Karnataka Times
Trending Stories, Viral News, Gossips & Everything in Kannada

PM Kisan: ಕೇಂದ್ರ ಸರಕಾರದಿಂದ ಕೃಷಿಕರಿಗೆ ಶುಭ ಸುದ್ದಿ, ಈ ದಿನದಂದು ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ ಆಗಲಿದೆ!

advertisement

ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ಪರವಾಗಿ ಈಗಾಗಲೇ ಅನೇಕ ಯೋಜನೆ ಪರಿಚಯಿಸಿದೆ. ಈ ಮೂಲಕ ರೈತರ ಕೃಷಿ ಚಟುವಟಿಕೆಗೆ ಬೇಕಾದ ಸರ್ವ ಬೆಂಬಲವನ್ನು ನೀಡಲಾಗಿದೆ. ಸಹಾಯಧನವನ್ನು ವಿವಿಧ ಯೋಜನೆ ಮೂಲಕ ನೀಡಲಾಗುತ್ತಿದ್ದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (PM Kisan Yojana) ಇದರಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ. 16ನೇ ಕಂತು ಯಾವಾಗ ಬಿಡುಗಡೆ ಆಗುತ್ತದೆ ಎಂದು ಕಾದವರಿಗೆ ಕೇಂದ್ರ ಸರಕಾರ ಸಿಹಿ ಸುದ್ದಿ ನೀಡಿದೆ.

ಯಾವುದು ಈ ಯೋಜನೆ?

2019ರಲ್ಲಿ ರೈತರಿಗೆ ಕೃಷಿ ಚಟುವಟಿಕೆಗೆ ಉತ್ತೇಜನೆ ನೀಡಬೇಕು ಎಂಬ ನೆಲೆಯಲ್ಲಿ ಪಿಎಂ ಕಿಸಾನ್ ಯೋಜನೆ (PM Kisan Yojana) ಜಾರಿಗೆ ತರಲಾಯಿತು. ಕೃಷಿ ಕುಟುಂಬದವರಿಗೆ ಕೃಷಿ ಅನುಕೂಲ ಒದಗಿಸುವ ಸಲುವಾಗಿ 6000 ರೂಪಾಯಿಗಳ ಧನಸಹಾಯವನ್ನು ನೀಡಲಾಗುತ್ತದೆ. ಇದುವರೆಗೆ 15 ಕಂತಿನ ಹಣ ಬಿಡುಗಡೆ ಆಗಿದ್ದು ಬಡ ಹಾಗೂ ಮಧ್ಯಮ ವರ್ಗದ ರೈತರಿಗೆ ಕೃಷಿ ಪರಿಕರ ಕೊಂಡುಕೊಳ್ಳಲು ಈ ಹಣ ಬಹಲ ಉಪಯೋಗ ಆಗಿದೆ ಎನ್ನಬಹುದು.

ಯಾವಾಗ ಬರುತ್ತೆ?

 

 

advertisement

ಪಿಎಂ ಕಿಸಾನ್ ಯೋಜನೆ (PM Kisan Yojana) ಅಡಿಯಲ್ಲಿ 16ನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ಕಾಯುವವರಿಗೆ ಕೇಂದ್ರ ಸರಕಾರ ಶುಭ ಸುದ್ದಿ ನೀಡಿದೆ. 16ನೇ ಕಂತಿನ ಹಣವನ್ನು 2024ರ ಫೆಬ್ರವರಿ 28 ರಂದು ಬಿಡುಗಡೆ ಮಾಡಲು ದಿನಾಂಕ ನಿಗಧಿ ಮಾಡಲಾಗಿದೆ. ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ 15ನೇ ಕಂತಿನ ಹಣ ಬಂದಿದ್ದು ಇದೀಗ 16ನೇ ಕಂತಿನ ಹಣ ಸಹ ಶೀಘ್ರವೇ ಸಿಗಲಿದೆ ಹಾಗಾಗಿಯೇ ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳಿಗೆ ಖುಷಿ ತಂದ ವಿಚಾರ ಇದೆನ್ನಬಹುದು.

ಹೀಗೆ ಮಾಡಿ

ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ನೀವು ಫಲಾನುಭವಿಗಳಾಗಿ ಹಣ ಪಡೆಯಬೇಕಾದರೆ ಮೊದಲು EKYC ಯನ್ನು ಸಹ ಸಲ್ಲಿಸಲೇ ಬೇಕು. KYC ಯನ್ನು ಅನೇಕ ಕ್ಷೇತ್ರದಲ್ಲಿ ಕಡ್ಡಾಯ ಮಾಡಲಾಗುತ್ತಿದ್ದು ಪಿಎಂ ಕಿಸಾನ್ ಯೋಜನೆಗೆ ಕೂಡ ಅಗತ್ಯವೆಂದು ಹೇಳಲಾಗಿದೆ. ಹಣವನ್ನು ಮೂರು ಕಂತಿನಂತೆ ವರ್ಷಕ್ಕೆ ರೈತರಿಗೆ 6000 ರೂಪಾಯಿ ಜಮೆ ಆಗಲಿದ್ದು KYC ಮಾಡಿಸದೆ ಇದ್ದರೆ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆ ಇದೆ.

ಏನು ಮಾಡಬೇಕು?

ಪಿಎಂ ಕಿಸಾನ್ ಯೋಜನೆಗಾಗಿಯೇ ಒಂದು ಅಧಿಕೃತ ವೆಬ್‌ಸೈಟ್‌ ನೀಡಲಾಗಿದ್ದು ಅದಕ್ಕೆ ಭೇಟಿ ನೀಡಿ ಬಳಿಕ ಅಲ್ಲಿ KYC ಅಪ್ಡೇಟ್ ಆಪ್ಶನ್ ಬರಲಿದ್ದು ನಿಮ್ಮ ಆಧಾರ್ ಸಂಖ್ಯೆ ಪಿಎಂ ಕಿಸಾನ್ ಕಾರ್ಡ್ ರಿಜಿಸ್ಟರ್ ಸಂಖ್ಯೆ, ಮೊಬೈಲ್ ಸಂಖ್ಯೆ ಎಲ್ಲ ಬರಲಿದೆ ಅದೆಲ್ಲ ಫಿಲಪ್ ಆದ ಬಳಿಕ ಲಿಂಕ್ ಆದ ಮೊಬೈಲ್ ಗೆ OTP ಬರಲಿದೆ. ಒಂದು ವೇಳೆ ಈಗಾಗಲೇ ನಿಮ್ಮ KYC ಪ್ರಕ್ರಿಯೆ ಆಗಿದ್ದು ನಿಮಗೆ ಖಾತರಿ ಇಲ್ಲವಾಗಿದ್ದರೆ ಆಗ ಸ್ಟೇಟಸ್ ಚೆಕ್ ನಲ್ಲಿ ಈ ಬಗ್ಗೆ ಮಾಹಿತಿ ದೊರೆಯಲಿದೆ.

advertisement

Leave A Reply

Your email address will not be published.