Karnataka Times
Trending Stories, Viral News, Gossips & Everything in Kannada

Gruha Lakshmi Money: ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳ ಖಾತೆಗೆ ಬರಲು 4 ಹೊಸ ನಿಯಮ ಜಾರಿಗೆ ತಂದ ಸರಕಾರ

advertisement

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಕೂಡ ಒಂದಾಗಿದ್ದು ,ಈ ಯೋಜನೆಯ ಮೂಲಕ ಮನೆಯ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಜಮೆ ಮಾಡಲಾಗುತ್ತಿದೆ. ನೊಂದಣಿ ಮಾಡಿದ ಅರ್ಹ ಫಲಾನುಭವಿಗಳಿಗೆ ಈಗಾಗಲೇ ಆರು ಕಂತಿನ ಹಣ ಬಿಡುಗಡೆ ಯಾಗಿದ್ದು ಏಳನೇ ಕಂತಿನ ಹಣ ಇನ್ನಷ್ಟೆ ಬಿಡುಗಡೆಯಾಗಬೇಕು., ಅದ್ರೆ ಕೆಲವು ಮಹೀಳೆಯರಿಗೆ ಅರ್ಜಿ ಸಲ್ಲಿಕೆ ಮಾಡಿದ್ರು ಗೃಹಲಕ್ಷ್ಮಿ ಹಣ ಬಂದಿಲ್ಲ.ಇದಕ್ಕಾಗಿ ಸರಕಾರ ನಾಲ್ಕು ಹೊಸ ನಿಯಮವನ್ನು ಜಾರಿಗೆ ತಂದಿದೆ.

ಹೊಸ ಖಾತೆ ತೆರೆದು ಅರ್ಜಿ ಸಲ್ಲಿಸಬಹುದು:

ಹೆಚ್ಚಿನ ಮಹೀಳೆಯರಿಗೆ ಬ್ಯಾಂಕ್ ಖಾತೆ ಸಮಸ್ಯೆ ಯಿಂದಾಗಿ ಗೃಹಲಕ್ಷ್ಮಿ ಹಣ (Gruha Lakshmi Money) ಬಂದಿಲ್ಲ. ಕೆಲವೊಂದು ಬ್ಯಾಂಕ್ ನಲ್ಲಿ ಮುರು ನಾಲ್ಕು ಖಾತೆಗಳಿದ್ದು ಇದಕ್ಕೆ ಆಧಾರ್ ಸಿಡಿಂಗ್ (Aadhaar Seeding) ಆಗದೇ ಸಮಸ್ಯೆ ಆಗಿದೆ. ಹಾಗಾಗಿ ಇದಕ್ಕೂ ಸರಕಾರ ಹೊಸ ಅವಕಾಶ ವನ್ನು‌ನೀಡಿದ್ದು ಪೋಸ್ಟ್ ಆಫೀಸ್ (Post Office) ಮೂಲಕ ಹೊಸದಾಗಿ ಖಾತೆ ತೆರೆದು ಮತ್ತೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಗೆ ಅರ್ಜಿ ಹಾಕಬಹುದಾಗಿದೆ.

ಇ-ಕೆವೈಸಿ ನಿವಾರಣೆ:

 

advertisement

 

ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಸಿಗಲು ರೇಷನ್ ಕಾರ್ಡ್ (Ration Card) ಮತ್ತು ಆಧಾರ್ ಕಾರ್ಡ್ (Aadhaar Card) ಬಹಳ ಮುಖ್ಯ ವಾಗಿದ್ದು ರೇಷನ್ ಕಾರ್ಡ್ ನಲ್ಲಿ ಹೆಸರು ಸರಿ ಇದ್ದರೆ, ಮನೆಯ ಯಜಮಾನಿ ಯಾಗಿದ್ದರೆ ಹಣ ಬೀಳಲಿದೆ. ಅದೇ ರೀತಿ ಅರ್ಜಿ ಸಲ್ಲಿಕೆ ಮಾಡಿದ ಮಹೀಳೆಯ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡನ್ನು ಲಿಂಕ್ ಮಾಡಿದ್ರೆ ಹಣ ಜಮೆಯಾಗಲಿದೆ. ಈ ಕಾರಣದಿಂದಾಗಿ ಬ್ಯಾಂಕ್ ಇಕೆವೈಸಿ ಸಮಸ್ಯೆ ಇಂದ ಹಣ ಬಿಡುಗಡೆ ಯಾಗಿಲ್ಲ.ಇದಕ್ಕಾಗಿ ಸೂಕ್ತ ಅವಕಾಶ ವನ್ನು ಕೂಡ ಸರಕಾರ ನೀಡಿದೆ, ಅದೇ ರೀತಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಆಗಿರುವುದು ಆನ್ಲೈನ್ ನಲ್ಲಿ ಅಪ್ ಡೇಟ್ ಆಗಿದೆಯೋ ಇಲ್ಲವೋ ಎಂಬುದನ್ನು ಕೂಡ ಖಚಿತ ಪಡಿಸಿಕೊಳ್ಳಿ, ಈ ಸಮಸ್ಯೆ ನಿವಾರಣೆ ಆದ ಬಳಿಕ ಮಹಿಳೆಯರ ಖಾತೆಗೆ ಶೀಘ್ರವಾಗಿ ಖಾತೆಗೆ ಹಣ ವರ್ಗಾವಣೆ ಆಗಲಿದೆ

ಹಣ ಜಮೆಯಾಗದವರ ಪಟ್ಟಿ ರಚನೆ:

ಈಗಾಗಲೇ ನೊಂದಣಿ ಮಾಡಿದ ಮಹೀಳೆಯರಿಗೆ ಯಾರಿಗೆಲ್ಲ ಹಣ ಜಮೆಯಾಗಿಲ್ಲ ಎಂಬುದರ ಬಗ್ಗೆ ಮಹೀಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪಟ್ಟಿ ರಚನೆ ಮಾಡಿದ್ದು ಹಣ ಜಮೆಯಾಗಲು ಸಮಸ್ಯೆ ಏನು ಎಂಬುದನ್ನು ಸೂಕ್ತವಾಗಿ ಪರಿಶೀಲಿಸಿ, ಸಮಸ್ಯೆ ಬಗೆಹರಿಸಲಿದ್ದಾರೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆಯ ಹಣ (Gruha Lakshmi Money) ಪ್ರತಿಯೊಬ್ಬ ಮಹೀಳೆಗೂ ತಲುಪಲು ಕೆಲವೊಂದು ಸೂಕ್ತವಾದ ವ್ಯವಸ್ಥೆ ಯನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ.

advertisement

Leave A Reply

Your email address will not be published.