Karnataka Times
Trending Stories, Viral News, Gossips & Everything in Kannada

Tata Motors EV: ಟಾಟಾ ನೆಕ್ಸಾನ್, ಟಿಯಾಗೋ ಇವಿ ಕಾರಿನ ಬೆಲೆ 1.2 ಲಕ್ಷ ರೂ ಕಡಿತ, ಕೂಡಲೇ ಖರೀದಿಸಿ!

advertisement

ಭಾರತದಲ್ಲಿ ಟಾಟಾ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಇದರ ಬೆನ್ನಲ್ಲೇ ಟಾಟಾ ಮೋಟಾರ್ಸ್ ಇದೀಗ ಟಾಟಾ ನೆಕ್ಸಾನ್ ಇವಿ (Tata Nexon EV)ಹಾಗೂ ಟಾಟಾ ಟಿಯಾಗೋ ಇವಿ (Tata Tiago EV) ಕಾರಿಗೆ ಬಂಪರ್ ಆಫರ್ ಘೋಷಿಸಿದೆ. ಬರೋಬ್ಬರಿ 1.2 ಲಕ್ಷ ರೂಪಾಯಿ ಕಡಿತಗೊಳಿಸಲಾಗಿದೆ. ಟಾಟಾ ಮೋಟಾರ್ಸ್ (Tata Motors) ಎಲೆಕ್ಟ್ರಿಕ್ ಕಾರಗಳು ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಭಾರತದ ಅತ್ಯುತ್ತಮ ಇವಿ ಕಾರುಗಳ ಪೈಕಿ ನೆಕ್ಸಾನ್, ಟಿಯಾಗೋ, ಟಿಗೋರ್, ಪಂಚ್ ಮುಂಚೂಣಿಯಲ್ಲಿದೆ. ಇದೀಗ ಟಾಟಾ ಮೋಟಾರ್ಸ್ ಭರ್ಜರಿ ಆಫರ್ ಘೋಷಿಸಿದೆ.

ಈ ಎರಡು ಕಾರಿಗೆ ಭರ್ಜರಿ ಆಫರ್

ಟಾಟಾ ಮೋಟಾರ್ಸ್ (Tata Motors EV)  ತನ್ನ ಎರಡು ಎಲೆಕ್ಟ್ರಿಕ್ ಕಾರುಗಳ ಬೆಲೆಯನ್ನು ಕಡಿಮೆ ಮಾಡಿದೆ. ಟಾಟಾ ನೆಕ್ಸಾನ್ ಇವಿ ಬೆಲೆ 1.20 ಲಕ್ಷ ರೂಪಾಯಿ ಇಳಿಕೆಯಾಗಿದ್ದು, ಟಿಯಾಗೊ ಇವಿ ಬೆಲೆ 70,000 ರೂಪಾಯಿ ಇಳಿಕೆಯಾಗಿದೆ. ಬ್ಯಾಟರಿ ಬೆಲೆ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ಉದ್ದೇಶದಿಂದ ಬೆಲೆ ಇಳಿಕೆ ಮಾಡಲಾಗಿದೆ.

ಟಾಟಾ ನೆಕ್ಸಾನ್ ಇವಿ (Tata Nexon EV) ಬೆಲೆ ಎಷ್ಟಿದೆ?

ನೆಕ್ಸಾನ್‌ ಇವಿ ಬೆಲೆಗಳು ಈಗ 14.49 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತವೆ ಮತ್ತು ದೀರ್ಘ ಶ್ರೇಣಿಯ ನೆಕ್ಸಾನ್ ಇವಿ ಈಗ 16.99 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಆದರೆ ಟಿಯಾಗೊ ಮೂಲ ಮಾದರಿಯು 7.99 ಲಕ್ಷಕ್ಕೆ ಲಭ್ಯವಿರುತ್ತದೆ. ಆದಾಗ್ಯೂ, ಇತ್ತೀಚೆಗೆ ಬಿಡುಗಡೆಯಾದ ಪಂಚ್ ಇವಿ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

ಇವಿ ಮಾರುಕಟ್ಟೆಯಲ್ಲಿ ಟಾಟಾ 70% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ.

advertisement

ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ 70% ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿರುವ ಎಲೆಕ್ಟ್ರಿಕ್ ಪ್ಯಾಸೆಂಜರ್ ವಾಹನ ವಿಭಾಗದಲ್ಲಿ ಮಾರುಕಟ್ಟೆ ನಾಯಕ. ಕಂಪನಿಯು 2023 ರಲ್ಲಿ ಒಟ್ಟು 69,153 ಯುನಿಟ್ ಇವಿಗಳನ್ನು ಮಾರಾಟ ಮಾಡಿದೆ. ಟಾಟಾ ಮೋಟಾರ್ಸ್ ಈ ವರ್ಷ ಕರ್ವ್, ಹ್ಯಾರಿಯರ್ ಇವಿ, ಸಿಯೆರಾ ಮತ್ತು ಆಲ್ಟ್ರೋಜ್ ಇವಿಗಳನ್ನು ಬಿಡುಗಡೆ ಮಾಡಲಿದೆ.

ಟಾಟಾ ನೆಕ್ಸಾನ್ ಇವಿ (Tata Nexon EV) ವಿಶೇಷತೆಗಳು

ಇದು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಆಲ್-ವೀಲ್ ಡಿಸ್ಕ್ ಬ್ರೇಕ್ಸ್, ಹಿಲ್ ಹೋಲ್ಡ್, ಡಿಸೆಂಟ್ ಕಂಟ್ರೋಲ್ ಅನ್ನು ಹೊಂದಿದೆ.

ಟಾಟಾ ಟಿಯಾಗೊ ಇವಿ (Tata Tiago EV) ವಿಶೇಷತೆಗಳು

ಈ ಕಾರಿನ ಬಗ್ಗೆ ಹೇಳುವುದಾದರೆ, ಎಕ್ಸ್ಇ, ಎಕ್ಸ್‌ಟಿ ಸೇರಿದಂತೆ 4 ರೂಪಾಂತರ ಮತ್ತು ಸಿಗ್ನೇಚರ್ ಟೀಲ್ ಬ್ಲೂ, ಡೇಟೋನಾ ಗ್ರೇ, ಟ್ರಾಪಿಕಲ್ ಮಿಸ್ಟ್, ಪ್ರಿಸ್ಟಿನ್ ವೈಟ್ ಒಳಗೊಂಡಂತೆ 5 ಬಣ್ಣಗಳೊಂದಿಗೆ ಸಿಗುತ್ತದೆ. ಇದು 19.2 ಕೆಡಬ್ಲ್ಯೂಹೆಚ್ (kWh) ಮತ್ತು 24 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ.

ಭಾರತದಲ್ಲಿ ಇಂಧನ ಚಾಲಿತ ಪ್ಯಾಸೆಂಜರ್ ವಾಹನ ಮಾರಾಟ ಶೇಕಡಾ 8 ರಷ್ಟು ಬೆಳವಣಿಗೆ ಕಂಡಿದ್ದರೆ, ಎಲೆಕ್ಟ್ರಿಕ್ ವಾಹನದಲ್ಲಿ ಶೇಕಡಾ 90 ರಷ್ಟು ಬೆಳವಣಿಗೆಯಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಇವಿ (Tata Motors EV), ಇದೀಗ ಬೆಲೆ ಕಡಿತದಿಂದ ಪಾಲುದಾರಿಕೆ ಹೆಚ್ಚಿಸಲಿದೆ.

advertisement

Leave A Reply

Your email address will not be published.