Karnataka Times
Trending Stories, Viral News, Gossips & Everything in Kannada

Widow Re-Marriage: ವಿಧವೆಯರಿಗೆ ಮರುವಿವಾಹಕ್ಕೆ ಸರ್ಕಾರ ಕೊಡುತ್ತಿದೆ 3ಲಕ್ಷ ರೂಪಾಯಿ ಪ್ರೋತ್ಸಾಹ ಧನ, ಹೀಗೆ ಅರ್ಜಿ ಸಲ್ಲಿಸಿ!

advertisement

ಮದುವೆ ಗಂಡು ಹೆಣ್ಣಿನ ಸಂಬಂಧದ ನಂಟಾಗಿದ್ದು ಏಳು ಜನ್ಮದ ಬಂಧ ಎಂದು ನಂಬಲಾಗುತ್ತದೆ ಆದರೆ ದುರದೃಷ್ಟವಶಾತ್ ಈ ಬಂಧನ ಕಳಚಿ ಬಿದ್ದರೆ ಸಮಾಜದ ನಿಂದನೆ , ಅಪವಾದ ಎಲ್ಲವನ್ನು ಸಹಿಸಬೇಕಾಗುತ್ತದೆ. ಎಷ್ಟೋ ಬಾರಿ ಮನಸಾರೆ ಪ್ರೀತಿಸಿ ಮದುವೆಯಾದ ಬಳಿಕ ಪ್ರೀತಿ ಮರೆಯಾಗಿ ಬೇರೆ ಬೇರೆ ಆಗೋ ಜೋಡಿಗಳು ಒಂದೆಡೆಯಾದರೆ ಇನ್ನೊಂದೆಡೆ ಅಪಘಾತ , ಸಾವು ನೋವಿನಿಂದ ಜೋಡಿಗಳು ದೂರಾಗುತ್ತಿದೆ.

ಪತ್ನಿ ಅಥವಾ ಪತಿ ಯಾರೇ ಇರಲಿ ಪರಸ್ಪರ ತುಂಬಾ ಪ್ರೀತಿಸುವವರು ದೂರಾದರೆ ಆ ದುಃಖ ಜೀವನ ಪರ್ಯಂತ ಕಾಡುತ್ತಿರುತ್ತದೆ. ಒಂದು ಕಾಲದಲ್ಲಿ ಪತ್ನಿ ಸತ್ತರೆ ಪತಿಗೆ ಮರು ಮದುವೆ ಮಾಡಲು ಅಥವಾ ಬಹುಪತ್ನಿತ್ವ ಅನುಕರಣೆ ಮಾಡಲು ಸಮಾಜ ಏನು ಅನ್ನುತ್ತಿರಲಿಲ್ಲ ಆದರೆ ಪತಿ ಸತ್ತು ಪತ್ನಿ ಬದುಕಿದರೆ ವಿಧವೆಯಾಗಿ ಜೀವನ ತಳ್ಳಬೇಕಿತ್ತು. ಇಲ್ಲವೇ ಸಮಾಜದ ಮೌಢ್ಯತೆಗೆ ಅಂಜಿ ಬದುಕ ಬೇಕಿತ್ತು ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ಸಬಲಳು , ಎಲ್ಲ ಸ್ಥಾನ ಪಡೆಯಲು ಅರ್ಹಳು ಎಂಬ ಹೋರಾಟ ನಡೆಯುತ್ತಿದ್ದು ಸರಕಾರ ಕೂಡ ಮಹಿಳೆಗೆ ಅನೇಕ ರೀತಿಯಲ್ಲಿ ಉತ್ತೇಜನೆ ನೀಡುತ್ತಿದೆ.

ಪಿಂಚಣಿ ವ್ಯವಸ್ಥೆ

ವಿಧವೆಯರಿಗೆ ನೆರವಾಗಲೆಂಬ ಉದ್ದೇಶಕ್ಕಾಗಿ ಪಿಂಚಣಿ ವ್ಯವಸ್ಥೆ ಜಾರಿಗೆ ತಂದಿದ್ದು ತಿಂಗಳು ತಿಂಗಳು ಹಣ ಪಾವತಿ ಮಾಡಲಾಗುತ್ತಿದೆ. ಅಷ್ಟು ಮಾತ್ರವಲ್ಲದೇ ವಿಧವೆಯರಿಗೆ ಸ್ವ ಉದ್ಯೋಗ ಮಾಡಿಕೊಳ್ಳಲು ನೆರವಾಗಬೇಕೆಂಬ ಉದ್ದೇಶಕ್ಕೆ ಕಡಿಮೆ ಬಡ್ಡಿದರದ ಸಾಲ, ಸಬ್ಸಿಡಿ ವಿತರಣೆ ಸಹ ಮಾಡಲಾಗುತ್ತಿದೆ. ಸಾಮಾನ್ಯ ವರ್ಗಕ್ಕಿಂತಲೂ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ವಿಧವೆಯರಿಗೆ ಕೆಲ ವ್ಯವಸ್ಥೆ ನೀಡಲಾಗುತ್ತಿದ್ದು ಅಂತಹ ಪ್ರೋತ್ಸಾಹದಲ್ಲಿ ಮರುವಿವಾಹಕ್ಕೆ ಸಹಾಯಧನ ನೀಡುವುದನ್ನು ಕಾಣಬಹುದು.

advertisement

ಮರುವಿವಾಹಕ್ಕೆ ಉತ್ತೇಜನೆ

ಪರಿಶಿಷ್ಟ ಜಾತಿ, ವರ್ಗದ ವಿಧವಾ ಮಹಿಳೆಯರಿಗೆ ಮರು ವಿವಾಹಕ್ಕೆ ಪ್ರೋತ್ಸಾಹ ನೀಡಬೇಕು ಎಂಬ ಉದ್ದೇಶಕ್ಕಾಗಿ ವಿಧವಾ ಮರುವಿವಾಹ (Widow Re-Marriage) ಪ್ರೋತ್ಸಾಹ ಧನ ಯೋಜನೆ ಜಾರಿಗೆ ತರಲಾಗಿದೆ. ನವ ಬದುಕು ರೂಪಿಸಲು ಮರು ಮದುವೆಯಾದ ದಂಪತಿಗೆ 3ಲಕ್ಷ ರೂಪಾಯಿ ಸಹಾಯಧನ ನೀಡಲು ಸರಕಾರ ಮುಂದಾಗಿದೆ. ಈ ಹಣ ದಂಪತಿಯ ಬದುಕಿಗೆ ನೆರವಾಗಲಿದೆ ಎನ್ನಬಹುದು.

ಈ ನಿಯಮ ಇದೆ

ಪರಿಶಿಷ್ಟ ಜಾತಿ , ವರ್ಗದವರಿಗಾಗಿ ಮಾತ್ರವೇ ಇರುವುದಾಗಿದ್ದು 18ರಿಂದ 42 ವರ್ಷದೊಳಗಿನ ವಿಧವೆಗೆ ಮರು ವಿವಾಹವಾದರೆ ಮಾತ್ರವೇ ಈ ಸೌಲಭ್ಯ ಸಿಗಲಿದೆ‌. ಯಾವುದೇ ಜಾತಿ ಅಥವಾ ಧರ್ಮದ ಪುರುಷರಿಗೆ 21 ವರ್ಷದಿಂದ 45 ವರ್ಷ ಮಿತಿ ಹೊಂದಿರಬೇಕು. ವಿವಾಹವಾಗಿ ಒಂದು ವರ್ಷದ ಒಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು https://swdservices.Karnataka.gov.in/swincentive/WRM/ WRMAHhome.aspx ಗೆ ಭೇಟಿ ನೀಡಬಹುದು.

advertisement

Leave A Reply

Your email address will not be published.