Karnataka Times
Trending Stories, Viral News, Gossips & Everything in Kannada

Arecanut Plantation: ಅಡಿಕೆ ತೋಟಕ್ಕೆ ಸುಣ್ಣ ಹಚ್ಚುವುದರಿಂದ ಆಗುವ ಲಾಭವೇನು?

advertisement

ಅಡಕೆ ತೋಟಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿಕ್ಷೀಣಿಸುತ್ತಿದೆ. ಇದಕ್ಕೆ ಹಲವು ಕಾರಣ ಇರಬಹುದು. ಆದರೀಗ ಇರುವ ಅಡಕೆ (Arecanut) ಮರಗಳನ್ನು ಸಂರಕ್ಷಿಸಿಕೊಳ್ಳಲು ಬೆಳೆಗಾರರು ನಾನಾ ಸಂಕಷ್ಟ ಎದುರಿಸುವ ಸಂದರ್ಭ ಬಂದೊದಗಿದೆ. ಅಡಕೆ ಮರಗಳ ಉತ್ತಮ ಪೋಷಣೆಗಾಗಿ ಕಾಂಡದ ನಾಲ್ಕಾರು ಅಡಿ ಎತ್ತರದವರೆಗೆ ನಾನಾ ವಸ್ತುಗಳ ಮಿಶ್ರಣದೊಂದಿಗೆ ಸುಣ್ಣ ಲೇಪಿಸಲಾಗುತ್ತಿದೆ. ಈ ಮೂಲಕ ಬೆಳೆಗಾರರು ಮರಗಳ ಸಂರಕ್ಷಣೆಗೆ ಮೊರೆ ಹೋಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಮುಂಗಾರು ಮತ್ತು ಹಿಂಗಾರಿನಲ್ಲಿವ್ಯತ್ಯಾಸ ಉಂಟಾಗುತ್ತಿದೆ. ಅತಿವೃಷ್ಟಿ, ಅನಾವೃಷ್ಟಿಗಳ ಸವಾಲುಗಳ ಮಧ್ಯೆ ಉತ್ತಮ ಇಳುವರಿ ಪಡೆಯಲು ಹೆಣಗಾಟ ನಡೆಸುವುದು ತಪ್ಪದಾಗಿದೆ.

ಅಡಿಕೆ ಮರಕ್ಕೆ ಸುಣ್ಣ ಲೇಪನ ಮಾಡುವುದೇಕೆ ?

 

 

ಕಳೆದ ನಾಲ್ಕಾರು ವರ್ಷಗಳಿಂದ ಮಳೆ ಕೈಕೊಟ್ಟ ವೇಳೆ ಬೆಳೆಗಾರರ ಪಾಡು ಹೇಳತೀರದಾಗಿತ್ತು. ಸಾಲಗಾರರಾಗಿ ಹನಿ ನೀರಿಗೂ ಪರಿತಪಿಸಿದ್ದರು. ಪ್ರಸಕ್ತ ವರ್ಷದ ಮಳೆ ಬೆಳೆಗಾರರ ಹಿಂದಿನ ಕಷ್ಟಗಳನ್ನು ಮರೆಸಿದ್ದು, ಹೆಚ್ಚಿನ ಇಳುವರಿಗಾಗಿ ಪ್ರಯತ್ನ ಮಾಡುವಂತೆ ಮಾಡಿದೆ. ಅಡಿಕೆ ಮರಗಳ ಉತ್ತಮ ಪೋಷಣೆಗಾಗಿ (Arecanut Plantation) ಕಾಂಡದ ನಾಲ್ಕಾರು ಅಡಿ ಎತ್ತರದವರೆಗೆ ನಾನಾ ವಸ್ತುಗಳ ಮಿಶ್ರಣದೊಂದಿಗೆ ಸುಣ್ಣವನ್ನು ಲೇಪಿಸಲಾಗುತ್ತಿದೆ. ಈ ಮೂಲಕ ಬೆಳೆಗಾರರು ಮರಗಳ ರಕ್ಷಣೆಗೆ ತಮ್ಮದೇ ಐಡಿಯಾ ಮಾಡುತ್ತಿರುವುದು ಕಂಡುಬರುತ್ತಿದೆ. ಕೊಳೆ ರೋಗ. ಎಲೆ ಚುಕ್ಕಿ ರೋಗ ಮುಂತಾದ ರೋಗಗಳಿಂದ ಬಿಸಿಲಿನ ಝಳ ಕ್ಕೆ ಅಡಿಕೆ ಮರವನ್ನು ಕಾಯ್ದುಕೊಳ್ಳಲು ಸಾಮನ್ಯವಾಗಿ ಸುಣ್ಣವನ್ನು ಕಲಸಿ ಮರಕ್ಕೆ ಬಳಿಯುತ್ತಾರೆ.

advertisement

ಸುಣ್ಣದ ಲೇಪನ ಮಾಡುವದು ಹೇಗೆ?

ಕೋಳಿ ಗೊಬ್ಬರ ಪೂರೈಕೆ ಸೇರಿದಂತೆ ಬೇಸಿಗೆಯ ಬಿಸಿಲ ಝಳಕ್ಕೆ ಮರ ಒಡೆಯದಂತೆ ನೋಡಿಕೊಳ್ಳಲಾಗುತ್ತಿದೆ. ಕಾಂಡಕ್ಕೆ ಉತ್ತಮ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ 4 ರಿಂದ 5 ಅಡಿ ಎತ್ತರದವರೆಗೆ ಸ್ವಾಭಾವಿಕ ಸುಟ್ಟ ಸುಣ್ಣದಿಂದ ಲೇಪನ ಮಾಡಿ ಮರಗಳನ್ನು ರಕ್ಷಿಸುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ. ಸುಣ್ಣ ಲೇಪನದಿಂದ ಮರಗಳು ಮೃದುವಾಗುತ್ತವೆ ಎನ್ನಲಾಗುತ್ತದೆ. ಸುಣ್ಣದ ನೀರಿನೊಂದಿಗೆ ಹದಕ್ಕೆ ತಕ್ಕಷ್ಟು ಮೈದಾ ಹಿಟ್ಟು, ಹರೆಳೆಣ್ಣೆ, ಕುದಿಸಿ ಆರಿಸಿದ ಬೆಲ್ಲದ ಪಾನಕವನ್ನು ಮಿಶ್ರಣ ಮಾಡಿ ಪ್ರತಿ ಮರಕ್ಕೆ ಬಣ್ಣ ಬಳಿಯುವ ಬ್ರಶ್‌ ಬಳಸಿ ಲೇಪಿಸಲಾಗುತ್ತದೆ.

25 ರಿಂದ 30 ಕೆಜಿ ಕಲ್ಲು ಸುಣ್ಣ ಸುಮಾರು 600 ರಿಂದ 700 ಮರಗಳಿಗೆ ಬಳಿಯಲು ಬಳಕೆ ಆಗುತ್ತದೆ. ಸುಣ್ಣದ ಲೇಪನ ಮಾಡದೇ ಹೋದರೆ ನೀರಿನ ಕೊರತೆ ಇರುವ ತೋಟಗಳಾಗಿದ್ದಲ್ಲಿ ಬಿಸಿಲಿನ ಪರಿಣಾಮ ಮರದ ಕಾಂಡದ ಮೇಲೂ ಉಂಟಾಗಿ ಮರದ ಕಾಂಡ ಹಳದಿಗಟ್ಟುತ್ತದೆ. ಆಗ ಮರದ ಪೋಷಣೆ ಕ್ಷೀಣಿಸುತ್ತದೆ. ಮುಂದೆ ಅಡಿಕೆ ಇಳುವರಿಯಲ್ಲೂ ದುಷ್ಪರಿಣಾಮ ಉಂಟಾಗುತ್ತದೆ ಎಂಬುದು ಬೆಳೆಗಾರರ ಅಭಿಪ್ರಾಯ.

ಅಡಿಕೆ ಮರದ ಉಳಿವಿಗೆ ನಾನಾ ಉಪಾಯ:

ಕೆಲ ರೈತರು ಅಡಕೆ ತೋಟದ ಸುತ್ತಲಿನ ಮರಗಳ ಮೇಲೆ ಬಿಸಿಲ ಝಳದ ಪರಿಣಾಮ ತಪ್ಪಿಸಲು ಸುತ್ತಲೂ ತೇಗ, ಬೀಟೆ, ಅರಬೇವು ಸೇರಿದಂತೆ ಇತರ ಮರಗಳನ್ನು ನೆರಳಿನ ಉದ್ದೇಶದಿಂದ ಬೆಳೆಸುತ್ತಿದ್ದಾರೆ. ಹಲವರು ಕಾಂಡದ ಸುಮಾರು 5-6 ಅಡಿಗಳವರೆಗೂ ತೆಂಗಿನ ಗರಿಗಳಿಂದ ಹೆಣೆದು ನೆರಳು ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ನಾನಾ ಕಾರಣಗಳಿಂದ ಕಂಗಾಲಾಗಿರುವ ಅಡಕೆ ಬೆಳೆಗಾರರು ಈ ಬಾರಿ ಸುರಿದ ಉತ್ತಮ ಮಳೆಯಿಂದ ಮರಗಳನ್ನು ಸಂರಕ್ಷಿಸಿಕೊಂಡು ಉತ್ತಮ ಇಳುವರಿ ಪಡೆಯುವ ನಿಟ್ಟಿನಲ್ಲಿ ಚಿತ್ತ ನೆಟ್ಟಿದ್ದಾರೆ.

advertisement

Leave A Reply

Your email address will not be published.