Karnataka Times
Trending Stories, Viral News, Gossips & Everything in Kannada

Arecanut Cultivation: ಒಂದು ಮರದಲ್ಲಿ 6 ಗೊನೆ 60 ಕೆಜಿ ಅಡಿಕೆ! ರೈತನ ಸಿಂಪಲ್ ಉಪಾಯ ಇಲ್ಲಿದೆ

advertisement

ಇಂದು ಕೃಷಿ ಮಾಡಿ ಹೆಚ್ಚು ಆದಾಯ ಗಳಿಕೆ ಮಾಡಿಕೊಂಡವರು ಬಹಳಷ್ಟು ಜನ ಇದ್ದಾರೆ. ಯುವಕರು ಕೂಡ ಇಂದು ಕೃಷಿಯತ್ತ ಒಲವನ್ನು ತೋರಿಸುತ್ತ ಇದ್ದಾರೆ. ಸರಕಾರ ಕೂಡ ರೈತರನ್ನು, ಯುವಕರನ್ನು ಕೃಷಿಯತ್ತ ಒಲವು ಮೂಡಿಸಲು ಹೊಸ ಹೊಸ ರೀತಿಯ ಸೌಲಭ್ಯ ಗಳನ್ನು ರೈತಾಪಿ ವರ್ಗದವರಿಗೆ ನೀಡುತ್ತಿದೆ.‌ ಅದೇ ರೀತಿ ರೈತರು ಹೆಚ್ಚಾಗಿ ಅವಲಂಬಿತ ರಾಗಿರುವುದು ಅಡಿಕೆ ಕೃಷಿಗಳಿಗೆ. ಅಡಿಕೆ ಕೃಷಿಯನ್ನು ಸರಿಯಾಗಿ ಪೋಷಣೆ ಮಾಡಿದ್ರೆ ಹೆಚ್ಚಿನ‌ ಲಾಭವನ್ನು ಗಳಿಸಬಹುದು ಎಂಬುದನ್ನು ಅಡಿಕೆ ಕೃಷಿ (Arecanut Cultivation) ಯಲ್ಲಿ ಹೆಚ್ಚಿನ ಇಳುವರಿ ಕಂಡ ರೈತರೊಬ್ಬರು ಮಾಹಿತಿ ನೀಡಿದ್ದಾರೆ.

60 ಕೆಜಿ ಇಳುವರಿ ಹೇಗೆ?

 

Image Source: The Hindu BusinessLine

 

ಈ‌ ಒಂದು ಒಂಭತ್ತು ವರ್ಷದ ಅಡಿಕೆ ಮರದಲ್ಲಿ ಆರು‌ ಗೊನೆ ಅಡಿಕೆ ತೂಗುತ್ತಿದ್ದು, 60 ಕೆಜಿ ಇಳುವರಿಯನ್ನು ನೀಡುತ್ತಿದೆ. ಒಂದು ಮರಕ್ಕೆ ಕೇವಲ ನೂರು ರುಪಾಯಿ ಖರ್ಚು ಮಾಡುವ ಮೂಲಕ ಎರಡು ಸಾವಿರ ಆದಾಯ ಪಡೆಯುತ್ತಾರೆ. ಸಾವಯವ ಕೃಷಿ ಮಾಡುವ ಮೂಲಕ ಮನೆಯ ಹಟ್ಟಿ ಗೊಬ್ಬರ, ತೋಟದ ತ್ಯಾಜ್ಯ ಇತ್ಯಾದಿಗಳನ್ನು ಬಳಸಿ ರಾಸಾಯನಿಕ ಗೊಬ್ಬರ ಬಳಸದೇ ಇಳುವರಿ‌ ಕಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಇಳುವರಿಗೆ ಕಾರಣ:

 

Image Source: Plants Kingdom

 

advertisement

ಜೈವಿಕ ಪರಿಸರವನ್ನು ನಿರ್ಮಾಣ ಮಾಡುವ ಮೂಲಕ‌ ಸಾಕಷ್ಟು ಸಾವಯವ ತ್ಯಾಜ್ಯವನ್ನು ಮಣ್ಣಿಗೆ ಸೇರಿಸಿದ್ರೆ ಉತ್ತಮ ಇಳುವರಿಯನ್ನು ಅಡಿಕೆ ಮರಗಳು ನೀಡಲಿದೆ. ತೋಟದ ತ್ಯಾಜ್ಯ ಹಾಗೂ ಜಾನುವಾರು ತ್ಯಾಜ್ಯ ವನ್ನು ಸೂಕ್ತವಾಗಿ ವಿಲೇವಾರಿ ಮಾಡಿ ಗೊಬ್ಬರ ಬಳಸಿ ಕಾಂಪೋಸ್ಟ್ ತಯಾರು ಮಾಡುವ ಮೂಲಕ‌, ಡಾ.ಸಾಯಿಲ್ ಸಾವಯವ ದ್ರಾವಣ ಬಳಸುವ ಮೂಲಕ ಇವರು ಕೃಷಿ (Arecanut Cultivation) ಯಲ್ಲಿ ಉತ್ತೇಜನ ಹೊಂದಿದ್ದಾರೆ.

ಡಾ ಸಾಯಿಲ್ ಬಳಕೆ ಮಾಡಿ ಇಳುವರಿ ಹೆಚ್ಚು ಪಡೆಯಬಹುದು:

ಡಾ ಸಾಯಿಲ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಹೆಚ್ಚಿನ ರೈತರು ರಸಾಯನಿಕ ಗೊಬ್ಬರ ಬಳಸಿ ಕೃಷಿಯಲ್ಲಿ ಇಳುವರಿ ಕಾಣದೇ ಬೇಸೆತ್ತಿದ್ದಾರೆ. ಹಾಗಾಗಿ ನೈಸರ್ಗಿಕ ಗಿಡಮೂಲಿಕೆಗಳಿಂದ ತಯಾರಿಸಲಾಗುವ ದ್ರಾವಣವೇ ಈ ಡಾ.ಸಾಯಿಲ್ ಆಗಿದ್ದು, ಈ ದ್ರವಣವೂ ಬಿಸಿಲಿನಲ್ಲಿ ಬೆಳೆ ಬಾಡದಂತೆ, ಗಿಡಕ್ಕೆ ಪೋಷಣೆ ನೀಡಿ ಎತ್ತರವಾಗಿ ಬೆಳೆಯುವಂತೆ ಮಾಡುತ್ತದೆ. ಮಣ್ಣು ಮೃದವಾಗಿ ಎರೆಹುಳಗಳು ಉತ್ಪತ್ತಿಯಾಗಿ ಮಣ್ಣು ತೇವಾಂಶ ಉಂಟಾಗಿ ಗಿಡಗಳಿಗೆ ಹೆಚ್ಚಿನ‌ ರಕ್ಷಣೆ ನೀಡಲಿದೆ.

ನೀರು ಹಿತ ಮಿತವಾಗಿ ಬಳಸಿ:

ಹೆಚ್ಚಿನ ರೈತರು ಅಡಿಕೆ ಗಿಡಗಳಿಂದ ಇಳುವರಿ ಹೆಚ್ಚು ಪಡೆಯಬೇಕೆಂದು ಹೆಚ್ಚಿನ ಪ್ರಮಾಣದ ಮೀತಿ ಮೀರಿದಷ್ಟು ನೀರನ್ನು ತೋಟಕ್ಕೆ ಬಿಡುತ್ತಾರೆ. ಹಾಗಾಗಿ ತೋಟದಲ್ಲಿ ನೀರು ನಿಂತು ಅಡಿಕೆ ಮರಗಳಿಗೆ ಸಮಸ್ಯೆ ಆಗಲಿದೆ.‌ ಹಾಗಾಗಿ ನಿಮ್ಮ ಮಣ್ಣಿನ ಗುಣಮಟ್ಟ ಪರಿಶೀಲನೆ ಮಾಡಿ ತೋಟಕ್ಕೆ ಎಷ್ಟು ಪ್ರಮಾಣದ ನೀರು ಬೇಕು, ಎಷ್ಟು ವಾರಕೊಮ್ಮೆ ನೀರು ಬಿಡಬೇಕು ಎಂಬುದನ್ನು ನಿರ್ಧಾರ ಮಾಡಿಕೊಳ್ಳಿ.

 

advertisement

Leave A Reply

Your email address will not be published.