Karnataka Times
Trending Stories, Viral News, Gossips & Everything in Kannada

PM Kisan: ಕೇವಲ ಆಧಾರ್ ಕಾರ್ಡ್ ನಂಬರ್ ಬಳಸಿ ಪಿ ಎಂ ಕಿಸಾನ್ ಹಣದ ಸ್ಟೇಟಸ್ ಚೆಕ್ ಮಾಡುವ ವಿಧಾನ ಇಲ್ಲಿದೆ!

advertisement

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಯ ಅಡಿಯಲ್ಲಿ ಎರಡು ಕೋಟಿಗೂ ಅಧಿಕ ರೈತರು ಪ್ರತಿ ವರ್ಷ 6,000ಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಇದರಿಂದ ರೈತರಿಗೆ ಸಾಕಷ್ಟು ಆರ್ಥಿಕ ಬೆಂಬಲ ಸಿಕ್ಕಂತಾಗಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಬಗ್ಗೆ ಈಗ ಸರ್ಕಾರ ಮತ್ತೊಂದು ಹೊಸ ಅಪ್ಡೇಟ್ ನೀಡಿದೆ. ಅದರ ಬಗ್ಗೆ ಇಲ್ಲಿದೆ ಮಾಹಿತಿ.

ಪ್ರತಿ ವರ್ಷ ಪಡೆಯಬಹುದು 6,000 ರೂ:

ಈ ಯೋಜನೆಯ 2019 ರಲ್ಲಿ ಆರಂಭವಾಯಿತು. ಈಗಾಗಲೇ 15 ಕಂತಿನ ಹಣ ರೈತರ ಖಾತೆಗೆ ಜಮಾ ಆಗಿದೆ. ಕಿಸಾನ್ ಸಮ್ಮಾನ ನಿಧಿ ಯೋಜನೆಯ ಅಡಿಯಲ್ಲಿ, ನಾಲ್ಕು ತಿಂಗಳಿಗೆ ಒಮ್ಮೆ ಎರಡು ಸಾವಿರ ರೂಪಾಯಿಗಳಂತೆ ಮೂರು ಕಂತಿನಲ್ಲಿ 6,000ಗಳನ್ನು ಫಲಾನುಭವಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಕಳೆದ ನವೆಂಬರ 2023, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಯ 15ನೇ ಕಂತಿನ ಹಣ ಬಿಡುಗಡೆಯಾಗಿತ್ತು. ಇದೀಗ ರೈತರು 16ನೇ ಕಂತಿಗಾಗಿ ಕಾಯುತ್ತಿದ್ದಾರೆ.

16ನೇ ಕಂತಿನ ಹಣ ಯಾವಾಗ ಬಿಡುಗಡೆ:

 

advertisement

 

15 ಕಂತಿನ ಹಣವನ್ನು ಪಡೆದುಕೊಂಡ ಸಹಸ್ರಾರು ರೈತರು 16 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ ಈಗ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಫೆಬ್ರವರಿ 16ರ ಬಳಿಕ ಮೂರನೇ ಕಂತಿನ ಹಣ ಬಿಡುಗಡೆ ಆಗುವ ಸಾಧ್ಯತೆ ಇದೆ. ಇನ್ನು ಸರ್ಕಾರದ ತಿಳಿಸಿರುವ ಪ್ರಕಾರ ನೀವು ಕೆವೈಸಿ ಪ್ರಕ್ರಿಯೆ ಪೂರ್ಣ ಗೊಳಿಸದೇ ಇದ್ದರೆ ಹಾಗೂ ನಿಮ್ಮ ಭೂ ದಾಖಲೆಗಳನ್ನು ಪರಿಶೀಲಿಸದೇ ಇದ್ದರೆ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ. ಹಾಗಾಗಿ ಇನ್ನೂ ಈ ಕೆಲಸ ಮಾಡದೇ ಹೋದರೆ ಬ್ಯಾಂಕ್ ಗೆ ಹೋಗಿ ನಿಮ್ಮ ಖಾತೆಗೆ ಆಧಾರ್ ಲಿಂಕ್ ಅಥವಾ EKYC ಮಾಡಿಸಿಕೊಳ್ಳಿ.

ಆಧಾರ್ ಕಾರ್ಡ್ ಮೂಲಕ PM Kisan ಸ್ಟೇಟಸ್ ತಿಳಿದುಕೊಳ್ಳಿ:

ಯಾವುದರ ರೈತ ತಮ್ಮ ಖಾತೆಗೆ ಬಂದಿರುವ ಡಿ ಬಿ ಟಿ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು ಅದಕ್ಕಾಗಿ ಆಧಾರ್ ಕಾರ್ಡ್ (Aadhaar Card) ಬಹಳ ಮುಖ್ಯವಾಗಿರುವ ದಾಖಲೆ ಆಗಿರುತ್ತದೆ. ಪಿ ಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಸ್ಟೇಟಸ್ ತಿಳಿದುಕೊಳ್ಳಲು https://pmkisan.gov.in/ ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ಫಾರ್ಮರ್ಸ್ ಕಾರ್ನರ್ ವಿಭಾಗ ಕಾಣಿಸುತ್ತದೆ. ಅಲ್ಲಿ ನಿಮ್ಮ ಸ್ಥಿತಿಯನ್ನು ತಿಳಿಯಿರಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಈಗ ಸ್ಟೇಟಸ್ ತಿಳಿದುಕೊಳ್ಳಲು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ನಿಮ್ಮ ಮೊಬೈಲ್ಗೆ OTP ಬರುತ್ತದೆ. ಅದನ್ನು ನಮೂದಿಸಿ. ಹಾಗೇನೇ ಕೆಳಗಡೆ ಕೊಟ್ಟಿರುವ ಕ್ಯಾಪ್ಚವನ್ನು ಹಾಕಬೇಕು. ಇಷ್ಟು ಮಾಡಿದ್ರೆ ನಿಮಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಡಿ ಬಿ ಟಿ ಸ್ಟೇಟಸ್ ತಿಳಿದುಕೊಳ್ಳಬಹುದು. ರೈತರಿಗೆ ಆರ್ಥಿಕ ಆಧಾರವಾಗಿರುವ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ವಾರ್ಷಿಕ ಮೊತ್ತವನ್ನು 6,000 ರೂ. ನಿಂದ 8,000 ರೂ. ಗೆ ಹೆಚ್ಚಿಸುವ ನಿರೀಕ್ಷೆಯೂ ಇದೆ.

advertisement

Leave A Reply

Your email address will not be published.