Karnataka Times
Trending Stories, Viral News, Gossips & Everything in Kannada

RTC-Aadhaar Link: ರೈತರು ತಮ್ಮ RTC ಗೆ ಆಧಾರ್ ಲಿಂಕ್ ಮಾಡೋದು ಕಡ್ಡಾಯ, ಇಲ್ಲದಿದ್ದರೆ ಈ ಸೌಲಭ್ಯ ಸಿಗಲ್ಲ!

advertisement

ಇಂದು ಆಧಾರ್ ಪ್ರತಿಯೊಂದು ಕೆಲಸಕ್ಕೆ ಕಡ್ಡಾಯ ಎನಿಸಿದೆ. ಹಾಗಾಗಿ ಸಣ್ಣ ಮಗುವಿನಿಂದ ಹಿಡಿದು ಹಿರಿಯರ ವರೆಗೂ ಆಧಾರ್ ಕಾರ್ಡ್ ಮುಖ್ಯ ವಾಗಿ ಬೇಕು.ಅದೇ ರೀತಿ ಸರಕಾರದ ಸೌಲಭ್ಯ ಪಡೆಯಬೇಕಾದ್ರೂ ಬೇಕು. ಈ ಒಂದು ದಾಖಲೆಯಲ್ಲಿ ನಮ್ಮ ಎಲ್ಲ ವೈಯಕ್ತಿಕ ಮಾಹಿತಿಗಳು ಒಳಗೊಂಡಿರುತ್ತದೆ. ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇತ್ಯಾದಿ. ಇದೀಗ ರೈತರು ತಮ್ಮ‌ ಭೂ ದಾಖಲೆಗೂ ಆಧಾರ್ ಲಿಂಕ್ ಕಡ್ಡಾಯ ಎಂದು ಮಾಡಿದೆ.

ಪಹಣಿಗೆ ಆಧಾರ್ ಸೀಡಿಂಗ್ ಮಾಡಿ:

 

 

ರೈತರಿಗೆ ಸರಿಯಾದ ಸಮಯಕ್ಕೆ ಸರಕಾರದ ಸೌಲಭ್ಯಗಳು ಸಿಗಬೇಕಾದ್ರೆ ಪಹಣಿ ಅಥವಾ RTCಗೆ ಆಧಾರ್ ಸೀಡಿಂಗ್ ಮಾಡುವುದು ಕಡ್ಡಾಯ ವಾಗಿದೆ. ಇದೀಗ ರೈತರು ತಮ್ಮ ಜಮೀನಿನ ಪಹಣಿ ಹಾಗೂ ಆಧಾರ್ (RTC- Aadhaar) ವಿವರದೊಂದಿಗೆ https://landrecords.karnataka.gov.in/ service4 ಇಲ್ಲಿ ಲಾಗಿನ್ ಮಾಡಿಕೊಂಡು ಆಧಾರ್‌ನೊಂದಿಗೆ ಲಿಂಕ್ ಮಾಡಿಸ ಬಹುದಾಗಿದೆ.

ಇದಕ್ಕೆಲ್ಲ ಕಡ್ಡಾಯ ಲಿಂಕ್ ಬೇಕು:

advertisement

ಹಲವಾರು ಅಗತ್ಯ ದಾಖಲೆಗಳಿಗೆ ಆಧಾರ್ ಕಾರ್ಡ್ (Aadhaar Card) ಅನ್ನು ಲಿಂಕ್ ಮಾಡಲಾಗುತ್ತಿದೆ. ಅದರಂತೆಯೇ ಪ್ಯಾನ್ ಕಾರ್ಡ್‌ (PAN Card) ಗೂ ಕೂಡಾ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಅದೇ ರೀತಿ ಬ್ಯಾಂಕ್ ಖಾತೆ, ರೇಷನ್ ಕಾರ್ಡ್, ಮೊಬೈಲ್ ಸಂಖ್ಯೆ, ಇತ್ಯಾದಿ ಗಳಿಗೂ ಆಧಾರ್ ಲಿಂಕ್ ಕಡ್ಡಾಯ ವೆನಿಸಿದೆ.

ಇಲ್ಲಿ ಸಂಪರ್ಕ ಮಾಡಿ:

ಸರ್ಕಾರವು ಜಮೀನಿನ ಪಹಣಿ ಯಾರ ಹೆಸರಲ್ಲಿ ಇರುತ್ತದೆಯೋ ಅಂದರೆ ಜಮೀನಿನ ಯಜಮಾನನ ಆಧಾರ್ ಕಾರ್ಡನ್ನು ಲಿಂಕ್ ಮಾಡುವುದು ಕಡ್ಡಾಯ ಎಂದಿದೆ.ಅದೇ ರೀತಿ ರೈತರು ತಮ್ಮ ಪಹಣಿ ಹಾಗೂ ಆಧಾರ್ ದಾಖಲೆಯನ್ನು ಸಂಬಂಧಪಟ್ಟ ಗ್ರಾಮ ಆಡಳಿತಾಧಿಕಾರಿಯನ್ನು ಸಂಪರ್ಕ ಮಾಡುವ ಮೂಲಕ ಲಿಂಕ್ ಮಾಡಬಹುದಾಗಿದೆ.

ಈ ಸಂದೇಶ ಬರಲಿದೆ:

ನಿಮ್ಮ ಆಧಾರ್ ಸಂಖ್ಯೆಯನ್ನು ಪಹಣಿ ಜೊತೆ ಲಿಂಕ್ ಮಾಡುವುದರಿಂದ ನಿಮ್ಮ ಜಮೀನಿನ ತಿದ್ದುಪಡಿ , ನಿಮಗೆ ಕೃಷಿ ಇಲಾಖೆಯಿಂದ ಸಿಕ್ಕಂತಹ ಸೌಲಭ್ಯ, ಪರಿಹಾರ ಮೊತ್ತ, ಅಥವಾ ಪಹಣಿಯಲ್ಲಿ ಯಾವುದೇ ರೀತಿಯ ಬದಲಾವಣೆ ಆದಲ್ಲಿ ನಿಮ್ಮ ಮೊಬೈಲ್ ಗೆ ಸಂದೇಶ ಬರಲಿದೆ. ನಿಮ್ಮ ಪಹಣಿ ಆಧಾರ್ ಗೆ ಲಿಂಕ್ ಆಗಿದ್ದರೆ ನಿಮ್ಮ ಪಹಣಿ ಈಗಾಗಲೇ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದೆ ಎಂಬ ಸಂದೇಶ ನಿಮಗೆ ಬರಲಿದೆ.

advertisement

Leave A Reply

Your email address will not be published.