Karnataka Times
Trending Stories, Viral News, Gossips & Everything in Kannada

Post Office RD Scheme: ಕೇವಲ 25,000 ರೂಪಾಯಿ ಹೂಡಿಕೆ ಮಾಡಿದರೆ ಈ ಯೋಜನೆಯಲ್ಲಿ ಸಿಗುತ್ತೆ 18 ಲಕ್ಷ ರಿಟರ್ನ್ಸ್!

advertisement

ಇಂದು ಹೆಚ್ಚಿನ ಜನರು ಸುರಕ್ಷಿತವಾದ ಹೂಡಿಕೆ ಬಗ್ಗೆ ಆಸಕ್ತಿ ವಹಿಸುತ್ತಾರೆ. ಎಷ್ಟೆ ಬ್ಯಾಂಕ್ ಎಫ್ ಡಿ ಇದ್ದರೂ ಜನರು ಹೆಚ್ಚು ನಂಬುವಂತದ್ದು ಪ್ರಾಚೀನ ಕಾಲದಿಂದಲೂ ಹೂಡಿಕೆ ಮಾಡುತ್ತಿದ್ದ ಪೋಸ್ಟ್ ಆಫೀಸ್, ಎಲ್ ಐ ಸಿ ಯೋಜನೆಗಳ ಮೇಲೆ ನಂಬಿಕೆ ಹೆಚ್ಚು. ಹಾಗಾಗಿ ಇಲ್ಲಿನ ಹೂಡಿಕೆಯನ್ನೇ ಆಯ್ದುಕೊಳ್ಳುತ್ತಾರೆ.

ಹೆಚ್ಚಿನ ಬಡ್ಡಿ

ಇನ್ನೂ ಅಂಚೆ ಇಲಾಖೆಯು ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದು ಇಲ್ಲಿ ಉಳಿತಾಯ ದೊಂದಿಗೆ ಹೆಚ್ಚಿನ ಬಡ್ಡಿಯನ್ನು ಸಹ ಒದಗಿಸುತ್ತದೆ.ಪೋಸ್ಟ್ ಆಫೀಸ್ ಸ್ಕೀಮ್ ಮೂಲಕ ನೀವು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಸುಕನ್ಯಾ ಸಮೃದ್ಧಿ ಯೋಜನೆ , ಪೋಸ್ಟ್ ಆಫೀಸ್ ಸಮಯ ಠೇವಣಿ, ಕಿಸಾನ್ ವಿಕಾಸ್ ಪತ್ರ ಮುಂತಾದ ಹಲವು ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶ ಇದೆ.

ಆರ್ ಡಿ ಸ್ಕೀಮ್

ಅದೇ ರೀತಿ ಪೋಸ್ಟ್‌ ಆಫೀಸ್ ಅರ್ ಡಿ ಯೋಜನೆ (Post Office RD Scheme) ಇಂದು ಹೆಚ್ಚು ಸುದ್ದಿಯಲ್ಲಿದೆ. ಹೆಚ್ಚಿನ ಜನರು ಆರ್ ಡಿ ಖಾತೆಯನ್ನು ತೆರೆದಿರುತ್ತಾರೆ. ಈ ಯೋಜನೆ ತ್ರೈಮಾಸಿಕ ಸಂಯೋಜಿತ ವಾರ್ಷಿಕ ಶೇಕಡಾ ಅಂದರೆ 6.7 ರ ಸ್ಥಿರ ಬಡ್ಡಿದರವನ್ನು ನೀಡಲಿದೆ. ಇಲ್ಲಿ ವೈಯಕ್ತಿಕ ಅಥವಾ ಜಂಟಿ ಖಾತೆಯನ್ನು ತೆರೆಯಲು ಅವಕಾಶ ‌ಇದ್ದು ಕನಿಷ್ಠ 100 ರೂ.ಗಳೊಂದಿಗೆ ಹೂಡಿಕೆಯನ್ನು ಮಾಡಬಹುದು. ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಮಧ್ಯಾವಧಿಯ ಉಳಿತಾಯ ಯೋಜನೆಯಾಗಿದ್ದು, ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಕನಿಷ್ಠ 5 ವರ್ಷಗಳವರೆಗೆ ಇರಬೇಕಾಗುತ್ತದೆ. ಅದೇ ರೀತಿ ವಿಸ್ತರಣೆ ಮಾಡಬಹುದಾಗಿದ್ದು ಒಟ್ಟು 10 ವರ್ಷದವರೆಗೆ ಈ ಸ್ಕೀಮ್​ನ ಲಾಭ ಪಡೆಯಬಹುದು.

advertisement

18ಲಕ್ಷ ಮೊತ್ತ ಪಡೆಯಿರಿ

ಐದು ವರ್ಷಗಳಲ್ಲಿ ರೂ 15 ಲಕ್ಷ ರೂ ನೀವು ಠೇವಣಿ ಮಾಡಿದ್ರೆ ನಿಮ್ಮ ಮಾಸಿಕ ಕೊಡುಗೆ ರೂ 25,000 ಆಗಿರಬೇಕು. ಮುಕ್ತಾಯದ ದಲ್ಲಿ ನೀವು ರೂ 15 ಲಕ್ಷ ಹೂಡಿಕೆಯ ಮೇಲೆ ರೂ 284146 ರ ಬಡ್ಡಿಯನ್ನು ಪಡೆಯಬಹುದಾಗಿದ್ದು‌, ನಿಮ್ಮ ಒಟ್ಟು ಮೆಚ್ಯೂರಿಟಿ ಮೊತ್ತವು ರೂ 1784146 ಆಗಿರುತ್ತದೆ.

1,000 ಹೂಡಿಕೆ

ಅಂಚೆ ಕಚೇರಿಯಲ್ಲಿ ಆರ್​ಡಿ ಅಕೌಂಟ್ ತೆರೆದು ತಿಂಗಳಿಗೆ 1,000 ರೂ ಕಟ್ಟಿದರೆ 5 ವರ್ಷಕ್ಕೆ 60,000 ರೂ ಆಗಲಿದೆ. ಇದಕ್ಕೆ ಬಡ್ಡಿ ಸೇರಿ ನಿಮ್ಮ ಖಾತೆಯಲ್ಲಿ 70,431 ರೂ ಜಮೆಯಾಗುತ್ತದೆ. ನೀವು 10 ವರ್ಷಕ್ಕೆ ಈ ಸ್ಕೀಮ್ ವಿಸ್ತರಣೆ ಮಾಡಿದ್ರೆ ಒಟ್ಟು 1.66 ಲಕ್ಷ ರೂ ಮೊತ್ತ ಪಡೆಯಬಹುದು.

advertisement

Leave A Reply

Your email address will not be published.