Karnataka Times
Trending Stories, Viral News, Gossips & Everything in Kannada

Gruha Lakshmi Yojana: ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಎಲ್ಲಾ ಹಣ ಒಮ್ಮೆಲೇ ಜಮೆ ಆಗುತ್ತಾ? ಇಲ್ಲಿದೆ ಉತ್ತರ

advertisement

ಇನ್ನೇನೂ ಲೋಕಸಭೆ ಚುನಾವಣೆ ಕೂಡ ಆರಂಭವಾಗಲಿದೆ. ಈ ಭಾರಿಯ ಚುನಾವಣೆ ಗೆದ್ದರೆ ಮಹಿಳೆಯರಿಗೂ ಹೆಚ್ಚು ಪ್ರಾಶಸ್ತ್ಯ ನೀಡುವುದಾಗಿ ಈಗಾಗಲೇ ಪಕ್ಷಗಳು ಪ್ರಣಾಳಿಕೆ ಇಟ್ಟಿವೆ. ಹೋದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರವು ಹೇಳಿದ ಪ್ರಣಾಳಿಕೆ ಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮಹಿಳೆಯರಿಗೆ, ಪುರುಷರಿಗೆ, ನಿರುದ್ಯೋಗಿಗಳಿಗೆ ಹೀಗೆ ಎಲ್ಲಾ ವರ್ಗದ ಜನತೆಗೂ ಆರ್ಥಿಕ ಬೆಂಬಲ ನೀಡುತ್ತಿದೆ.‌ ಅದರಲ್ಲಿ ಮಹಿಳಾ ಪರವಾದ ಯೋಜನೆಯಾದ ಗೃಹಲಕ್ಷ್ಮಿ (Gruha Lakshmi) ಹೆಚ್ಚು ಸುದ್ದಿಯಲ್ಲಿದ್ದು ಅರ್ಜಿ ಸಲ್ಲಿಕೆ ಮಾಡಿದ್ದ ಕೆಲವು ಮಹಿಳೆಯರಿಗೆ ಆರು ಕಂತಿನ ವರೆಗೆ ಹಣ ಬಿಡುಗಡೆ ಗೊಂಡಿದ್ದು ಏಳನೇ ಕಂತಿನ ಹಣ ಇನ್ನಷ್ಟೆ ಕೆಲವು ಮಹಿಳೆಯರಿಗೆ ಜಮೆ ಯಾಗಬೇಕಿದೆ.

Gruha Lakshmi Yojana ಏಳನೇ ಕಂತಿನ ಹಣ:

 

Image Source: Tv9

 

ಇಲ್ಲಿಯವರೆಗೆ ಆರು ಕಂತಿನ‌ಹಣ ಬಿಡುಗಡೆ ಗೊಂಡಿದ್ದು ಏಳನೇ ಕಂತಿನ ಹಣ ಕೆಲವು ಜಿಲ್ಲೆಯ ಮಹಿಳೆಯರಿಗಷ್ಟೆ ಜಮೆಯಾಗಿದೆ. ಇದೇ ತಿಂಗಳಿನ ಒಳಗೆ ಏಳನೇ ಕಂತಿನ ಹಣ ಎಲ್ಲಾ ಜಿಲ್ಲೆಯ ಮಹಿಳೆಯರಿಗೂ ಬಿಡುಗಡೆಯಾಗಬಹುದು ಎಂಬ ಸುದ್ದಿ ವಿವಿಧ ಮೂಲಗಳ ಮಾಹಿತಿ ಪ್ರಕಾರ ತಿಳಿದು ಬಂದಿದೆ.

advertisement

ಪೆಂಡಿಂಗ್ ಹಣವೂ ಜಮೆ?

 

Image Source: 123RF

 

ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಸೌಲಭ್ಯ ಕೆಲವು ಮಹಿಳೆಯರಿಗೆ ಸಿಕ್ಕಿಲ್ಲ. ಒಂದು ಕಂತಿನ ಹಣವೂ ಕೂಡ ಇಲ್ಲಿಯವರೆಗೆ ಜಮೆಯಾಗಿಲ್ಲ. ಈ ಬಗ್ಗೆ ಪರಿಹಾರ ಏನು ಎಂಬುದನ್ನು ಸಹ ಸರಕಾರ ಸ್ಪಷ್ಟ ಪಡಿಸಿದೆ. ಹಾಗಾಗಿ ನಿಮ್ಮ ದಾಖಲೆಗಳನ್ನು ಸರಿಪಡಿಸಿಕೊಂಡಲ್ಲಿ ಇದೇ ತಿಂಗಳು ಎಲ್ಲ ಕಂತಿನ ಹಣ ಅಂದರೆ ಹತ್ತು ಸಾವಿರ ಮೊತ್ತ ನಿಮ್ಮ‌ ಖಾತೆಗೆ ಜಮೆಯಾಗಲಿದೆ ಎನ್ನಲಾಗಿದೆ.‌ ಒಂದು ಕಂತಿನ ಹಣವೂ ನಿಮಗೆ ಬಾರದೇ ಇದ್ದಲ್ಲಿ ಪೆಂಡಿಂಗ್ ಮೊತ್ತವು ಸೇರಿ ಒಟ್ಟಿಗೆ ಹಣ ಜಮೆಯಾಗಬಹುದು.

ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಿ:

ಮಹಿಳಾ ಫಲಾನುಭವಿಗಳು ಅರ್ಜಿ ಸಲ್ಲಿಕೆ ಮಾಡಿದ್ರು ಗೃಹಲಕ್ಷ್ಮಿ ಹಣ (Gruha Lakshmi Money) ಜಮೆಯಾಗಿಲ್ಲ ಎಂದಾದರೆ ನಿಮ್ಮ ಅರ್ಜಿ ಸ್ವೀಕೃತಿ ಯನ್ನು ಪರಿಶೀಲನೆ ಮಾಡಿ. ನಿಮ್ಮ ರೇಷನ್ ಕಾರ್ಡ್ (Ration Card) ಸಮಸ್ಯೆ, ಆಧಾರ್ (Aadhaar Card) ಲಿಂಕ್, ಬ್ಯಾಂಕ್ ಖಾತೆ ದಾಖಲೆಗಳು (Bank Account Documents) ಸರಿಯಾಗಿ ಇಲ್ಲದೆ ಇದ್ದಲ್ಲಿ ಆ ದಾಖಲೆಗಳನ್ನು ಸರಿಪಡಿಸಿಕೊಂಡು ಮತ್ತೆ ಅರ್ಜಿ ಸಲ್ಲಿಕೆ ಮಾಡಿ. ಈ ಅವಕಾಶ ವನ್ನು ಕೂಡ ಸರಕಾರ ನಿಮಗೆ ನೀಡಿದ್ದು ಹೀಗೆ ಮಾಡಿದ್ದಲ್ಲಿ ಗೃಹಲಕ್ಷ್ಮಿಯ ಹಣ ನಿಮ್ಮ ಖಾತೆಗೆ ಜಮೆಯಾಗಬಹುದು.

advertisement

Leave A Reply

Your email address will not be published.