Karnataka Times
Trending Stories, Viral News, Gossips & Everything in Kannada

Maruti Alto 800: ಭಾರತೀಯರ ಮೆಚ್ಚಿನ ಆಲ್ಟೋ 800 ಈಗ 2024 ರ ಹೊಸ ರೂಪದಲ್ಲಿ! ಬೆಲೆ ಅತೀ ಕಡಿಮೆ

advertisement

ಮಾರುತಿ ಸುಜುಕಿಯ ಸಾಮಾನ್ಯ ಎಲ್ಲಾ ಕಾರ್ ಮಾಡೆಲ್ ಗಳು ಕೂಡ ಬಹಳ ಜನಪ್ರಿಯವಾಗಿವೆ. ಭಾರತದಲ್ಲಿ ಮಧ್ಯಮ ವರ್ಗದ ಜನರು ಬಹಳ ಹೆಚ್ಚಿನ ಜನಸಂಖ್ಯೆಯಲ್ಲಿ ಇದ್ದಾರೆ ಇವರನ್ನು ಗುರಿಯಾಗಿಟ್ಟುಕೊಂಡು ಮಾರುತಿ ಹಲವಾರು ಮಾಡೆಲ್ ಗಳನ್ನು ಲಾಂಚ್ ಮಾಡುತ್ತಲೇ ಇದೆ ಹಾಗೂ ಇವರ ಎಲ್ಲಾ ಕಾರುಗಳು ಸಾಮಾನ್ಯವಾಗಿ ಜನರಿಗೆ ಇಷ್ಟವಾಗುತ್ತಿವೆ.

ಹೀಗೆ ಮಾರುತಿ ಸುಝುಕಿಯ ಜನಪ್ರಿಯ ಸರಣಿಯಲ್ಲಿ ಇರುವ ಒಂದು ಕಾರು ಎಂದರೆ ಆಲ್ಟೋ. ಚಿಕ್ಕದಾಗಿದ್ದರೂ ಬಹಳಷ್ಟು ಜನರ ಮೊದಲ ಆಯ್ಕೆ ಈ ಕಾರಾಗಿದೆ. ಮೊದಲಿಗೆ ಮಾರುತಿ ಸುಜುಕಿ ಆಲ್ಟೊ ಎಂದಿದ್ದ ಕಾರು ಆಮೇಲೆ Alto K10 ಎಂದು ಬದಲಾಗಿತ್ತು. ಮಾರುತಿ ಈಗ ತನ್ನ ಬಜೆಟ್ ಫ್ರೆಂಡ್ಲಿ ಕಾರಾದ Maruti Alto 800 ಅನ್ನು ಇನ್ನೊಮ್ಮೆ ಲಾಂಚ್ ಮಾಡಿದೆ. ಲೋ ಬಜೆಟ್ ಸೆಗ್ಮೆಂಟ್ ನಲ್ಲಿ ಈ ಕಾರು ಬಹಳಷ್ಟು ಮಂದಿಯ ಮೊದಲ ಆಯ್ಕೆ ಆಗುವುದರಲ್ಲಿ ಅನುಮಾನವೇ ಇಲ್ಲ.

ಈಗ ಜನರ ಮೆಚ್ಚಿನ Maruti Alto 800 ಕಾರು ಹೊಸ ಫೀಚರ್ಸ್ ಮತ್ತು ತಂತ್ರಜ್ಞಾನದೊಂದಿಗೆ ಲಾಂಚ್ ಆಗಿದೆ. ಇದು ಕಾರ್ ನ ಸಮಗ್ರ ಲುಕ್ಸ್ ಮತ್ತು ಫೀಲ್ ಅನ್ನು ಬದಲಾಯಿಸುವುದು ನಿಜ. ಈ ಕಾರಿನ ಸ್ಟಿಯರಿಂಗ್ ವೀಲ್ ತುಂಬಾ ಸಾಫ್ಟ್ ಆಗಿರುವುದರಿಂದ ಡ್ರೈವಿಂಗ್ ಕಂಫರ್ಟ್ ಹೆಚ್ಚಾಗಿರಲಿದೆ. ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಮತ್ತು ಬಹಳ ಕಡಿಮೆ ಟರ್ನಿಂಗ್ ರೇಡಿಯಸ್ ಅನ್ನು ಹೊಂದಿರುವುದರಿಂದ ಈ ಕಾರು ನಗರಗಳ ಡ್ರೈವಿಂಗ್ ನಲ್ಲಿ ಹಾಗೂ ನಗರಗಳ ದೊಡ್ಡ ಸಮಸ್ಯೆಯಾದ ಪಾರ್ಕಿಂಗ್ ಸಮಸ್ಯೆಗಳಿಗೆ ಒಂದು ಸಮರ್ಪಕವಾದ ಉತ್ತರವಾಗಲಿದೆ.

ಮೈಲೇಜ್ ಕಿಂಗ್ ಆಲ್ಟೋ – 34 ಕಿ.ಮೀ ಪ್ರತೀ ಲೀಟರ್ ನ ಮೈಲೇಜ್:

 

advertisement

 

ಮಾರುತಿ ಕಾರುಗಳ ಮೊದಲಿನಿಂದಲೂ ಆಕರ್ಷಕವಾದ ಫೀಚರ್ಸ್ ಎಂದರೆ ಅದರ ಮೈಲೇಜ್. ಮಧ್ಯಮ ವರ್ಗದ ಜನರು ಹೆಚ್ಚಾಗಿ ಪರಿಗಣಿಸುವುದೇ ಕಾರ್ ನ ಮೈಲೇಜ್ ಆಗಿರುತ್ತದೆ. ಈ ಕಾರು 34 ಕಿಲೋಮೀಟರ್ ಪ್ರತಿ ಲೀಟರ್ ನ ಮೈಲೇಜ್ ಅನ್ನು ನೀಡಲಿದೆ ಎಂಬುದಾಗಿ ವರದಿಗಳು ಹೇಳಿವೆ. Maruti Alto 800 ಸಿ ಸಿ ಯ ಎಂಜಿನ್ ಅನ್ನ ಹೊಂದಿದ್ದು ಈ ಮೈಲೇಜ್ ಪಡೆಯುವುದಕ್ಕೆ ಸಾಧ್ಯವಾಗಿದೆ.

ಅಫೋರ್ಡೇಬಲ್ ಬೆಲೆಗಳು:

Maruti Alto 800  2024 ರ ಮಾದರಿ ಬಹಳ ಕಡಿಮೆ ಬೆಲೆಗೆ ಲಾಂಚ್ ಆಗುವ ಸಾಧ್ಯತೆ ಇದೆ. ಮಾರುತಿ ಸುಝುಕಿ ಆಲ್ಟೋ 2024 ರ ಮಾದರಿ 5 ಲಕ್ಷಕ್ಕಿಂತಲೂ ಕಡಿಮೆ ಬೆಲೆಯ ಎಕ್ಸ್ ಶೋರೂಮ್ ಬೆಲೆಗಳೊಂದಿಗೆ ಲಾಂಚ್ ಆಗಲಿದೆ ಎನ್ನಲಾಗಿದೆ. ಇಂದಿನ ಜಗತ್ತಲ್ಲಿ ಈ ಬೆಲೆಯ ಕಾರು ಬಹಳಷ್ಟು ಮಂದಿಯ ದ್ವಿಚಕ್ರ ವಾಹನದ ಸವಾರಿಯನ್ನು ಕಾರಿಗೆ ಪರಿವರ್ತಿಸುವುದು ಸುಳ್ಳಲ್ಲ. ಲಾಂಚ್, ವೇರಿಯಂಟ್ ಗಳು ಮತ್ತು ಇತರ ಮಾಹಿತಿಗಾಗಿ ನಿಮ್ಮ ಸಮೀಪದ ಮಾರುತಿ ಸುಝುಕಿ ಡೀಲರ್ ಅನ್ನು ಸಂಪರ್ಕಿಸಿ.

advertisement

Leave A Reply

Your email address will not be published.