Karnataka Times
Trending Stories, Viral News, Gossips & Everything in Kannada

Aadhaar-Pan Card: ಇಂತಹವರು Aadhaar-Pan Card Link ಮಾಡುವ ಅಗತ್ಯ ಇಲ್ಲ! ಆದೇಶ ಬದಲಿಸಿದ ಸರ್ಕಾರ

advertisement

ಸ್ನೇಹಿತರೆ, ಕಳೆದ ಕೆಲವು ವರ್ಷಗಳಿಂದ ಸರ್ಕಾರ ಪ್ರಮುಖ ಗುರುತಿನ ಪುರಾವೆಗಳಲ್ಲಿ ಮುಖ್ಯವಾದ ಆಧಾರ್ ಕಾರ್ಡ್(Aadhaar Card)ನೊಂದಿಗೆ ತೆರಿಗೆ ಕಟ್ಟಲು ಅಥವಾ ಹಣದ ವಹಿವಾಟನ್ನು ನಡೆಸಲು ಬೇಕಾದಂತಹ ಪ್ಯಾನ್ ಕಾರ್ಡ್ (Pan Card) ಅನ್ನು ಲಿಂಕ್ ಮಾಡುವ ಅಧಿಸೂಚನೆಯನ್ನು ಹೊರಡಿಸಿತ್ತು. ಅದರಂತೆ ಹಲವರು ತಮ್ಮ ತಮ್ಮ ಆಧಾರ್ ಕಾರ್ಡನ್ನು ಪ್ಯಾನ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಸಿದ್ದಾರೆ. ಇನ್ನು ಹಲವರು ದೀರ್ಘ ಕಾಲದವರೆಗೂ ಗಡುವಿನ ದಿನಾಂಕವನ್ನು ಮುಂದುವರೆಸಿದರು ಕೂಡ ಎರಡು ಪುರಾವೆಗಳನ್ನು ಜೋಡಣೆ ಮಾಡಿಸದೆ ಅದರಿಂದ ನಾನಾ ರೀತಿಯ ಸಮಸ್ಯೆಯನ್ನು ಅನುಭವಿಸಿದ್ದಾರೆ.

ಯಾಕೆ ಆಧಾರ್ ಕಾರ್ಡ್‌-ಪ್ಯಾನ್ ಕಾರ್ಡ್ (Aadhaar-Pan Card)ಲಿಂಕ್ ಮಾಡಬೇಕು?

 

Image Source: Business Insider India

 

ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್- ಈ ಎರಡು ಮುಖ್ಯ ದಾಖಲೆಗಳನ್ನು ಗುರುತಿಸುವಿಕೆಯ ವ್ಯವಸ್ಥೆ ಮತ್ತು ಸರ್ಕಾರಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಆಧಾರ್ ಕಾರ್ಡ್ ಭಾರತೀಯ ಪೌರತ್ವವನ್ನು (Indian Citizenship) ಹೊಂದಿರುತ್ತದೆ. ನೀವೇನಾದರೂ ನಿಮ್ಮ ಆಧಾರ್ ಕಾರ್ಡ್ನೊಂದಿಗೆ ಪಾನ್ ಕಾರ್ಡನ್ನು ಲಿಂಕ್ ಮಾಡದೆ ಹೋದರೆ ಪ್ಯಾನ್ ಕಾರ್ಡ್ ಸ್ವಯಂ ಚಾಲಿತವಾಗಿ ನಿಷ್ಕ್ರಿಯಗೊಳ್ಳುತ್ತದೆ. ಇದರಿಂದ ನೀವು ಮುಂದಿನ ದಿನಮಾನಗಳಲ್ಲಿ ಯಾವುದೇ ರೀತಿಯ ಹಣಕಾಸಿನ ವಹಿವಾಟನ್ನು ಮಾಡಲು ಸಾಧ್ಯವಾಗುವುದಿಲ್ಲ.

ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡದೆ ಹೋದರೆ ಏನಾಗುತ್ತೆ?

advertisement

ಹೆಚ್ಚಿನ ಮೊತ್ತದ ಹಣಕಾಸಿನ ಲೇವಾದೇವಿ (Money Transaction) ಮಾಡುವಾಗ ನಿಮ್ಮ ಬಳಿ, ಆಧಾರ್ ಕಾರ್ಡ್ ಜೊತೆಗೆ ಜೋಡಣೆ ಆಗದಿರುವಂತಹ ಪ್ಯಾನ್ ಕಾರ್ಡ್ ಇದ್ದರೂ ಕೂಡ ವ್ಯರ್ಥ. ನಿಮ್ಮ ಆಧಾರ್ ಮತ್ತು ಪ್ಯಾನ್ ಎರಡು ಜೋಡಣೆಯಾಗಿಲ್ಲದೆ ಹೋದರೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳಿಂದ ವಂಚಿತರಾಗುವಿರಿ ಅನೇಕ ಸರ್ಕಾರದ ಸ್ಕೀಮ್ ಗಳು ದೊರಕುವುದಿಲ್ಲ, ಅದರ ಜೊತೆಗೆ ನೀವು ಸರ್ಕಾರಕ್ಕೆ ಪಾವತಿಸಬೇಕಾದ ವರ್ಷದ ಆದಾಯ ತೆರಿಗೆಯ ವಿವರವಿರುವಂತಹ ಇನ್ಕಮ್ ಟ್ಯಾಕ್ಸ್ ರಿಟರ್ನ್ (ITR) ಪತ್ರವನ್ನು ಕೂಡ ಸಲ್ಲಿಸಲು ಸಾಧ್ಯವಾಗುವುದಿಲ್ಲ, ಬ್ಯಾಂಕಿಗೆ ಸಂಬಂಧಿಸಿದಂತಹ ಅನೇಕ ವಹಿವಾಟುಗಳು ಸ್ಥಗಿತಗೊಳ್ಳಲಿದೆ.

Aadhaar-Pan Card ಲಿಂಕ್ ಮಾಡುವುದು ಹೇಗೆ?

 

Image Source: News18

 

ಸರ್ಕಾರವು ಆಧಾರ್ ಕಾರ್ಡ್ನೊಂದಿಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ (Aadhaar-Pan Card Link) ಮಾಡಲು ಜೂನ್ 30, 2023 ವರೆಗೂ ಗಡುವಿನ ದಿನಾಂಕವನ್ನು ನಿಗದಿಪಡಿಸಿದ್ದರು. ಆದರೆ ಭಾರತದಲ್ಲಿ ಇನ್ನೂ ಬಹುತೇಕ ಪ್ಯಾನ್ ಕಾರ್ಡ್ಗಳು ಆಧಾರ್ನೊಂದಿಗೆ ಜೊಡಣೆಯಾಗಿಲ್ಲ ಅಂತವರ ಪಾನ್ ಕಾರ್ಡ್ ಗಳು ರದ್ದಾಗಿದ್ದು, ಕೂಡಲೇ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ಗೆ ತೆರಳಿ, ಒಂದು ಸಾವಿರ ರೂಪಾಯಿ ವಿಳಂಬದ ದಂಡ ಶುಲ್ಕವನ್ನು ಪಾವತಿಸಿ ಆಧಾರ್ನೊಂದಿಗೆ ಪ್ಯಾನ್ ಕಾರ್ಡ (Pan Card) ನ್ನು ಲಿಂಕ್ ಮಾಡಿಕೊಳ್ಳಬಹುದು.

ಯಾರೆಲ್ಲ ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡನ್ನು ಲಿಂಕ್ ಮಾಡುವಂತಿಲ್ಲ?

ಭಾರತದ ಅನೇಕ ಜನರ ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಜೋಡಣೆ (Aadhaar-Pan Card Link) ಮಾಡಲು ಸಾಧ್ಯವಾಗದಿರುವುದು ಕಂಡು ಬಂದಿದೆ, ಇದಕ್ಕೆ ಮುಖ್ಯ ಕಾರಣ ಆದಾಯ ತೆರಿಗೆಯ ಕಾಯ್ದೆ ಅಡಿಯಲ್ಲಿ ಇರುವಂತಹ ನಿಯಮಗಳು. ಯಾರು ಬೇರೆ ದೇಶದಿಂದ ಬಂದು ಭಾರತದಲ್ಲಿ ಅನಿವಾಸಿಗಳಾಗಿ (Non-Resident) ತಮ್ಮ ಜೀವನವನ್ನು ನಡೆಸುತ್ತಿರುತ್ತಾರೋ ಅವರು ಮಾಡುವಂತಿಲ್ಲ. ಯಾರ ಬಳಿ ಭಾರತೀಯ ಪೌರತ್ವ (Indian Citizenship) ಇರುವುದಿಲ್ಲವೋ ಅವರು ಪಾನ್ ಕಾರ್ಡನ್ನು ಆಧಾರ್ ಜೊತೆಗೆ ಜೋಡಣೆ ಮಾಡಲು ಸಾಧ್ಯವಾಗುವುದಿಲ್ಲ. ಇನ್ನು 80 ವರ್ಷ ಮೇಲ್ಪಟ್ಟಂತಹ ಭಾರತೀಯ ನಿವಾಸಿಗಳು ಕೂಡ ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಅವಶ್ಯಕತೆ ಇಲ್ಲ.

advertisement

Leave A Reply

Your email address will not be published.