Karnataka Times
Trending Stories, Viral News, Gossips & Everything in Kannada

Post Office RD: ಕೇವಲ 5,000 ಹೂಡಿಕೆ ಮಾಡಿ ಪಡೆಯಿರಿ 3.56 ಲಕ್ಷ ರೂಪಾಯಿ, ಇಲ್ಲಿದೆ ಅದ್ಭುತ ಯೋಜನೆ!

advertisement

ಭವಿಷ್ಯತ್ತಿನ ಉದ್ದೇಶಕ್ಕಾಗಿ ಹಣವನ್ನು ಕೂಡಿಡುವುದು ಉತ್ತಮ ಯೋಚನೆ ಆಗಿದ್ದು ಈಗಾಗಲೇ ಅನೇಕ ಸರಕಾರಿ ಸ್ವಾಮ್ಯದ ಬ್ಯಾಂಕ್, ಖಾಸಗಿ ಬ್ಯಾಂಕ್ ಮಾತ್ರವಲ್ಲದೇ ಅಂಚೆ ಕಚೇರಿಯಲ್ಲಿ ವಿವಿಧ ವಿಧವಾದ ಉಳಿತಾಯ ಯೋಜನೆ (ಗಳನ್ನು ಬೆಂಬಲಿಸುವ ಕೆಲಸ ಮಾಡಲಾಗುತ್ತಿದೆ. ಈ ಮೂಲಕ ಅಂಚೆ ಕಚೇರಿಯಲ್ಲಿ ನೀವು ಮಾಡುವ ಉಳಿತಾಯಗಳೇ ದೀರ್ಘಾವಧಿಯಲ್ಲಿ ಲಕ್ಷಾಂತರ ರೂಪಾಯಿ ಹಿಂಪಡೆಯುವಿಕೆಗೆ ಕಾರಣವಾಗಲಿದೆ. ಕಡಿಮೆ ಅಪಾಯ ಮತ್ತು ಹೆಚ್ಚಿನ ಬಡ್ಡಿ ಪ್ರಮಾಣದಲ್ಲಿ ಲಾಭ ಗಳಿಸುವ ಸಲುವಾಗಿ ಅಂಚೆ ಇಲಾಖೆ ಉಳಿತಾಯ ಯೋಜನೆ ಮುಂಚುಣಿಯಲ್ಲಿದೆ.

ನೀವು ತಿಂಗಳ ಸಂಬಳ ಪಡೆಯುವವರಾಗಿದ್ದರೆ ನಿಮ್ಮ ಹಣದಲ್ಲಿ ಉಳಿಸಿದ್ದ ಮೊತ್ತವನ್ನೆ RD ಮಾಡಿ ಇಟ್ಟರೆ ದೀರ್ಘಾವಧಿಯ ಲಾಭ ಪಡೆಯಬಹುದು. 1,000,2000, 3000,4000,5000 ದಂತೆ ನೀವು ಉಳಿತಾಯ ಮಾಡುವವರಾಗಿದ್ದರೆ ಬೇರೆ ಬೇರೆ ಉಳಿತಾಯ ಯೋಜನೆಗೆ ನೀವು ಹಣ ಕೂಡಿಡಬಹುದು. ಈ ಮೂಲಕ ನೀವು ತಿಂಗಳಲ್ಲಿ ನೀಡುವ ಹಣಕ್ಕೆ ಇಂತಿಷ್ಟು ಬಡ್ಡಿ ಎಂದು ನಿಗಧಿಯಾಗಿದ್ದು ಆ ಮೊತ್ತ ನಿಮಗೆ ಸಿಗಲಿದೆ.

ಆರ್ ಡಿ ಬಡ್ಡಿದರ ಹೇಗಿದೆ?

advertisement

ಅಂಚೆ ಇಲಾಖೆಯ ಆರ್ ಡಿ‌ (Post Office RD) ಯನ್ನು ಮಾಡುವವರು 100 ರೂಪಾಯಿ ಯಿಂದ RD ಆರಂಭ ಮಾಡಬಹುದು. ನೀವು ಹೂಡಿಕೆ ಮಾಡುವ ಪ್ರಮಾಣದ ಆಧಾರದ ಮೇಲೆ ಬಡ್ಡಿದರ ಕೂಡ ವ್ಯತ್ಯಾಸ ಆಗಲಿದೆ.

  • 1000 ರೂಪಾಯಿ ಹೂಡಿಕೆ ಮಾಡಿದರೆ ವರ್ಷಕ್ಕೆ 12,000 ಆಗಲಿದೆ, 5ವರ್ಷದಲ್ಲಿ ಒಟ್ಟು ಹೂಡಿಕೆ ಪ್ರಮಾಣ 60,000 ರೂಪಾಯಿ ಆದರೆ ಬಡ್ಡಿದರ 6.7% ನಿಮಗೆ ಸಿಗಲಿದ್ದು 11,366 ರೂಪಾಯಿ ಪಡೆಯಲಿದ್ದೀರಿ ಹಾಗಾಗಿ ಒಟ್ಟು 71,366ರೂಪಾಯಿ ನಿಮಗೆ ಸಿಗಲಿದೆ.
  • 2000 ರೂಪಾಯಿ ಹೂಡಿಕೆ ಮಾಡಿದರೆ ವರ್ಷಕ್ಕೆ 24,000 ಆಗಲಿದೆ, 5ವರ್ಷದಲ್ಲಿ ಒಟ್ಟು ಹೂಡಿಕೆ ಪ್ರಮಾಣ 1,20,000ರೂಪಾಯಿ ಆದರೆ ಬಡ್ಡಿದರ 6.7% ನಿಮಗೆ ಸಿಗಲಿದ್ದು 22,732 ರೂಪಾಯಿ ಪಡೆಯಲಿದ್ದೀರಿ ಹಾಗಾಗಿ ಒಟ್ಟು 1,42,373 ರೂಪಾಯಿ ನಿಮಗೆ ಸಿಗಲಿದೆ.
  • 3000 ರೂಪಾಯಿ ಹೂಡಿಕೆ ಮಾಡಿದರೆ ವರ್ಷಕ್ಕೆ 36,000 ಆಗಲಿದೆ, 5ವರ್ಷದಲ್ಲಿ ಒಟ್ಟು ಹೂಡಿಕೆ ಪ್ರಮಾಣ 1,80,000ರೂಪಾಯಿ ಆದರೆ ಬಡ್ಡಿದರ 6.7% ನಿಮಗೆ ಸಿಗಲಿದ್ದು 34,097ರೂಪಾಯಿ ಪಡೆಯಲಿದ್ದೀರಿ ಹಾಗಾಗಿ ಒಟ್ಟು 2,14,097ರೂಪಾಯಿ ನಿಮಗೆ ಸಿಗಲಿದೆ.
  • 4000 ರೂಪಾಯಿ ಹೂಡಿಕೆ ಮಾಡಿದರೆ ವರ್ಷಕ್ಕೆ 48,000 ಆಗಲಿದೆ, 5ವರ್ಷದಲ್ಲಿ ಒಟ್ಟು ಹೂಡಿಕೆ ಪ್ರಮಾಣ 2,40,000 ರೂಪಾಯಿ ಆದರೆ ಬಡ್ಡಿದರ 6.7% ನಿಮಗೆ ಸಿಗಲಿದ್ದು 45,463 ರೂಪಾಯಿ ಪಡೆಯಲಿದ್ದೀರಿ ಹಾಗಾಗಿ ಒಟ್ಟು 2,85,463ರೂಪಾಯಿ ನಿಮಗೆ ಸಿಗಲಿದೆ.
  • 5000 ರೂಪಾಯಿ ಹೂಡಿಕೆ ಮಾಡಿದರೆ ವರ್ಷಕ್ಕೆ 60,000 ಆಗಲಿದೆ, 5ವರ್ಷದಲ್ಲಿ ಒಟ್ಟು ಹೂಡಿಕೆ ಪ್ರಮಾಣ 3 ಲಕ್ಷ ರೂಪಾಯಿ ಆದರೆ ಬಡ್ಡಿದರ 6.7% ನಿಮಗೆ ಸಿಗಲಿದ್ದು 56,829 ರೂಪಾಯಿ ಪಡೆಯಲಿದ್ದೀರಿ ಹಾಗಾಗಿ ಒಟ್ಟು 3,56, 829ರೂಪಾಯಿ ನಿಮಗೆ ಸಿಗಲಿದೆ. ಹಾಗಾಗಿ ಈಬಡ್ಡಿ ದರದ ಮೊತ್ತವೇ ನಿಮಗೆ ಸಾಕಷ್ಟು ಉಪಯುಕ್ತ ಆಗಲಿದೆ.

ಒಟ್ಟಾರೆಯಾಗಿ ಸಣ್ಣ ಮಟ್ಟಿಗೆ ಹಣ ಕೈಯಲ್ಲಿ ಕೂಡಿಟ್ಟು ಇರುವುದಕ್ಕಿಂತ ಬ್ಯಾಂಕ್ ಅಥವಾ ಅಂಚೆ ಇಲಾಖೆಯ ಉಳಿತಾಯ ಯೋಜನೆಗೆ ಇದನ್ನೇ ಹೂಡಿಕೆ ಮಾಡಿದರೆ ನೀವು ದೀರ್ಘಾವಧಿಯಲ್ಲಿ ಲಕ್ಷಾಧಿಪತಿ ಆಗಬಹುದು. ಹಾಗೆಂದು ಸರಕಾರಿ ಸ್ವಾಮ್ಯ ವಲ್ಲದ ಮೋಸದ ಜಾಲಗಳಿಗೆ ಅಧಿಕ ಬಡ್ಡಿದರದ ಆಸೆಗೆ ಹಣ ಉಳಿತಾಯ ಮಾಡುವ ಬದಲು ಇಂತಹ ಯೋಜನೆಗೆ ಹಣ ಹಾಕಿದರೆ ಉತ್ತಮ ಲಾಭ ನಿಮಗೆ ಸಿಗಲಿದೆ.

advertisement

Leave A Reply

Your email address will not be published.