Karnataka Times
Trending Stories, Viral News, Gossips & Everything in Kannada

FAME II Subsidy Scheme: ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಗುಡ್ ನ್ಯೂಸ್; FAME II ಯೋಜನೆಯ ಬಗ್ಗೆ ಸರ್ಕಾರದ ಹೊಸ ನಿರ್ಧಾರ!

advertisement

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಜನರು ಹೆಚ್ಚಾಗಿ ಖರೀದಿ ಮಾಡಲು ಬಯಸುತ್ತಿದ್ದಾರೆ ಅದರಂತೆ ಬೇರೆ ಬೇರೆ ಮೋಟಾರ್ ಕಂಪನಿಗಳು ಸ್ಟಾರ್ಟ್ ಅಪ್ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿದ್ದಾರೆ ಪೆಟ್ರೋಲ್ ಅಥವಾ ಡೀಸೆಲ್ ಇಂಧನದ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕಲ್ ವಾಹನ (Electric Vehicle) ತುಸು ದುಬಾರಿ. ಹಾಗಾಗಿ ಪ್ರತಿಯೊಬ್ಬರಿಗೂ ಕೂಡ ಹೊಸ ವಾಹನ ಖರೀದಿಸುವಾಗ ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವುದಕ್ಕೆ ಆರ್ಥಿಕವಾಗಿ ಕಷ್ಟವಾಗಬಹುದು.

ಯಾವಾಗ ಎಲೆಕ್ಟ್ರಿಕಲ್ ವಾಹನಗಳ ಬೇಡಿಕೆ ಕಡಿಮೆ ಇತ್ತೋ, ಆಗ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವ ಸಲುವಾಗಿ ಸಬ್ಸಿಡಿ ಯೋಜನೆಯ ಆರಂಭಿಸಿತ್ತು. 2019 ರಲ್ಲಿ FAME II Subsidy Scheme ಆರಂಭವಾಯಿತು. ಇಲ್ಲಿಯವರೆಗೆ 11.500 ಕೋಟಿಗಳ ವರೆಗೆ ಮಾತ್ರ ಸಬ್ಸಿಡಿ ಹಣ ಬಿಡುಗಡೆ ಆಗಿದೆ. ಆದರೆ ಈ ಯೋಜನೆ 31 ಮಾರ್ಚ್ 2024ರ ವರೆಗೆ ಮಾನ್ಯವಾಗಿರುತ್ತದೆ. ಈ ಸಬ್ಸಿಡಿ ಯೋಜನೆಯಲ್ಲಿ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಮಿನಿಸ್ಟ್ರಿ ಆಫ್ ಹೆವಿ ಇಂಡಸ್ಟ್ರೀಸ್, ಫಾಸ್ಟರ್ ಅಡಾಪ್ಟಿವ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ (FAME) ಎರಡನೇ ಹಂತದ ಹಣಕಾಸಿನ ವೆಚ್ಚವನ್ನು 1500 ಕೋಟಿಗಳಿಂದ 11500 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದೆ. 2019ರಲ್ಲಿ ಆರಂಭವಾದ FAME II ಸಬ್ಸಿಡಿ ಯೋಜನೆ (FAME II Subsidy Scheme) ಯಲ್ಲಿ 10,000 ಕೋಟಿ ರೂಪಾಯಿಗಳಷ್ಟು ಇದ್ದ ಸಬ್ಸಿಡಿಯನ್ನು 11,500 ಕೋಟಿ ರೂ. ಹೆಚ್ಚಿಸಿದ್ದು, ಎಲೆಕ್ಟ್ರಿಕ್ ವಾಹನ ಖರೀದಿದಾರರು ಇದರಿಂದ ನೇರ ಪ್ರಯೋಜನ ಪಡೆದುಕೊಳ್ಳುತ್ತಾರೆ. ಮಾರ್ಚ್ 31 2024ರ ವರೆಗೆ ಮಾತ್ರ ಈ ಸಬ್ಸಿಡಿ ಯೋಜನೆ ಜಾರಿಯಲ್ಲಿ ಇರುತ್ತದೆ.

ಯಾರಿಗೆಲ್ಲ ಸಿಗಲಿದೆ FAME II ಪ್ರಯೋಜನ!

 

advertisement

 

ಈ ಯೋಜನೆಯ ಅಡಿಯಲ್ಲಿ 10 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು 5 ಲಕ್ಷ ಎಲೆಕ್ಟ್ರಿಕ್ ಮೂರು ಚಕ್ರದ ವಾಹನಗಳು ಹಾಗೂ 55,000 ಎಲೆಕ್ಟ್ರಿಕ್ ಪ್ರಯಾಣಿಕರ ಕಾರುಗಳು ಜೊತೆಗೆ 7,000 ಎಲೆಕ್ಟ್ರಿಕ್ ಬಸ್ ಗಳಿಗೆ ಹಣಕಾಸಿನ ನೆರವನ್ನು ನೀಡಲಾಗುತ್ತಿದೆ. ಈ ಯೋಜನೆಯ ಅಡಿಯಲ್ಲಿ 13.41 ಲಕ್ಷ ಎಲೆಕ್ಟ್ರಿಕ್ ವಾಹನಗಳ ಮಾರಾಟದ ಮೇಲೆ, ಒಟ್ಟು 5,790 ಕೋಟಿ ರೂಪಾಯಿಗಳನ್ನು ಎಲೆಕ್ಟ್ರಿಕ್ ವಾಹನ ತಯಾರಿಕರಿಗೆ ವಿತರಣೆ ಮಾಡಲಾಗಿದೆ. ಇವುಗಳಲ್ಲಿ 11.86 ಲಕ್ಷ ಟೂ ವೀಲರ್ ಗಳು, 1.39 ಲಕ್ಷ ಮೂರು ಚಕ್ರದ ವಾಹನಗಳು ಹಾಗೂ 16,991 ನಾಲ್ಕು ಚಿತ್ರದ ಎಲೆಕ್ಟ್ರಿಕ್ ವಾಹನಗಳು ಸೇರಿವೆ.

ಎಲೆಕ್ಟ್ರಿಕ್ ವೆಹಿಕಲ್ ಪಬ್ಲಿಕ್ ಚಾರ್ಜಿಂಗ್ ಸ್ಟೇಷನ್ ಗಾಗಿ, 6862 ಎಲೆಕ್ಟ್ರಿಕ್ ಬಸ್ ಗಳಿಗೆ ಸಬ್ಸಿಡಿ ಬಂಡವಾಳವನ್ನು ಸರ್ಕಾರ ಒದಗಿಸಿದೆ. 7,432 ಎಲೆಕ್ಟ್ರಿಕ್ ವೆಹಿಕಲ್ ಪಬ್ಲಿಕ್ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲಾಗಿದೆ. ಇನ್ನು ರಾಜ್ಯ ಸಾರಿಗೆ ಸಂಸ್ಥೆ ಹಾಗೂ ಇಂಟ್ರಾಸಿಟಿ ಸಾರಿಗೆಗಾಗಿ 800 ಕೋಟಿ ರೂಪಾಯಿಗಳ ಬಂಡವಾಳ ಸಬ್ಸಿಡಿ ಸರ್ಕಾರ ಅನುಮೋದನೆ ನೀಡಿದೆ.

ಇದೀಗ ಸಬ್ಸಿಡಿಗಾಗಿ ಮೀಸಲಿಟ್ಟಿರುವ ವೆಚ್ಚವನ್ನು ಪರಿಷ್ಕರಿಸಲಾಗಿದ್ದು, 7,048 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಈ ವೆಚ್ಚದಲ್ಲಿ ದ್ವಿಚಕ್ರ ವಾಹನಗಳಿಗೆ 5,031 ಕೋಟಿ ರೂಪಾಯಿಗಳು, ಎಲೆಕ್ಟ್ರಿಕ್ ಬಸ್ ಹಾಗೂ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸುವುದಕ್ಕಾಗಿ 4,048 ಕೋಟಿ ರೂಪಾಯಿಗಳನ್ನು ನೀಡಲು ತೀರ್ಮಾನಿಸಲಾಗಿದೆ.

ಸದ್ಯ ಸರ್ಕಾರದ FAME II Subsidy Scheme ಮಾರ್ಚ್ 31.2024ರ ವರೆಗೆ ಮಾತ್ರ ಲಭ್ಯವಿದೆ ಮೂರನೇ ಹಂತದ ಸಬ್ಸಿಡಿ ಯೋಜನೆಯನ್ನು ಕೂಡ ಸರ್ಕಾರ ಬಿಡುಗಡೆ ಮಾಡಿದರೆ ಎಲೆಕ್ಟ್ರಿಕ್ ಉದ್ಯಮ ಇನ್ನಷ್ಟು ಬೆಳವಣಿಗೆಯನ್ನು ಕಾಣಲು ಸಹಾಯಕವಾಗುತ್ತದೆ ಎನ್ನುವುದು ತಜ್ಞರ ಅಂಬೋಣ.

advertisement

Leave A Reply

Your email address will not be published.