Karnataka Times
Trending Stories, Viral News, Gossips & Everything in Kannada

Arecanut Plantation: ಬೇಸಿಗೆಯಲ್ಲಿ ಅಡಿಕೆ ತೋಟವನ್ನು ಈ ರೀತಿ ಆರೈಕೆ ಮಾಡಿ! ಟೆನ್ಷನ್ ಬೇಡ ಇಳುವರಿ ಗ್ಯಾರಂಟಿ

advertisement

ಇಂದು ಕೃಷಿಯನ್ನೆ ನಂಬಿಕೊಂಡು ಬದುಕು ಕಟ್ಟಿಕೊಂಡ ರೈತರು‌ಬಹಳಷ್ಟು ಮಂದಿ ಇದ್ದಾರೆ ಅದರಲ್ಲೂ ಅಡಿಕೆ ಕೃಷಿ ಇಂದು‌ ಎಲ್ಲೆಡೆ ಹೆಚ್ಚಾಗಿದೆ.‌ಈ ಭಾರಿ ಮಳೆ ಇಲ್ಲದೆ ಕೃಷಿ ಪೋಷಣೆ ಮಾಡಲು ರೈತರು ಬಹಳಷ್ಟು ಕಷ್ಟ ಪಡುತ್ತಿದ್ದಾರೆ.‌ಅದರಲ್ಲೂ ನೀರಿನ ಸಮಸ್ಯೆ ಬಹಳಷ್ಟು ಹೆಚ್ಚಾಗಿದೆ.‌ ಈ ಬೇಸಿಗೆ ಸಂದರ್ಭದಲ್ಲಿ ನಾವು ಅಡಿಕೆ ತೋಟದ (Arecanut Plantation) ರಕ್ಷಣೆಯನ್ನು ಹೇಗೆ ಮಾಡಬೇಕು, ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಮಾಹಿತಿ‌ ಇಲ್ಲಿದ್ದು ಕೃಷಿಕರು ಹೀಗೆ ನಿರ್ವಹಣೆ ಮಾಡಿದ್ರೆ ಬೇಸಿಗೆಯಲ್ಲಿಯು ಕೂಡ ಅಡಿಕೆ ಮರಗಳನ್ನು ಹಸಿರನ್ನಾಗಿಸ ಬಹುದು.

ಹೀಗೆ ಮಾಡಬಾರದು:

ಬೇಸಿಗೆಯಲ್ಲಿ ನೀವು ಅಡಿಕೆ ತೋಟವನ್ನು ಕಲ್ಟಿವೇಷನ್ (Cultivation) ಮಾಡಬಾರದು. ತೋಟದಲ್ಲಿ (Arecanut Plantation) ಹುಲ್ಲು ಆಗಿದ್ದರೆ ಬ್ರೇಷ್ ಕಟ್ಟಿಂಗ್ ಮಾಡಬಹುದು. ತೋಟದ ತುಳಿತ ಆಗದೇ ನೀರು ಗಾಳಿ ಸರಿಯಾಗಿ ಮರಗಳಿಗೆ ಸಿಗುವಂತೆ ಆಗಬೇಕು. ನೀವು ಬೇಸಿಗೆ ಸಂದರ್ಭದಲ್ಲಿ ಬಾಣಲೆ ಹೊಡಿಸುವುದು, ತೋಟ ವ್ಯವಸಾಯ ಮಾಡಿದ್ರೆ ಅಡಿಕೆ ಗೊಣೆ ಉದುರುತ್ತದೆ.

 

Image Source: YouTube

 

ಅದೇ ರೀತಿ ಗೊಣೆ ಬತ್ತಿ ಹೋಗಲಿದೆ. ಹಾಗಾಗಿ ಗಿಡಗಳು ಬೆಳೆಯುವ ಸಂದರ್ಭದಲ್ಲಿ ನೀವು ತೋಟ ಕಲ್ಟಿವೇಷನ್ ಮಾಡಿದ್ದಲ್ಲಿ ಬೇರುಗಳು ತುಂಡಾಗಿ ಮಣ್ಣಿನ ಪೋಷಣೆ ಮತ್ತಷ್ಟು ಕಡಿಮೆಯಾಗಲಿದೆ.ಹಾಗಾಗಿ ತೋಟವನ್ನು ಹಾಗಿಯೇ ಸಂರಕ್ಷಣೆ ಮಾಡಿ.

ಜೀವಾಮೃತ ಬಳಸಿ:

advertisement

ಅದೇ ರೈತರು ರಸಾಯನಿಕ ಗೊಬ್ಬರ ಬಳಸದೇ ಸಾವಯವ ಗೊಬ್ಬರ ಬಳಕೆ ಮಾಡುವ ಮೂಲಕ‌ ಕೃಷಿಯಲ್ಲಿ ಹೆಚ್ಚಿನ ಅಭಿವೃದ್ದಿ ಯನ್ನು ಕಾಣಬಹುದಾಗಿದೆ.ಗೋಮೂತ್ರದಿಂದ ಜೀವಾಮೃತ ತಯಾರಿಸಿ ಕೃಷಿಗೆ ಬಳಸಿ ಸಾವಯವ ಕೃಷಿ ಮಾಡಬಹುದು. ಜೀವಾಮೃತವನ್ನು ಬಳಕೆ ಮಾಡುವ ಮೂಲಕ ಕೃಷಿಯಲ್ಲಿ ಹೆಚ್ಚು ಆದಾಯವನ್ನು ಪಡೆಯಬಹುದಾಗಿದೆ, ಮನೆಯ ಆಸುಪಾಸಿನಲ್ಲಿ ಇದರ ಕಚ್ಚಾ ವಸ್ತುಗಳು ದೊರಕಲಿದ್ದು ಇದನ್ನು ತಯಾರಿಕೆ ಮಾಡುವುದು ಸಹ ಸುಲಭ

ನೀರು ಬೇಕಾದಷ್ಟೆ ಪ್ರಮಾಣದಲ್ಲಿ ನೀಡಿ:

 

Image Source: The Hindu

 

ಅದೇ ರೀತಿ ನೀವು ಅಡಿಕೆ ತೋಟ (Arecanut Plantation) ಕ್ಕೆ ನೀರನ್ನು ಬೇಕಾದಷ್ಟೆ ಪ್ರಮಾಣದಲ್ಲಿ ನೀಡಿ. ಹೆಚ್ಚಿನ ಕೃಷಿಕರು ಹೆಚ್ಚಿನ ಇಳುವರಿ ಪಡೆಯಬೇಕೆಂಬ ನಿಟ್ಟಿನಲ್ಲಿ ಈ ಬೇಸಿಗೆಯಲ್ಲಿ ಹೆಚ್ಚು ಪ್ರಮಾಣದ ನೀರನ್ನು ತೋಟಗಳಿಗೆ ಸಿಂಪಡಣೆ ಮಾಡುತ್ತಾರೆ. ಹಾಗೇ ಮಾಡುವಂತಿಲ್ಲ. ತೋಟಕ್ಕೆ ದಿನ ನಿತ್ಯ ನೀರು ಬಿಡದೇ ಎರಡು ವಾರಗಳಿಗೊಮ್ಮೆ ನೀರು ಬಿಟ್ಟರೆ ಹೆಚ್ಚು ಸೂಕ್ತ ಆಗಿದೆ.

ಇತರ ಬೆಳೆಯನ್ನು ಮಾಡಬಹುದು:

ನೀವು ಅಡಿಕೆಯ ಜೊತೆ ಇತರ ಬೆಳೆಯನ್ನು ಸಹ ಬೆಳೆಯಬಹುದು. ಹೆಚ್ಚಿನ‌ರೈತರು ದ್ವಿದಳ ಧಾನ್ಯ, ಕರಿಮೆಣಸು ಇತ್ಯಾದಿ ಕೃಷಿಯನ್ನು ಅಡಿಕೆ ಜೊತೆ ಮಾಡುತ್ತಾರೆ.‌ ಇದರಿಂದ ಲಾಭವು ಸಹ ಹೆಚ್ಚಾಗಲಿದೆ. ಅದೇ ರೀತಿ ತೋಟ ದಲ್ಲಿ ಇರುವ ಕಸ ಕಡ್ಡಿ, ಎಲೆ ಇತ್ಯಾದಿಗಳನ್ನು ಇತರ ಕಡೆ ಹಾಕದೇ ತೋಟದಲ್ಲಿಯೇ ಗೊಬ್ಬರವಾಗಿ ಮಾರ್ಪಡಲು ಬಿಡಿ.

advertisement

Leave A Reply

Your email address will not be published.