Karnataka Times
Trending Stories, Viral News, Gossips & Everything in Kannada

Lakshmi Hebbalkar: ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣದ ಬಿಡುಗಡೆ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಅಪ್ಡೇಟ್

advertisement

ಪ್ರಸ್ತುತ ರಾಜ್ಯ ಸರ್ಕಾರದಿಂದ ಘೋಷಿಸಲಾದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಕೂಡ ಒಂದು. ಇನ್ನು ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಮೂಲಕ ಹಲವಾರು ಮಹಿಳೆಯರು ಸ್ವತಂತ್ರವಾಗಿ ತಮ್ಮ ಆದಾಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಇನ್ನು ಸಿದ್ದರಾಮಯ್ಯ ಸರ್ಕಾರ ಬಂದಾಗಿನಿಂದ ಮಹಿಳೆಯರಿಗೆ ಹಲವಾರು ರೀತಿಯಾದಂತಹ ಸೌಲಭ್ಯಗಳನ್ನು ಒದಗಿಸಿ ಅವರನ್ನು ಆರ್ಥಿಕ ಸಬಲರನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಅಡಿಯಲ್ಲಿ ನೋಂದಾಯಿಸಿಕೊಂಡ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಮಾಸಿಕವಾಗಿ ಅವರ ಖಾತೆಗೆ 2000 ಹಣದ ಮೊತ್ತವನ್ನು ಕ್ರೆಡಿಟ್ ಮಾಡಲು ಸರ್ಕಾರ ಮುಂದಾಗಿತ್ತು. ಈಗಾಗಲೇ ಈ ರೀತಿಯಾಗಿ ಪ್ರತಿಯೊಬ್ಬ ಮಹಿಳೆಗೆ ಏಳು ಕಂತಿನ ಹಣದವರೆಗೂ ಕೂಡ ಕ್ರೆಡಿಟ್ ಮಾಡಲಾಗಿದೆ. ಇನ್ನು ಎಂಟನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ಕುರಿತು ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಗೃಹಲಕ್ಷ್ಮಿ ಯೋಜನೆಯ ಕುರಿತಾದ ಮಾಹಿತಿಯನ್ನು ನೀಡಿದ್ದಾರೆ.

 

Image Source: Deccan Herald

 

advertisement

ಇನ್ನು ಈವರೆಗೂ ಕೆಲವೊಬ್ಬರಿಗೆ 7ನೇ ಕಂತಿನ ಹಣವು ಕೂಡ ಸಿಕ್ಕಿಲ್ಲ ಕಾರಣ ಅವರ ಬ್ಯಾಂಕ್ ಖಾತೆಯನ್ನು ಒಮ್ಮೆ ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ. ಜೊತೆಗೆ ಕೆಲವೊಂದು ತಾಂತ್ರಿಕ ಸಮಸ್ಯೆಯಿಂದಾಗಿ ಆ ಹಣದ ಮೊತ್ತ ಕ್ರೆಡಿಟ್ ಆಗದೆ ಇದೆ ಎಂಬುದು ತಿಳಿದು ಬಂದಿದೆ. ಇನ್ನು ರಾಜ್ಯದಲ್ಲಿರುವಂತಹ ಅನೇಕರಿಗೆ ಈಗಾಗಲೇ 8ನೇ ಕಂತಿನ ಹಣವು ಸಿಕ್ಕಿದೆ ಅಂದರೆ ರಿಜಿಸ್ಟರ್ ಮಾಡಿಸಿಕೊಂಡವರ ಪೈಕಿ 15% ಮಹಿಳೆಯರಿಗೆ ಈಗಾಗಲೇ 8ನೇ ಕಂತಿನ ಹಣ ಕ್ರೆಡಿಟ್ ಆಗಿದೆ.

 

Image Source: The Hindu

 

ಇನ್ನು ಲೋಕಸಭಾ ಚುನಾವಣೆಯು ಹತ್ತಿರವಾಗುತ್ತಿದ್ದು, ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಏಪ್ರಿಲ್ 15ರ ಒಳಗಾಗಿ ಗೃಹಲಕ್ಷ್ಮಿ ಹಣವನ್ನು ಪಡೆಯದ ಬಾಕಿ ಇರುವ 85% ನೋಂದಾಯಿತ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಅಡಿಯಲ್ಲಿ 8ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಹೇಳಿದ್ದಾರೆ. ಇನ್ನು ಕೆಲವೊಬ್ಬರಿಗೆ 7ನೇ ಕಂತಿನ ಹಣವು ಕೂಡ ಕ್ರೆಡಿಟ್ ಆಗದೆ ಇರಲು ಕೆಲವು ತಾಂತ್ರಿಕ ಸಮಸ್ಯೆಗಳು ಕಾರಣವಾಗಿದೆ .

ಈ ತಾಂತ್ರಿಕ ದೋಷಗಳನ್ನು ಆದಷ್ಟು ಬೇಗನೆ ಪರಿಹಾರ ಮಾಡಿ ನಂತರ ಹಂತ ಹಂತವಾಗಿ ಯಾರಿಗೆ 7ನೇ ಕಂತಿನ ಹಣವು ದೊರಕಿಲ್ಲವೋ ಅವರ ಖಾತೆಗೆ ಹಣವನ್ನು ಜಮೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಇನ್ನು ಏಪ್ರಿಲ್ 15ರ ಒಳಗಾಗಿ ಎಲ್ಲರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣವು ಕ್ರೆಡಿಟ್ ಆಗುತ್ತದೆ ಎಂಬುದು ಈ ಮೂಲಕ ತಿಳಿದು ಬಂದಿದೆ.

advertisement

Leave A Reply

Your email address will not be published.