Karnataka Times
Trending Stories, Viral News, Gossips & Everything in Kannada

Lakshmi Hebbalkar: ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಯೋಜನೆ ಸ್ಥಗಿತ ಎಂದವರಿಗೆ ಮಹತ್ವದ ಸುದ್ದಿ ಕೊಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್!

advertisement

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಈಗಾಗಲೇ ಅನೇಕ ಯೋಜನೆಗಳು ಚಿರಪರಿಚಿತವಾಗಿವೆ. ಅದೇ ರೀತಿ ಹಳೆ ಯೋಜನೆಗಳು ಇನ್ನು ಮುಂದೆ ಸ್ಥಗಿತವಾಗಲಿದೆ ಎಂಬ ಮಾತು ಎಲ್ಲೆಡೆ ಹರಿದಾಡುತ್ತಿದ್ದು ಈ ಬಗ್ಗೆ ಸರಕಾರದ ಮೂಲಕವೇ ಸ್ಪಷ್ಟನೆ ಸಿಕ್ಕಿದೆ.ಹೆಣ್ಣು ಮಕ್ಕಳಿಗೆ ಭವಿಷ್ಯದಲ್ಲಿ ಹಣ ಕೂಡಿಡುವ ದೃಷ್ಟಿಯಿಂದ ಹೇಳುವುದಾದರೆ ಹುಟ್ಟಿಕೊಂಡ ಭಾಗ್ಯಲಕ್ಷ್ಮೀ (Gruha Lakshmi) ಹಾಗೂ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಬಗ್ಗೆ ಅನೇಕ ಗಾಳಿ ಮಾತು ಹರಿದಾಡುತ್ತಿದ್ದು ಜನರಿಗೆ ಉಂಟಾದ ಎಲ್ಲ ಗೊಂದಲಕ್ಕೆ ಕಾಂಗ್ರೆಸ್ ಸರಕಾರ ಉತ್ತರ ನೀಡಿದೆ.

ಸ್ವರೂಪ ಹೇಗಿದೆ?

ಭಾಗ್ಯಲಕ್ಷ್ಮೀ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಯು ಹೆಣ್ಣು ಮಕ್ಕಳಿಗೆ ಉತ್ತೇಜಿಸುವ ಕಾರ್ಯಕ್ರಮಗಳಾಗಿದ್ದು ಸರಕಾರದಿಂದ ಸಹಾಯಧನ ನೀಡಲಾಗುವುದು ಮಗುವಿಗೆ 21 ವರ್ಷವಾದ ಬಳಿಕ ಈ ಮೊತ್ತ ಮೆಚ್ಯೂರಿಟಿ ಅವಧಿ ತಲುಪಲಿದ್ದು ಹಣ ಪಡೆಯಬಹುದು‌. ಒಂದು ವೇಳೆ ಅದಕ್ಕೂ ಮುನ್ನ ಹಣ ಬೇಕೆಂದಾದರೆ 18 ವರ್ಷದ ಅವಧಿಗೆ ವಿದ್ಯಾಭ್ಯಾಸ ಕಾರಣಕ್ಕಾಗಿ ಹಣ ಪಡೆಯಬಹುದು. ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದ್ದು ಕರ್ನಾಟಕದಲ್ಲಿ ಈ ಯೋಜನೆ ಮನೆಮಾತಾಗಿದೆ.

ಸದನದಲ್ಲಿ ಚರ್ಚೆ:

ವಿಧಾನಪರಿಷತ್ ನ ಸದನದಲ್ಲಿ ಪರಿಷತ್ ನ ಕಲಾಪದ ವೇಳೆಯಲ್ಲಿ ಬಿಜೆಪಿ ಅಭ್ಯರ್ಥಿ ಎನ್. ರವಿ ಕುಮಾರ್ (N. Ravi Kumar) ಅವರು ಪ್ರಶ್ನೆ ಮಾಡಿ ಕೇಳಿದ್ದಾರೆ. ಭಾಗ್ಯಲಕ್ಷ್ಮೀ (Bhagya Lakshmi) ಹಾಗೂ ಸುಕನ್ಯಾ ಸಮೃದ್ಧಿ ಯೋಜನೆ ಸ್ಥಗಿತವಾಗುತ್ತದೆ ಎಂಬ ಬಗ್ಗೆ ಜನರಿಗೆ ಗೊಂದಲ ಏರ್ಪಟ್ಟಿದೆ ಈ ಬಗ್ಗೆ ಅವರು ಪ್ರಶ್ನಿಸಿದಾಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾದ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು ಈ ಪಶ್ನೆಗೆ ಉತ್ತರಿಸಿ ಮಾತನಾಡಿದ್ದಾರೆ. ಈ ಮೂಲಕ ಉಂಟಾದ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.

advertisement

ಸಚಿವೆ ಹೇಳಿದ್ದೇನು?

 

 

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು ಈ ಪ್ರಶ್ನೆಗೆ ಉತ್ತರಿಸಿ, ಹೆಣ್ಣು‌ಮಕ್ಕಳ ಭವಿಷ್ಯಕ್ಕೆ ನೆರವಾಗುವ ಭಾಗ್ಯಲಕ್ಷ್ಮೀ ಯೋಜನೆಯನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಈ ಬಗ್ಗೆ ಸರಕಾರ ಯಾವುದೇ ಪ್ರಸ್ತಾವನೆಯನ್ನು ಸಹ ಮಾಡಲಿಲ್ಲ ಸುಕನ್ಯಾ ಸಮೃದ್ಧಿ ಯೋಜನೆ ಕೂಡ ಯಥಾಸ್ಥಿತಿ ಮುಂದುವರಿಯಲಿದೆ ಎಂದಿದ್ದಾರೆ. ಇದೇ ವೇಳೆಗೆ ಬಿಜೆಪಿ ಅಭ್ಯರ್ಥಿ ಭಾರತಿ ಶೆಟ್ಟಿ ಅವರು ಮಾತನಾಡಿ, ಸುಕನ್ಯಾ ಸಮೃದ್ಧಿ ಕೇಂದ್ರ ಸರಕಾರದ ಯೋಜನೆ ಎಂಬುದನ್ನು ತಿಳಿಸಿದ್ದು ಅದಕ್ಕೆ ಉತ್ತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು, ಇದು ಕೇಂದ್ರದಲ್ಲ ರಾಜ್ಯ ಸರಕಾರದ್ದೆ ಪ್ರತ್ಯೇಕ ಯೋಜನೆಯಾಗಿದ್ದು ಇತ್ತೀಚೆಗಷ್ಟೆ ಕೆಲ ಅಗತ್ಯ ಮಾರ್ಪಾಡು ಮಾಡಲಾಗಿದೆ ಎಂದರು‌.

ವ್ಯವಸ್ಥೆ ಬದಲು

ಈ ಮೊದಲು ಹೆಣ್ಣು ಮಗು ಜನಿಸಿದ ಬಳಿಕ ಯೋಜನೆ ಅನ್ವಯ ಆ ಮಗಿವಿನ ಹೆಸರಿಗೆ ಬಾಂಡ್ ನೀಡಲಾಗುತ್ತಿತ್ತು ಆದರೆ ಇನ್ನು ಮುಂದೆ ವಾರ್ಷಿಕ ಮೂರು ಸಾವಿರ ರೂಪಾಯಿಯಂತೆ 15 ವರ್ಷದ ವರೆಗೆ ಒಟ್ಟು 45ಸಾವಿರ ರೂಪಾಯಿಯನ್ನು ಅಂಚೆ ಇಲಾಖೆ ಸುಕನ್ಯಾ ಸಮೃದ್ಧಿ ಖಾತೆ ಅಡಿಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಇಲ್ಲಿ ವರೆಗೆ 23 ಲಕ್ಷದವರೆಗೆ ಅರ್ಜಿಗಳು ಸ್ವೀಕಾರವಾಗಿದ್ದು ಕಳೆದ 9 ತಿಂಗಳಲ್ಲಿ ಒಂದು ಲಕ್ಷಕ್ಕಿಂತ ಅಧಿಕ ಅರ್ಜಿ ಆನ್ಲೈನ್ ಮೂಲಕ ಸ್ವೀಕಾರ ಆಗಿದೆ. ಹಾಗಾಗಿ ಬಾಂಡ್ ಬಂದಿಲ್ಲ ಎಂಬ ಆತಂಕ ಬೇಡ ಎಂದು ಸಚಿವೆ ಹೇಳಿದ್ದಾರೆ.

advertisement

Leave A Reply

Your email address will not be published.