Karnataka Times
Trending Stories, Viral News, Gossips & Everything in Kannada

PM Kisan: ಇನ್ನು ನಾಲ್ಕೇ ದಿನಗಳಲ್ಲಿ ಬಿಡುಗಡೆ ಆಗಲಿದೆ ಪಿಎಂ ಕಿಸಾನ್ ಯೋಜನೆಯ 16ನೇ ಕಂತಿನ ಹಣ; ಹೀಗೆ ಸ್ಟೇಟಸ್ ಚೆಕ್ ಮಾಡಿ!

advertisement

ಪಿ ಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (PM Kisan Samman Nidhi Yojana) ಯ 15 ಕಂತಿನ ಹಣ ಪಡೆದವರಿಗೆ ಗುಡ್ ನ್ಯೂಸ್ ನೀಡಿದೆ ಸರ್ಕಾರ. ಕೇಂದ್ರ ಸರ್ಕಾರ ರೈತರಿಗಾಗಿಯೇ ಆರಂಭಿಸಿರುವ ಈ ಯೋಜನೆಯ ಅಡಿಯಲ್ಲಿ 16ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತದೆ ಎಂದು ಸರ್ಕಾರದ ಮಾಹಿತಿ ನೀಡಲಾಗಿದೆ.

PM Kisan Samman Nidhi Yojana:

 

 

2019 ರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಜಿ (PM Narendra Modi) ಅವರು ರೈತರಿಗೆ ಅನುಕೂಲವಾಗುವಂತೆ ಪ್ರತಿ ವರ್ಷ 6,000 ಆರ್ಥಿಕ ನೆರವನ್ನು ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ, ಮೂರು ಕಂತುಗಳಲ್ಲಿ ಪ್ರತಿ ಕಂತಿಗೆ ತಲಾ ಎರಡು ಸಾವಿರ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ.

advertisement

16ನೇ ಕಂತಿನ ಹಣ ಬಿಡುಗಡೆ ದಿನಾಂಕ ಪ್ರಕಟ:

ಪಿಎಂ ಕಿಸಾನ್ ಯೋಜನೆ (PM Kisan Yojana) ಯ ಅಧಿಕೃತ ವೆಬ್ಸೈಟ್ನಲ್ಲಿ 16ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗಲಿದೆ ಎನ್ನುವ ಮಾಹಿತಿಯನ್ನು ಪ್ರಕಟಿಸಲಾಗಿದೆ. ಇನ್ನು ಕೇವಲ ಮೂರು ದಿನಗಳಲ್ಲಿ ಅಂದರೆ ಫೆಬ್ರವರಿ 28ನೇ ತಾರೀಕಿನಂದು ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯ 16ನೇ ಕಂತಿನ 2,000 ರೂ.ಫಲಾನುಭವಿ ರೈತರ ಖಾತೆಯನ್ನು ಸೇರಲಿದೆ.

ಇಂಥವರಿಗೆ PM Kisan Samman Nidhi Yojana Money ಬರುವುದಿಲ್ಲ:

ರೈತರು ನೋಂದಾಯಿಸಿಕೊಳ್ಳುವಾಗ ಯಾವುದೇ ಮಾಹಿತಿ ಕೊಡುವಲ್ಲಿ ತಪ್ಪು ಮಾಡಿದ್ದರೆ, ಬ್ಯಾಂಕ್ ಖಾತೆ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದರೆ, ಬ್ಯಾಂಕಿನ ಖಾತೆಗೆ ಎಂ ಪಿ ಸಿ ಐ ಮ್ಯಾಪಿಂಗ್, ಈ ಕೆ ವೈ ಸಿ ಅಪ್ಡೆಡ್ ಮಾಡಿಸದೆ ಇದ್ದರೆ, ಜಮೀನಿನ ಪ್ರಮಾಣ ಪತ್ರಗಳು ಸರಿಯಾಗಿ ಇಲ್ಲದಿದ್ದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ. ಅಂತಹ ಸಂದರ್ಭದಲ್ಲಿ ನೀವು ಬ್ಯಾಂಕ್ ಗೆ ಹೋಗಿ ಅಗತ್ಯ ಇರುವ ಅಪ್ಡೇಟ್ ಮಾಡಿಸಿಕೊಳ್ಳಬೇಕು. ಈ ರೀತಿ ಮಾಡಿದರೆ ಮುಂದಿನ ಕಂತಿನ ಹಣ ಮಿಸ್ ಆಗದೆ ನಿಮ್ಮ ಖಾತೆಯನ್ನು ತಲುಪುತ್ತದೆ.

advertisement

Leave A Reply

Your email address will not be published.