Karnataka Times
Trending Stories, Viral News, Gossips & Everything in Kannada

Poco C65 5G: ಬಡವರಿಗಾಗಿಯೇ ಮಾರುಕಟ್ಟೆಗೆ ಬಂದಿದೆ DSLR ಕ್ಯಾಮರಾ ಕ್ಲಾರಿಟಿ ಇರುವ 5G ಸ್ಮಾರ್ಟ್ ಫೋನ್, ಬೆಲೆ ಕೇವಲ 8,599 ರೂಪಾಯಿ!

advertisement

ಇತ್ತೀಚಿನ ದಿನಗಳಲ್ಲಿ ಯಾರೇ ಸ್ಮಾರ್ಟ್ ಫೋನ್ ಖರೀದಿ ಮಾಡುವುದಿದ್ದರೂ ಮೊದಲು ನೋಡುವುದೇ ಆ ಫೋನಿನ ಬ್ಯಾಟರಿ ಬ್ಯಾಕಪ್ ಹಾಗೂ ಕ್ಯಾಮೆರಾ ಕ್ಲಾರಿಟಿ ಹೇಗಿದೆ ಎನ್ನುವುದನ್ನು. ಡಿಎಸ್ಎಲ್ಆರ್ ಕ್ಯಾಮೆರಾ ನೀಡುವಷ್ಟು ಕ್ಲಾರಿಟಿಯನ್ನು ಇತ್ತೀಚಿನ ದಿನಗಳಲ್ಲಿ ಒಂದು ಸ್ಮಾರ್ಟ್ ಫೋನ್ ನಲ್ಲಿ ಪಡೆದುಕೊಳ್ಳಬಹುದು ಅಷ್ಟರಮಟ್ಟಿಗೆ ತಂತ್ರಜ್ಞಾನ ಮುಂದುವರೆದಿದೆ.

ನವೀಕೃತಗೊಂಡಿರುವ ತಂತ್ರಜ್ಞಾನವನ್ನು ಅಳವಡಿಸಿರುವ 5 ಜಿ ಫೋನ್ ಉತ್ತಮ ಕ್ಯಾಮರಾ ಕ್ಲಾರಿಟಿಯೊಂದಿಗೆ ಹಾಗೂ ಕೈಗೆಟಕುವ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದು ನೀವು ಬಯಸಿದರೆ ಇದು ಖರೀದಿಗೆ ಸರಿಯಾದ ಸಮಯ. ಪೋಕೋ ಕಂಪನಿ ತನ್ನ ಹೊಸ 5 ಜಿ ಫೋನ್ (Poco C65 5G) ಅನ್ನು ಬಿಡುಗಡೆ ಮಾಡಿದೆ. ಈ ಫೋನಿನ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Poco C65 5G Smartphone ವೈಶಿಷ್ಟ್ಯತೆಗಳು!

ಸ್ಮಾರ್ಟ್ ಫೋನ್ ಖರೀದಿ ಮಾಡುವಾಗ ಅದರಲ್ಲಿ ಇರುವಂತಹ ವೈಶಿಷ್ಟ್ಯತೆಗಳ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಹೊಸ ಸ್ಕ್ರೀನ್ ಸಾಂದ್ರತೆ ಹೊಂದಿರುವ ಫೋನ್ ಬಿಡುಗಡೆ ಮಾಡಿದ್ದು 260 PPI ಪರದೆಯ ಸಾಂದ್ರತೆಯಾಗಿದೆ 720*1600 ಫಿಕ್ಸೆಲ್ ರೆಸೊಲ್ಯೂಷನ್ ಹೊಂದಿದೆ. IPS LCD ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಕೊಡಲಾಗಿದೆ. ಇದರಿಂದಾಗಿ ಫೋನ್ ಧೂಳು ಅಥವಾ ನೀರಿನಿಂದ ಪ್ರೊಟೆಕ್ಷನ್ ಪಡೆದುಕೊಳ್ಳುತ್ತದೆ. ಮಲ್ಟಿ ಮೀಡಿಯಾ ಹಾಗೂ ಗೇಮಿಂಗ್ ಅನುಭವವನ್ನು ಉತ್ತಮಗೊಳಿಸುವಂತಹ 90 Hz ರಿಫ್ರೇಶ್ ದರವನ್ನು ಹೊಂದಿದೆ.

Poco C65 5G Smartphone ವಿಶೇಷತೆ!

advertisement

ಪೋಕೋ ಸದ್ಯ 4GB, 6GB ಹಾಗೂ 8GB ರಾಮ್ ಗಳನ್ನು ಹೊಂದಿರುವ ಮೂರು ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ 128 GB ಹಾಗೂ 256 GB ಆಂತರಿಕ ಸಂಗ್ರಹಣೆಯನ್ನು ಕೊಡಲಾಗಿದೆ. ಈ ಫೋನ್ ಗಳು ಆಂಡ್ರಾಯ್ಡ್ 13 ಅನ್ನು ಬೆಂಬಲಿಸುತ್ತವೆ. Mediatech MT 6769 z helio g85 ಆಕ್ವಾ ಕೋರ್ ಪ್ರೊಸೆಸರ್ ಇದೆ. 6.6 ಇಂಚಿನ ಎಚ್ ಡಿ ಪ್ಲಸ್ ಡಿಸ್ಪ್ಲೇ ಹೊಂದಿರುವ ಈ ಫೋನಿನಲ್ಲಿ ಕ್ಯಾಮೆರಾ ಕ್ಲಾರಿಟಿ ಕೂಡ ಅಷ್ಟೇ ಉತ್ತಮವಾಗಿದೆ.

Poco 5G C65 Smartphone ಕ್ಯಾಮೆರಾ ಮತ್ತು ಬ್ಯಾಟರಿ

ಈ ಫೋನಿನ ಹಿಂಭಾಗದಲ್ಲಿ 50 ಎಂಪಿ 2ಎಂಪಿ ಕ್ಯಾಮೆರಾ ಕೊಡಲಾಗಿದೆ ಹಾಗೂ ಮುಂಭಾಗದ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸರ್ ಅಳವಡಿಸಲಾಗಿದೆ. ಇನ್ನು ಬ್ಯಾಟರಿ ವಿಚಾರಕ್ಕೆ ಬಂದರೆ 18W ವೇಗದ ಚಾರ್ಜಿಂಗ್ ನೀಡಬಲ್ಲ 5000 ಎಂ ಎ ಎಚ್ ಬ್ಯಾಟರಿ ಅಳವಡಿಸಲಾಗಿದೆ. ಹೀಗಾಗಿ ಬಹಳ ಬೇಗ ಈ ಫೋನ್ ಚಾರ್ಜ್ ಆಗುತ್ತದೆ.

Poco 5G C65 Smartphone ಬೆಲೆ!

  • ಪೋಕೋ ಸ್ಮಾರ್ಟ್ ಫೋನ್ (Smartphone) ಬೆಲೆ ನೋಡುವುದಾದರೆ, ವಿವಿಧ ರೂಪಾಂತರಗಳಲ್ಲಿ ಲಭ್ಯ ಇರುವ ಈ ಸ್ಮಾರ್ಟ್ ಫೋನ್ ಗಳ ಬೆಲೆ ಕೂಡ ಬೇರೆ ಬೇರೆ ರೀತಿಯಾಗಿವೆ. 4+128GB ರೂಪಾಂತರ- 22% ನಷ್ಟು ರಿಯಾಯಿತಿಯೊಂದಿಗೆ 8599 ರೂಪಾಯಿಗಳಿಗೆ ಲಭ್ಯ.
  • 6+128GB ರೂಪಾಂತರ- 20% ನಷ್ಟು ರಿಯಾಯಿತಿಯೊಂದಿಗೆ 9,599 ರೂಪಾಯಿಗಳಿಗೆ ಲಭ್ಯ.
  • 8+256GB ರೂಪಾಂತರ- 28% ನಷ್ಟು ರಿಯಾಯಿತಿಯೊಂದಿಗೆ 10,999 ರೂಪಾಯಿಗಳಿಗೆ ಲಭ್ಯ.
  • ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ ಅಷ್ಟೇ ಕ್ಯಾಮೆರಾ ಕ್ಲಾರಿಟಿ ಇರುವ ಜೊತೆಗೆ ಉತ್ತಮ ಗೇಮಿಂಗ್ ಅನುಭವ ನೀಡಬಲ್ಲ Poco 5G C65 smart phone ಇಂದೇ ಖರೀದಿ ಮಾಡಿ.

advertisement

Leave A Reply

Your email address will not be published.