Karnataka Times
Trending Stories, Viral News, Gossips & Everything in Kannada

Maruti Wagon R: 34KM ಮೈಲೇಜ್ ಇರುವ ಮಾರುತಿ ವ್ಯಾಗನ್ ಕಾರಿನ ಮೇಲೆ ಭರ್ಜರಿ 61,000ರೂಪಾಯಿ ಡಿಸ್ಕೌಂಟ್, ಖರೀದಿಗೆ ಕ್ಯೂ ನಿಂತ ಜನ!

advertisement

ಇಂದು ಪ್ರತಿಯೊಬ್ಬರಿಗೂ ಕಾರು ಖರೀದಿಯ ಬಗ್ಗೆ‌ವಿಶೇಷ ಒಲವು ಇರುತ್ತದೆ.‌ಅದರಲ್ಲೂ ಮದ್ಯಮ ವರ್ಗದ ಜನತೆ ಕಾರು ಖರೀದಿಯ ಬಗ್ಗೆ ವಿಶೇಷ ಆಸಕ್ತಿ ವಹಿಸಿರುತ್ತಾರೆ. ಹೆಚ್ಚುತ್ತಿರುವ ಬೆಲೆ ಏರಿಕೆಯಿಂದಾಗಿ ಇದನ್ನು ನನಸು ಮಾಡಿಕೊಳ್ಳಲು ಕಷ್ಟವೇ ಸಹಿ, ಇದೀಗ ಮಾರುತಿ ವ್ಯಾಗನ್ ಖರೀದಿಗೆ ವಿಶೇಷ ರಿಯಾಯಿತಿ ಇರಲಿದ್ದು ಖರೀದಿ ಗೆ ಉತ್ತಮ ಆಯ್ಕೆ ಯಾಗಿದೆ.

ಭರ್ಜರಿ ರಿಯಾಯಿತಿ

ಮಾರುತಿ ಸುಜುಕಿ ಡೀಲರ್‌ಶಿಪ್‌ಗಳು ಈ ತಿಂಗಳು ಭಾರಿ ರಿಯಾಯಿತಿಗಳನ್ನು ನೀಡುತ್ತಿದ್ದು ಕಾರು ಪ್ರೀಯರಿಗೆ ಈ ವಿಚಾರ ಬಹಳಷ್ಟು ಖುಷಿ ನೀಡಿದೆ. ಅರೆನಾ ಮತ್ತು ನೆಕ್ಸಾ ಡೀಲರ್‌ಗಳಂತಹ ಕಾರುಗಳಿಗೆ ರಿಯಾಯಿತಿ ನೀಡಿದ್ದು ವಿನಿಮಯ ಬೋನಸ್‌ಗಳು ಮತ್ತು ಕಾರ್ಪೊರೇಟ್ ರಿಯಾಯಿತಿಗಳ ರೂಪದಲ್ಲಿ ಸೌಲಭ್ಯ ಲಭ್ಯವಿದೆ.

ಮಾರುತಿ ವ್ಯಾಗನ್ ಆರ್ (Maruti Wagon R) ರಿಯಾಯಿತಿ ಎಷ್ಟು?

ಮಾರುತಿ ವ್ಯಾಗನ್ (Maruti Wagon R) ಖರಿದೀಗೆ ರಿಯಾಯಿತಿ ಇದ್ದು ನಗದು ರಿಯಾಯಿತಿಯೊಂದಿಗೆ 35,000, ವಿನಿಮಯ ಬೋನಸ್ ರೂ. 20,000, ಮತ್ತು ಕಾರ್ಪೊರೇಟ್ ರಿಯಾಯಿತಿ ರೂ. 6,000 ರೂ ವರೆಗೆ ಲಭ್ಯವಿದೆ. ಈ ಸೌಲಭ್ಯ ‌ 29 ಫೆಬ್ರವರಿ 2024 ರವರೆಗೆ ಮಾತ್ರ ಲಭ್ಯವಿದೆ. ಈ ತಿಂಗಳ ಆರಂಭದಲ್ಲಿ, ಮಾರುತಿ ಸುಜುಕಿ ವ್ಯಾಗನ್ ಆರ್ ಬೆಲೆಗಳನ್ನು ಕೂಡ ಪರಿಷ್ಕರಣೆ ಮಾಡಿದೆ.

advertisement

ವೈಶಿಷ್ಟ್ಯ ಹೇಗಿದೆ?

  • ವ್ಯಾಗನ್‌ಆರ್‌ನಲ್ಲಿ 1.2-ಲೀಟರ್, ನಾಲ್ಕು-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ಇರಲಿದ್ದು ಇದು ಗರಿಷ್ಠ 82 bhp ಪವರ್ ಮತ್ತು 113 Nm ಗರಿಷ್ಠ ಟಾರ್ಕ್ ಅನ್ನು ನೀಡುತ್ತದೆ.
  • ಇದರಲ್ಲಿ ಟಚ್‌ಸ್ಕ್ರೀನ್ ನ್ಯಾವಿಗೇಶನ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಕೂಡ ಇರಲಿದೆ
  • ವ್ಯಾಗನ್‌ಆರ್‌ ನಲ್ಲಿ ಮುಂಭಾಗದಲ್ಲಿ ಹೆಡ್‌ಲ್ಯಾಂಪ್‌ಗಳು, ಬಿಗ್ ಬಂಪರ್‌ಗಳು ಮತ್ತು ಗ್ರಿಲ್ ಅನ್ನು ಒಳಗೊಂಡಿದೆ.
  • ಕಾರು ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದ್ದು, VXI ಗೆ 155/65R14 ಮತ್ತು LXi ಮತ್ತು LX ಗೆ 145/80R13 ಟೈರ್ ರೇಟಿಂಗ್ ಹೊಂದಿದೆ.

Maruti Wagon R ಬೆಲೆ ಹೇಗಿದೆ?

ಇದರ ಬೆಲೆ ರೂ .5.54 ಲಕ್ಷದಿಂದ ರೂ.7.42 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗಲಿದ್ದು ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿಯು ಖರೀದಿ ಮಾಡಬಹುದು. ಗ್ರಾಹಕರು LXi, VXi, ZXi, ಮತ್ತು ZXi+ ಎಂಬ ನಾಲ್ಕು ರೂಪಾಂತರಗಳಿಂದ ಆಯ್ಕೆ ಮಾಡಿ ರಿಯಾಯಿತಿ ಪಡೆಯಬಹುದು.

advertisement

Leave A Reply

Your email address will not be published.