Karnataka Times
Trending Stories, Viral News, Gossips & Everything in Kannada

Arecanut Cultivation: ಅಡಿಕೆ ಸಸಿಗೆ ಕೋಳಿ ಗೊಬ್ಬರ ಬಳಕೆ ಸೂಕ್ತವೇ? ತಜ್ಞರ ಅಭಿಪ್ರಾಯ ಹೀಗಿದೆ

advertisement

ಅಡಿಕೆ ತೋಟದ ಕೃಷಿ (Arecanut Cultivation) ಯಿಂದ ಲಕ್ಷಾಂತರ ರೂಪಾಯಿ ಲಾಭ ಪಡೆಯುವ ವರ್ಗ ಒಂದು ಕಡೆಯಾದರೆ ಸರಿಯಾಗಿ ಸಸಿ ಹಾಕಿದ್ದೇವೆ ಆದರೆ ಇಳುವರಿ ಮಾತ್ರ ಬಂದಿಲ್ಲ ಎನ್ನೊ ವರ್ಗ ಇನ್ನೊಂದೆಡೆ. ಅಡಿಕೆ ಇಳುವರಿ ಅಧಿಕ ಬರಬೇಕು ಅಧಿಕ ಲಾಭ ಪಡೆಯಬೇಕು ಎಂದು ಸಾವಯವ ಗೊಬ್ಬರ, ರಾಸಾಯನಿಕ, ಕೋಳಿ ಗೊಬ್ಬರ , ಹಸಿರೆಲೆ ಕಟಾವು ಇಂತಹ ಹಲವು ತಂತ್ರ ಬಳಸಿದರೂ ಲಾಭ ಮಾತ್ರ ಕೆಲವರಿಗೆ ಸೀಮಿತವಾಗುತ್ತಿದೆ. ಅಡಿಕೆ ಕೃಷಿ (Arecanut Cultivation) ಮಾಡಲು ಕೋಳಿ ಗೊಬ್ಬರ ಅವಶ್ಯಕ ಇದೆಯಾ ಅಥವಾ ಇದು ಒಳ್ಳೆ ಕ್ರಮ ಅಲ್ಲವೇ ಎಂಬ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ.

ಮಣ್ಣು ಬಹಳ ಮುಖ್ಯ:

ಯಾವುದೇ ವಿಧವಾದ ಕೃಷಿ ಮಾಡುವ ಮೊದಲು ಮಣ್ಣಿನ ಫಲವತ್ತತೆ ಬಹಳ ಮುಖ್ಯ ಪಾತ್ರ ವಹಿಸಲಿದೆ. ಮಣ್ಣಿನಲ್ಲಿ ಸಾಕಷ್ಟು ಪೋಷಕಾಂಶ ಹಾಗೂ ಸೂಕ್ಷ್ಮಾಣು ಜೀವಿ ಇಲ್ಲದೇ ಇದ್ದರೆ ಏನು ಬೆಳೆದರೂ ಅದು ವ್ಯರ್ಥ ಆಗಲಿದೆ ಹಾಗಾಗಿ ಮಣ್ಣಿನ ಫಲವತ್ತತೆ ಪರೀಕ್ಷೆ ಮಾಡಿ ಬಳಿಕ ಕಡಿಮೆ ಫಲವತ್ತತೆ ಅನಿಸಿದರೆ ಫಲವತ್ತತೆ ಹೆಚ್ಚಿಸುವತ್ತ ಗಮನ ಹರಿಸಬೇಕು ಈ ನೆಲೆಯಲ್ಲಿ ಕೋಳಿ ಗೊಬ್ಬರ ಉತ್ತಮ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಅದರಿಂದ ಯಾವುದೇ ಪ್ರಯೋಜನೆ ಇಲ್ಲ ಎಂದು ಅಭಿಪ್ರಾಯ ವಿನಿಯೋಗಿಸುತ್ತಿದ್ದಾರೆ.

ಬೇರಿನ ಪರಿಶೀಲನೆ ಮಾಡಿ:

 

Image Source: Asia Farming

 

advertisement

ಅನೇಕ ಸಲ ಬೇರಿನ ಬಗ್ಗೆ ನೀವು ಪರಿಶೀಲನೆ ಮಾಡದಿದ್ದರೆ ನಿಮಗೆ ಸಮಸ್ಯೆ ಆಗಲಿದೆ‌. ಭೂಮಿಗಿಂತ ಹೊರಗೆ ಬೇರು ಊರಿದ್ದರೆ ಅದು ನಿಮ್ಮ ಬೇರಿಗೆ ಪೋಷಕಾಂಶ ದೊರೆತಿದೆ ಇಲ್ಲ ಎಂಬುದು ತಿಳಿದು ಬರಲಿದೆ. ಬೇರಿನಲ್ಲಿ ಬಿಳಿ ಅಂಶ, ಕಂದು ಎಲ್ಲವೂ ಅದರ ಪೋಷಕಾಂಶ ಸೂಚಿಸುವ ಕಾರಣ ನೀವು ಈ ಬಗ್ಗೆ ಕೃಷಿ ಸಂಶೋಧಕರು ಅಥವಾ ತಜ್ಞರಿಂದ ಸಲಹೆ ಪಡೆಯಬೇಕು. ಮಣ್ಣಿನ ಫಲವತ್ತತೆ ಇದ್ದೂ ಬೇರು ಹಾನಿಯಾದರೂ ಕೂಡ ಫಸಲು ಬರಲಾರದು.

ಕೋಳಿ ಗೊಬ್ಬರ ಬೇಕಾಗುತ್ತಾ?

 

Image Source: YT-Super Napier

 

ಅಡಿಕೆ ಕೃಷಿ (Arecanut Cultivation) ಯಲ್ಲಿ ಕೋಳಿ ಗೊಬ್ಬರ ಪ್ರಾಮುಖ್ಯತೆ ಪಡೆದಿದೆ ಆದರೆ ನೀವು ಯಾವ ಸಂದರ್ಭದಲ್ಲಿ ಇದರ ಬಳಕೆ ಮಾಡಿದ್ದೀರಿ ಎಂಬುದು ಮುಖ್ಯ. ಕೋಳಿ ಗೊಬ್ಬರವನ್ನು ಅಡಿಕೆ ಸಸಿ (Arecanut Sapling) ಮೇಲೆ ಹರಡುವುದು ಪ್ರಯೋಜನೆ ಸಿಗದು ಬದಲಿಗೆ ಬೇರಿನ ಹತ್ತಿರ ಬೇರಿಗೆ ಹಾನಿಯಾಗದಂತೆ 1 ಅಡಿ ಗುಂಡಿ ಮಾಡಿ ಅದಕ್ಕೆ ಕೋಳಿ ಗೊಬ್ಬರ, ಹಸಿರೆಲೆ, ಕೊಳೆತ ತರಕಾರಿ ಹಾಗೂ ಸಾವಯವ ಗೊಬ್ಬರ ಹಾಕಿದರೆ ನಿಮಗೆ ಅಧಿಕ ಇಳುವರಿ ಜೊತೆಗೆ ಪ್ರಯೋಜನೆ ಸಿಗಲಿದೆ.

ನೀರು ಅಗತ್ಯ:

ಅಡಿಕೆ ಸಸಿ ನೆಟ್ಟು ಭೂಮಿ ಒಣಗಿ ಹೋದರೆ ಆಗ ಸೂಕ್ಷ್ಮಾಣು ಜೀವಿಗಳು ತಮ್ಮ ಕೆಲಸ ಮಾಡಲಾರದು. ಅದಕ್ಕೆ ಮಣ್ಣು ಮೃದುವಾಗಿ ಇರಬೇಕು ಹಾಗಾಗಿ ಮಣ್ಣಿನಲ್ಲಿ ನೀರಿನಂಶ ಇದ್ದು ಪುಡಿ ಪುಡಿ ಮಾಡಲು ಸಾಧ್ಯ ಇರಬೇಕು ಆಗ ನಿಮಗೆ ನಿಮ್ಮ ಮಣ್ಣಿನ ಎರೆಹುಳ ಇತರ ಜೀವಿಗಳು ಅಧಿಕ ಸಿಕ್ಕು ಅವುಗಳು ಮಣ್ಣಿಗೆ ಒಂದು ಹದಾ ಹಾಗೂ ಫಲವತ್ತತೆ ಮಣ್ಣನ್ನು ನೀಡುತ್ತವೆ. ನೀವು ರಾಸಾಯನಿಕ ಬಳಸಿದರೆ ಇಂತಹ ಸೂಕ್ಷ್ಮಾಣು ಜೀವಿ ಸಾಯುವ ಕಾರಣ ಜೈವಿಕ ವಿಧಾನ ಅನುಸರಿಸಿ ಆಗ ಉತ್ತಮ ಇಳುವರಿ ಅಧಿಕ ಲಾಭ ಗ್ಯಾರೆಂಟಿ.

advertisement

Leave A Reply

Your email address will not be published.