Karnataka Times
Trending Stories, Viral News, Gossips & Everything in Kannada

March Deadlines: ಮಾರ್ಚ್ ತಿಂಗಳಲ್ಲಿ ಈ 8 ಕೆಲಸಗಳನ್ನು ತಪ್ಪದೇ ಮಾಡಿ! ಹೊಸ ಆದೇಶ

advertisement

ಮಾರ್ಚ್ 1 ಬರುತ್ತಿದ್ದಂತೆ ಹಣಕಾಸಿನ ಅನೇಕ ಕಾರ್ಯ ನಿರ್ವಹಣೆಗಳು ಬದಲಾಗುತ್ತಿರುತ್ತದೆ. ಮಾರ್ಚ್ ಒಂದು ಬಂತು ಎಂದರೆ ಆಡಳಿತ ವ್ಯವಸ್ಥೆ ಬದಲಾವಣೆ ಸೇರಿದಂತೆ ಯೋಜನೆ , ನೀತಿ ನಿರೂಪಣೆ ಎಲ್ಲ ಬದಲಾವಣೆ ಆಗಲಿದೆ. ಅಷ್ಟು ಮಾತ್ರವಲ್ಲದೇ ನೂತನ ಅರ್ಜಿ ಆಹ್ವಾನ , ಫಲಾನುಭವಿಗಳ ಆಧಾರ್ ಕಾರ್ಡ್ ಲಿಂಕ್ ಅಪ್ಡೇಟ್ ಸೇರಿದಂತೆ ಅನೇಕ ಕೆಲಸ ಕಾರ್ಯಗಳಿಗೆ ಮಾರ್ಚ್ ತಿಂಗಳೆ ಪ್ರಶಸ್ತ ಸಮಯ (March Deadlines) ಎನ್ನಬಹುದು. ಮಾರ್ಚ್ ನಲ್ಲಿ ಅನೇಕ ಬ್ಯಾಂಕಿಂಗ್ ವಹಿವಾಟಿಗೆ ಮಾರ್ಚ್ ತಿಂಗಳಿನಲ್ಲೇ ಗಡುವನ್ನು ನೀಡಲಾಗಿದೆ.

Year End ಲೆಕ್ಕಾಚಾರ:

ಭಾರತೀಯ ಜಾಯಮಾನದಲ್ಲಿ ಮಾರ್ಚ್ (March) ಮತ್ತು ಎಪ್ರಿಲ್ (April) ತಿಂಗಳಿನಂದು ಫೈನಾನ್ಶಿಯಲ್ ಇಯರ್ ಎಂಡ್ ದಿನವಾಗಿದೆ. 2023ರ ವರ್ಷಾಂತ್ಯದ ತಿಂಗಳು ಮಾರ್ಚ್ ನಲ್ಲಿ ವರ್ಷ ಇಡಿ ಲೆಕ್ಕಾಚಾರ ಪ್ರಕ್ರಿಯೆ ನಡೆಯಲಿದೆ. ಈ ಎರಡು ತಿಂಗಳು ಹಣಕಾಸಿನ ಲೆಕ್ಕಾಚಾರದ ತಿಂಗಳು ಎಂದೇ ಪ್ರಾಮುಖ್ಯತೆ ಪಡೆದಿದೆ. ಮಾರ್ಚ್ (March) ತಿಂಗಳಿನಲ್ಲೇ ಕೆಲವು ಪ್ರಮುಖ ಹಣಕಾಸು ಯೋಜನೆಗಳು ಅಂತಿಮವಾಗಲಿದೆ. ಮಾರ್ಚ್ ನಲ್ಲಿ ನಡೆಯಲಿರುವ ಕೆಲವು ಹಣಕಾಸಿನ ಸಾಂಸ್ಥಿಕ ಬದಲಾವಣೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಈ ಎಲ್ಲ ಸಂಗತಿ ಬಗ್ಗೆ ಗಮನಿಸಿ:

advertisement

ಮಾರ್ಚ್ 14 ಕೊನೆ ದಿನ:

  • ಆಧಾರ್ ಕಾರ್ಡ್ (Aadhaar Card) ನ ಪ್ರಮುಖ ಸಂಗತಿಗಳು ಬದಲಾವಣೆ ಆಗುವಂತಹ ಸಂದರ್ಭದಲ್ಲಿ ಅಪ್ಡೇಟ್ ಪ್ರಕ್ರಿಯೆ ಮಾಡಲು ಮಾರ್ಚ್ 14 ಕೊನೆಯ ದಿನವಾಗಿದೆ. ಆಧಾರ್ ಕೇಂದ್ರಕ್ಕೆ ಹೋಗಿ ಶುಲ್ಕ ಪಾವತಿ ಮಾಡುವ ಮೂಲಕ ಮಾರ್ಚ್ 14ರ ಒಳಗೆ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಬೇಕು. ಆನ್ಲೈನ್ ಮೂಲಕ ಕೂಡ ಆಧಾರ್ ಅಪ್ಡೇಟ್ ಮಾಡಬಹುದಾಗಿದೆ.
  • Paytm Payments Bank ಆ್ಯಪ್ ಬ್ಯಾಂಕಿನ ನಿಯಮ ಉಲ್ಲಂಘನೆ ಮಾಡಿದ್ದ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಯಿತು. ಈ ಮೂಲಕ ಫೆಬ್ರವರಿ 29 ಕೊನೆಯ ದಿನ ಎಂದು ಹೇಳಲಾಗಿತ್ತು ಬಳಿಕ ಮಾರ್ಚ್ 15 ರ ವರೆಗೆ ಪೇಟಿಎಂ ಪೇಮೆಂಟ್ ವ್ಯವಹಾರ ಮಿತಿ ಮಾಡಲಾಗಿದೆ. ಇದಾದ ಬಳಿಕ ಯಾವುದೇ ಪೇಮೆಂಟ್, ಡೆಪಾಸಿಟ್ ಮಾಡುವಂತಿಲ್ಲ.
  • ನೀವು ಟಿಡಿಎಸ್ ಪಾವತಿದಾರರಾಗಿದ್ದಲ್ಲಿ ನಿಮ್ಮ ವೇತನ ಮಾಹಿತಿ ನೀಡಬೇಕು. ಕೆಲ ಹೂಡಿಕೆಗಳಿಗೆ ತೆರಿಗೆ ವಿನಾಯಿತಿ ಸೌಲಭ್ಯ ಸಿಗಲಿದೆ. ತೆರಿಗೆ ಉಳಿಸುವ ಹಣಕಾಸಿನ ಸ್ಕೀಂ ನಲ್ಲಿ ಹೂಡಿಕೆ ಮಾಡಿದರೆ ಅವುಗಳನ್ನು ತೋರಿಸಬೇಕು. ಮಾರ್ಚ್ 31 ಇದಕ್ಕೆ ಡೆಡ್ ಲೈನ್ ಆಗಿದೆ.
  • SBI ನಲ್ಲಿ ಗೃಹ ಸಾಲದ ಮೇಲೆ ರಿಯಾಯಿತಿ ನೀಡುತ್ತಿದೆ. ಗ್ರಾಹಕರ ಕ್ರೆಡಿಟ್ ಸ್ಕೋರ್ ಗೆ ಅನುಗುಣವಾಗಿ ಬಡ್ಡಿದರದ ಮೇಲೆ ರಿಯಾಯಿತಿ ಸೌಲಭ್ಯ ನೀಡಲಾಗುವುದು. ಈ ಸೌಲಭ್ಯಕ್ಕೆ ಅರ್ಜಿ ಹಾಕಲು ಮಾರ್ಚ್ 31 ಕೊನೆಯದಿನವಾಗಿದೆ. ನಿಮ್ಮ ಸಿಬಿಲ್ ಸ್ಕೋರ್ 750ಕ್ಕೆ ಮೇಲ್ಪಟ್ಟಿದ್ದರೆ ಗೃಹಸಾಲದ ಮೇಲೆ ಬಡ್ಡಿದರವು 9.15% ನಷ್ಟು ಇದ್ದದ್ದು 8.60% ಗೆ ಇಳಿಸಲಾಗುವುದು.

 

 

ಬ್ಯಾಂಕ್ ನ FD ದರ ಬದಲು:

  • IDBI ಬ್ಯಾಂಕ್ ನಲ್ಲಿ ಉತ್ಸವ್ ಹೆಸರಿನ ಕಾಲಬಲ್ FD ಸ್ಕೀಂ ಅನ್ನು ಜಾರಿಗೆ ತರಲಾಗಿದೆ. ಇದರಲ್ಲಿ ನಿಮಗೆ ವಾರ್ಷಿಕ 7.55% ಬಡ್ಡಿದರ ನಿಮಗೆ ಸಿಗಲಿದೆ. ಮಾರ್ಚ್ 31 ಇದಕ್ಕಡ ಕೊನೆ ದಿನವಾಗಿದೆ.
  • SBI ನಲ್ಲಿ ಅಮೃತ್ ಕಳಶ್ ಯೋಜನೆ ಜಾರಿಗೆ ತರಲಾಗಿದೆ.400 ದಿನಗಳ FD ಮೇಲೆ 7.10% ವಾರ್ಷಿಕ ಬಡ್ಡಿದರ ಸಿಗಲಿದೆ. ಹಿರಿಯ ನಾಗರಿಕರಿಗೆ 7.60% ಬಡ್ಡಿದರ ಸಿಗಲಿದ್ದು ಮಾರ್ಚ್ 31 ಡೆಡ್ ಲೈನ್ ಆಗಿದೆ.
  • SBI ಸೀನಿಯರ್ ಸಿಟಿಜನ್ ಗಾಗಿ ವೀಕೆರ್ FD ಪರಿಚಯ ಮಾಡಿದೆ. ವಾರ್ಷಿಕ ಬಡ್ಡಿದರ 7.50% ಬಡ್ಡಿದರ ಸಿಗಲಿದೆ, ಮಾರ್ಚ್ 31ರ ವರೆಗೆ ಅವಕಾಶ ನೀಡಲಾಗಿದೆ.

advertisement

Leave A Reply

Your email address will not be published.