Karnataka Times
Trending Stories, Viral News, Gossips & Everything in Kannada

GPS Based Toll: ಸದ್ಯದಲ್ಲಿಯೇ ಬರಲಿದೆ ಜಿಪಿಎಸ್ ಟೋಲಿಂಗ್ ವ್ಯವಸ್ಥೆ; ಹೆಚ್ಚು ವಾಹನ ಓಡಿಸುವವರಿಗೆ ಸಂಕಷ್ಟ!

advertisement

ಸಾರಿಗೆ ಹೆದ್ದಾರಿಗಳಲ್ಲಿ ನೀವು ಪ್ರಯಾಣಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಹೆದ್ದಾರಿಯಲ್ಲಿ ಟೋಲ್ (Toll) ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ತರವಾದ ಬದಲಾವಣೆ ತಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಟೋಲ್ ಪ್ಲಾಜಾ (Toll Plaza) ಗಳಲ್ಲಿ ಫಾಸ್ಟ್ ಟ್ಯಾಗ್ (FASTag) ಮೂಲಕ ಟೋಲ್ ಫ್ರೀ ಅನ್ನು ಪಾವತಿಸುತ್ತಿದ್ದೇವೆ. ಆದರೆ ಇನ್ನು ಮುಂದೆ ಹೆದ್ದಾರಿಯಲ್ಲಿ GPS ಬೇಸ್ಡ್ ಟೋಲ್ ಕನೆಕ್ಷನ್ ಸಿಸ್ಟಮ್ (GPS Based Tolling System) ಅನ್ನು ಸರ್ಕಾರ ಶೀಘ್ರದಲ್ಲಿಯೇ ಆರಂಭಿಸಲಿದೆ. ಇದಕ್ಕಾಗಿ ಟೆಂಡರ್ ಕರೆಯುವ ಪ್ರಕ್ರಿಯೆ ಕೂಡ ಆರಂಭವಾಗಿದೆ ಎಂದು ರಸ್ತೆ ಸಾರಿಗೆ ಮತ್ತು ರಾಜ್ಯ ಹೆದ್ದಾರಿ ಸಚಿವಾಲಯ ಮಾಹಿತಿ ನೀಡಿದೆ.

GPS ಸಿಸ್ಟಮ್ ಯಾಕೆ?

 

advertisement

 

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡುವುದು ಸರ್ಕಾರದ ಉದ್ದೇಶ. ಅದಕ್ಕಾಗಿ ಈ ಹೊಸ ಯೋಜನೆಯನ್ನು ಜಾರಿಗೆ ತರುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಇತ್ತೀಚಿಗೆ ತಿಳಿಸಿದ್ದಾರೆ. ಏಕೆಂದರೆ GPS System ಶುರು ಮಾಡಿದ ನಂತರ ಚಾಲಕರು ಕ್ರಮಿಸುವ ದೂರಕ್ಕೆ ಅನುಕೂಲವಾಗಿ ಟೋಲ್ ಪಾವತಿ ಮಾಡಬೇಕು. ಸದ್ಯ ವಾಹನಗಳ ನಿಲುಗಡೆಯಿಂದಲೂ ಟ್ರಾಫಿಕ್ ಜಾಮ್ ಆಗುತ್ತಿದೆ. ಹಾಗಾಗಿ ಸಂಪೂರ್ಣ ದೂರವನ್ನ ಕ್ರಮಿಸದಿದ್ದರೂ ಅಲ್ಲಲ್ಲಿ ನಿಲ್ಲಿಸಬೇಕಾಗುತ್ತದೆ. ಆದ್ರೆ ಜಿಪಿಎಸ್ ಬೆಸ್ಟ್ ಟೋಲಿಂಗ್ ವ್ಯವಸ್ಥೆ (GPS Based Tolling System) ಜಾರಿಗೆ ಬಂದರೆ ವಾಹನ ಎಷ್ಟು ಅಂತರದಲ್ಲಿ ಇದೆ ಎಷ್ಟು ಅಂತರವನ್ನ ಕ್ರಮಿಸಿದೆ ಎನ್ನುವುದು ಜಿಪಿಎಸ್ ಮೂಲಕವೇ ತಿಳಿಯುತ್ತದೆ.

ಶೀಘ್ರದಲ್ಲಿ GPS Based Tolling System ಆರಂಭ:

ಈ ಹೊಸ ವ್ಯವಸ್ಥೆಯನ್ನು ಆದಷ್ಟು ಬೇಗ ಕಾರ್ಯಗತಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಈಗ ಪ್ರಾಯೋಗಿಕ ಪರೀಕ್ಷೆಗಳು ಕೂಡ ಆರಂಭವಾಗಿವೆ. ವಾಹನಗಳ ನಂಬರ್ ಪ್ಲೇಟ್ ಅನ್ನು ಗುರುತಿಸಲು ಕ್ಯಾಮೆರಾಗಳನ್ನು ಬಳಸಿ ಪರೀಕ್ಷೆ ಮಾಡಲಾಗುತ್ತಿದೆ. ಅನುಷ್ಠಾನಕ್ಕೆ ಬರುವುದಕ್ಕೂ ಮೊದಲೇ ಸರಿಯಾದ ಪರಿಶೀಲನೆ ನಡೆಸಿದರೆ ಯೋಜನೆ ಅನುಷ್ಠಾನಕ್ಕೆ ಬಂದ ನಂತರ ಯಾವುದೇ ಅಕ್ರಮಗಳು ನಡೆಯದೆ ಇರುವ ರೀತಿ ನೋಡಿಕೊಳ್ಳಬಹುದು ಎಂದು ಸಾರಿಗೆ ಸಚಿವಾಲಯ ಮಾಹಿತಿ ನೀಡಿದೆ.

advertisement

Leave A Reply

Your email address will not be published.