Karnataka Times
Trending Stories, Viral News, Gossips & Everything in Kannada

Post Office: ಈ ಸ್ಕೀಮ್ ನಲ್ಲಿ ಹಣ ಹಾಕಿದ್ರೆ ಪ್ರತಿ ತಿಂಗಳು ಪೋಸ್ಟ್ ಆಫೀಸ್ ನಿಮಗೆ ಸಂಬಳ ನೀಡುತ್ತೆ!

advertisement

ಏನು ಮಾಡದೆ ಮನೆಯಲ್ಲಿ ಕುಳಿತುಕೊಂಡು ನೀವು ಪ್ರತಿ ತಿಂಗಳು ಹಣವನ್ನು ಪಡೆದುಕೊಳ್ಳಬೇಕು ಅಂದರೆ ಸಂಬಳವನ್ನು ಪಡೆದುಕೊಳ್ಳಬೇಕು ಅಂತ ಇದ್ದರೆ ಪೋಸ್ಟ್ ಆಫೀಸ್ನ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಪ್ರತಿ ತಿಂಗಳು ಏನೂ ಮಾಡದೆ ಸಂಬಳವನ್ನು ಪಡೆದುಕೊಳ್ಳಬಹುದಾಗಿದೆ. ಪೋಸ್ಟ್ ಆಫೀಸ್ (Post Office) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಜನರಿಗೆ ಲಾಭ ಆಗುವ ರೀತಿಯಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಈಗ ಹೇಳುವಂತಹ ಯೋಜನೆಯಲ್ಲಿ ಕೂಡ ಒಮ್ಮೆ ನೀವು ಹಣವನ್ನು ಇನ್ವೆಸ್ಟ್ ಮಾಡಿದರೆ ಸಾಕು ಐದು ವರ್ಷಗಳ ಕಾಲ ಪ್ರತೀ ತಿಂಗಳು ನಿಮಗೆ ಸಂಬಳದ ರೀತಿಯಲ್ಲಿ ಹಣ ಸಿಗುತ್ತದೆ. ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನದ ಮೂಲಕ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

Post Office Monthly Scheme

ಈ ಯೋಜನೆ ಅಡಿಯಲ್ಲಿ 5 ವರ್ಷಗಳವರೆಗೆ ಬರೋಬ್ಬರಿ ಒಂಬತ್ತು ಲಕ್ಷ ರೂಪಾಯಿಗಳ ಸಿಂಗಲ್ ಖಾತೆಯನ್ನು ಕ್ರಿಯೇಟ್ ಮಾಡಿ ನೀವು ಪ್ರತಿ ತಿಂಗಳು ಹಣವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನೊಂದು ಕಡೆಯಲಿ ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ಜಂಟಿ ಖಾತೆಯನ್ನು ನಿರ್ಮಿಸಿ 15 ಲಕ್ಷ ರೂಪಾಯಿಗಳ ಹೂಡಿಕೆ ಮಾಡಿ ಐದು ವರ್ಷಗಳವರೆಗೂ ಕೂಡ ಮಂತ್ಲಿ ಇನ್ಕಮ್ ಅನ್ನು ಪಡೆದುಕೊಳ್ಳಬಹುದಾಗಿದೆ. ಪ್ರತಿ ತಿಂಗಳು ಸಂಬಳದ ರೀತಿಯಲ್ಲಿ ಇದು ಕಾರ್ಯನಿರ್ವಹಿಸುತ್ತದೆ.

Image Source: Zee News

advertisement

ಮಂತ್ಲಿ ಇನ್ಕಮ್ ಹೇಗೆ ಸಿಗುತ್ತೆ?

ಒಂದು ವೇಳೆ ನೀವು ಈ ಯೋಜನೆಯಲ್ಲಿ ಸಿಂಗಲ್ ಖಾತೆಯನ್ನು ಮಾಡಿ 9 ಲಕ್ಷ ರೂಪಾಯಿ ಹಣವನ್ನು ಐದು ವರ್ಷಗಳಿಗೆ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ಐದು ವರ್ಷಗಳವರೆಗೆ ನಿಮಗೆ 5500 ಗಳ ಆದಾಯ ಸಿಗುತ್ತದೆ. ಜಂಟಿ ಖಾತೆಯಲ್ಲಿ ಐದು ವರ್ಷಗಳಿಗೆ 15 ಲಕ್ಷ ರೂಪಾಯಿಗಳ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ ಐದು ವರ್ಷಗಳವರೆಗೆ ಪ್ರತಿ ತಿಂಗಳು 9250 ಗಳ ಇನ್ಕಮ್ ಸಿಗಲಿದೆ.

ಈ ಯೋಜನೆಯಲ್ಲಿ ಖಾತೆಯನ್ನು ಓಪನ್ ಮಾಡೋದು ಹೇಗೆ ಹಾಗೂ ಬೇಕಾಗುವ ಡಾಕ್ಯುಮೆಂಟ್ ಗಳು?

ನೀವು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಕಚೇರಿಗೆ ಹೋಗಿ ನೀವು ಹಣವನ್ನು ಹೂಡಿಕೆ ಮಾಡಬೇಕಾಗಿರುವಷ್ಟು ಖಾತೆಯನ್ನು ತೆರೆಯುವ ಸಂದರ್ಭದಲ್ಲಿ ಸಂಪೂರ್ಣವಾಗಿ ನೀಡಬೇಕಾಗಿರುತ್ತದೆ. ಇನ್ನು ಈ ಸಂದರ್ಭದಲ್ಲಿ ಖಾತೆಯನ್ನು ಓಪನ್ ಮಾಡುವ ವೇಳೆ ಕೆಲವೊಂದು ಪ್ರಮುಖ ಡಾಕ್ಯೂಮೆಂಟ್ ಗಳನ್ನು ನೀಡಬೇಕಾಗಿ ಬರುತ್ತದೆ ಅವುಗಳ ಬಗ್ಗೆ ಕೂಡ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

ಈ ಸಂದರ್ಭದಲ್ಲಿ ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಅನ್ನು ಕೂಡ ತೆಗೆದುಕೊಂಡು ಹೋಗಬೇಕಾಗಿರುತ್ತದೆ. ಪ್ಯಾನ್ ಕಾರ್ಡ್ (Pan Card) ಜೊತೆಗೆ ಬ್ಯಾಂಕ್ ಡೀಟೇಲ್ಸ್ ಕೂಡ ನೀಡಬೇಕಾಗಿರುತ್ತದೆ. ಇದರ ಜೊತೆಗೆ ಅರ್ಜಿ ಫಾರಂನಲ್ಲಿ ಲಗತಿಸುವುದಕ್ಕೆ ಇತ್ತೀಚಿಗೆ ತೆಗೆದಿರುವಂತಹ ಪಾಸ್ಪೋರ್ಟ್ ಸೈಜ್ ಫೋಟೋವನ್ನು ನೀಡಬೇಕಾಗಿರುತ್ತದೆ.

advertisement

Leave A Reply

Your email address will not be published.