲಿ ವಿವಾಹದ ವಿಚ್ಚೇದನಕ್ಕೂ ನಿಖರ ಕಾರಣ ನೀಡಬೇಕಾಗಿದ್ದು, ಅನೇಕ ವಿಧದ ಡೈವೋರ್ಸ್ (Divorce) ನಲ್ಲಿ ಅನೈತಿಕ ಸಂಬಂಧ, ವೈಮನಸ್ಸು, ಜಗಳ ಇತ್ಯಾದಿ ಕಾರಣಗಳು ಕೇಳಿ ಬರುತ್ತಿದೆ. ಇವುಗಳಲ್ಲಿ ಅನೈತಿಕ ಸಂಬಂಧ ಹೊಂದಿದ್ದ ಕುರಿತಾಗಿ ರಾಜ್ಯದ ಹೈಕೋರ್ಟ್ (High Court) ಮಹತ್ವದ ಆದೇಶ ಒಂದನ್ನು ನೀಡಿದೆ.

advertisement

ಯಾವುದು ಈ ಪ್ರಕರಣ?

ಗಂಡನಿಂದ ದೂರಾಗಲು ವಿಚ್ಚೇದನಕ್ಕೆ (Divorce) ಅರ್ಜಿ ಹಾಕಿದ್ದ ಪತ್ನಿ ಜೀವನಾಂಶ ನೀಡುವಂತೆ ಅರ್ಜಿ ಸಲ್ಲಿಸಿದ್ದು ಇದಕ್ಕೆ ಸಂಭಂದಿಸಿದ ಆದೇಶ ನೀಡಲಾಗಿದೆ. ಕುಟುಂಬಿಕ ದೌರ್ಜನ್ಯದಿಂದ ಮಹಿಳಾ ಸಂರಕ್ಷಣಾ ಕಾಯ್ದೆ 2005 ಸೆಕ್ಷನ್ 12 ರ ಅಡಿಯಲ್ಲಿ ಜೀವನಾಂಶ ನೀಡಲು ನಿರಾಕರಿಸಿದ್ದ ಪತಿಯ ವಿರುದ್ಧ ಮಹಿಳೆ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ತನಿಖೆ ಮಾಡಲಾಗಿ ಆಕೆಗೆ ಜೀವನಾಂಶ ನೀಡುವ ಅಗತ್ಯ ಇಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.

ಉದ್ದೇಶ ಏನು?

ಈ ಪ್ರಕರಣವನ್ನು ನ್ಯಾಯಾಲಯದಲ್ಲಿ ನ್ಯಾಯ ಮೂರ್ತಿ ರಾಜೇಂದ್ರ ಬಾದಾಮಿಕರ್ (Justice Rajendra Badamikar) ಅವರು ಪರಿಶೀಲನೆ ಮಾಡಿ ತೀರ್ಪು ನೀಡಿದ್ದಾರೆ. ಅದರ ಪ್ರಕಾರ ಮಹಿಳೆಯೂ ತನ್ನ ಪತಿಯ ಜೊತೆಗೆ ಪ್ರಾಮಾಣಿಕ ವಾಗಿ ಇರದೆ ನೆರೆ ಹೊರೆಯ ಪುರುಷರ ಜೊತೆ ವಿವಾಹೇತರ ಸಂಬಂಧ ಇಟ್ಟು ಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಕೂಡ ದೊರೆತಿದೆ. ಅರ್ಜಿ ದಾರರೇ ಅನೈತಿಕ ಸಂಬಂಧ ಇಟ್ಟು ಕೊಂಡಿರುವಾಗ ಆಕೆಗೆ ಜೀವನಾಂಶ ಕೇಳುವ ಯಾವುದೇ ಹಕ್ಕು ಇರಲಾರದು. ಕಾನೂನು ಬದ್ಧವಾಗಿ ವಿವಾಹವಾಗಿ ನೈತಿಕತೆಯಿಂದ ಇದ್ದವರಿಗೆ ಜೀವನಾಂಶ ಕೇಳುವುದು ಹಕ್ಕಾಗಿದೆ. ಹಾಗಾಗಿ ಈ ಅರ್ಜಿಯನ್ನು ಹೈಕೋರ್ಟ್ (High Court) ನಲ್ಲಿ ವಜಾ ಮಾಡಲಾಗಿದೆ.

ಒಟ್ಟಾರೆಯಾಗಿ ಜೀವನಾಂಶ ಸಿಗಬೇಕು ಎಂಬ ಕಾರಣಕ್ಕೆ ಬೇಕಾಬಿಟ್ಟಿ ಅರ್ಜಿ ಸಲ್ಲಿಸುವವರಿಗೆ ಇದೊಂದು ಒಳ್ಳೆ ಪಾಠ ಎನ್ನಬಹುದು. ಕೋರ್ಟ್ ನ ಆದೇಶ ಮೀರಿ ಯಾವುದೇ ಚಟುವಟಿಕೆ ಮಾಡಿದರೂ ಅದಕ್ಕೆ ಕೋರ್ಟ್ ನಲ್ಲಿಯೂ ಅನೇಕ ನೀತಿ ನಿಯಮ ಇರುತ್ತದೆ ಎಂಬುದು ಇಲ್ಲಿ ಸಾಬೀತಾಗಿದೆ.

advertisement

Leave A Reply

Your email address will not be published.