Karnataka Times
Trending Stories, Viral News, Gossips & Everything in Kannada

SBI: 300 ಯೂನಿಟ್ ಉಚಿತ ವಿದ್ಯುತ್ ಬೇಕಿದ್ದವರಿಗೆ ಸಿಹಿಸುದ್ದಿ ಕೊಟ್ಟ ಸ್ಟೇಟ್ ಬ್ಯಾಂಕ್! ಖಾತೆ ಇದ್ದವರಿಗೆ ಗುಡ್ ನ್ಯೂಸ್

advertisement

ಕೇಂದ್ರ ಸರ್ಕಾರವು ಪ್ರತಿ ನಾಗರಿಕರಿಗೂ ಪಿಎಂ ಸೂರ್ಯ ಗರ್ ಯೋಜನೆಯ ಅಡಿ ಉಚಿತವಾಗಿ 300 ಯೂನಿಟ್ ಎಲೆಕ್ಟ್ರಿಸಿಟಿಯನ್ನು ನೀಡುತ್ತಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಅನುಸರಿಸಬೇಕಾದ ನಿಯಮವೇನು? ಎಂಬುದನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಪ್ರಧಾನ ಮಂತ್ರಿ ಸೂರ್ಯ ಗರ್ ಯೋಜನೆಯ (PM Surya Ghar Yojana) ಪ್ರಯೋಜನವನ್ನು ಪಡೆದುಕೊಳ್ಳಲು ಅರ್ಜಿದಾರರ ಮನೆಯ ಮೇಲೆ ಸೋಲಾರ್ ರೂಫ್ ಪ್ಯಾನಲ್ (Solar Roof Panel) ಗಳನ್ನು ಹಾಕಿಸುವಂತಹ ವಿಶಾಲವಾದ ಸ್ಥಳವಿರಬೇಕು, ಹಾಗೂ ಅರ್ಜಿದಾರರು ಸರ್ಕಾರದ ವತಿಯಿಂದ ದೊರಕುತ್ತಿರುವ ಸಬ್ಸಿಡಿ ಹಣ (Subsidy Money)ವನ್ನು ಪಡೆದು ಮನೆಯ ಮಹಡಿಯ ಮೇಲೆ ಸೋಲಾರ್ ರೂಫ್ ಪ್ಯಾನಲ್ ಗಳನ್ನು ಅಳವಡಿಸಿಕೊಳ್ಳ ಬಹುದು.

ಆದರೆ ಈ ಸೋಲಾರ್ ರೂಫ್ ಪ್ಯಾನಲ್ (Solar Roof Panel) ಗಳನ್ನು ಅಳವಡಿಸಲು ಲಕ್ಷಾಂತರ ರೂಪಾಯಿ ಹಣ ಖರ್ಚಾಗುವುದು, ಇದಕ್ಕೆ ಸರ್ಕಾರ ಸಬ್ಸಿಡಿ ರೂಪದಲ್ಲಿ ಮಿನಿಮಂ 30,000 ಹಣವನ್ನು ಮಾತ್ರ ಕಿಲೋ ವ್ಯಾಟ್ ಆಧಾರದ ಮೇಲೆ ನಿಮಗೆ ನೀಡುತ್ತಾರೆ. ಆದರೆ ಸಂಪೂರ್ಣ ಸೋಲಾರ್ ರೂಫ್ ಪ್ಯಾನಲ್ (Solar Roof Panel) ಸಿಸ್ಟಮನ್ನು ಅಳವಡಿಸುವುದಕ್ಕೆ ನೀವೇ ನಿಮ್ಮ ಕೈಯಾರೆ ಲಕ್ಷಾಂತರ ರೂಪಾಯಿ ಹಣವನ್ನು ಹಾಕಬೇಕಾಗುತ್ತದೆ.

 

Image Source: Onmanorama

 

ಹೀಗೆ ನಿಮ್ಮ ಬಳಿ ಹಣ ಇಲ್ಲದೆ ಹೋದರು ಸರ್ಕಾರದ ಈ ಪ್ರಯೋಜನವನ್ನು ಪಡೆದುಕೊಳ್ಳಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಅವಕಾಶವನ್ನು ಕಲ್ಪಿಸಿ ಕೊಡುತ್ತಿದ್ದು, ಇದರ ಪ್ರಯೋಜನವನ್ನು ಭಾರತದ ಪ್ರತಿ ನಾಗರಿಕರು ಪಡೆದುಕೊಂಡು ಉಚಿತವಾಗಿ ವಿದ್ಯುತ್ ಉಪಯೋಗಿಸಬಹುದು.

advertisement

SBI ನಿಂದ ಸೋಲಾರ್ ಅಳವಡಿಕೆಗೆ ಸಾಲ ಸೌಲಭ್ಯ:

ಭಾರತದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಗಳಲ್ಲಿ ಒಂದಾಗಿರುವಂತಹ SBI ತನ್ನ ಗ್ರಾಹಕರಿಗೆ ಸೋಲಾರ್ ಅಳವಡಿಕೆ ಮಾಡಿ PM ಸೂರ್ಯ ಗರ್ ಯೋಜನೆಯ (PM Surya Ghar Yojana) ಪ್ರಯೋಜನ ಪಡೆದುಕೊಳ್ಳಲು ಸಾಲ ಸೌಲಭ್ಯವನ್ನು ಕಲ್ಪಿಸಿ ಕೊಡುತ್ತಿದ್ದು ಅತಿ ಕಡಿಮೆ ಬಡ್ಡಿ ದರ (Less Interest Rate) ದಲ್ಲಿ ಬ್ಯಾಂಕ್ ನಿಂದ ಹಣವನ್ನು ಪಡೆದು ನಿಮ್ಮ ಮನೆಯ ಛಾವಣಿಯ ಮೇಲೆ ಸೋಲಾರ್ ಅಳವಡಿಕೆ ಮಾಡಿಕೊಂಡು ಇನ್ನು ಮುಂದೆ ಉಚಿತವಾಗಿ ವಿದ್ಯುತ್ ಉಪಯೋಗಿಸಬಹುದು.

 

Image Source: Vakilsearch

 

ಸಾಲ ಪಡೆಯಲು ಅರ್ಜಿದಾರರ ಅರ್ಹತೆ:

  • 3kW – 10kWನ ಸೋಲಾರ್ ಅಳವಡಿಕೆ ಮಾಡಲು SBI ನಿಂದ ಸಾಲ ಪಡೆಯುವಂತಹ ಅರ್ಜಿದಾರರ ವಾರ್ಷಿಕ ಆದಾಯವು 3ಲಕ್ಷ ಮೇಲ್ಪಟ್ಟಿರಬೇಕು.
  • 3kW ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಕೆ ಮಾಡಲು ಬ್ಯಾಂಕ್ ವತಿಯಿಂದ ಬರೋಬ್ಬರಿ 2 ಲಕ್ಷ ಸಾಲದ ಹಣವನ್ನು 7% ವಾರ್ಷಿಕ ಬಡ್ಡಿ ದರದ ಆಧಾರದ ಮೇಲೆ ನೀಡಲಾಗುತ್ತದೆ.
  • 3kW – 10kW ಕೆಪ್ಯಾಸಿಟಿ ಇರುವಂತಹ ಸೋಲಾರ್ ಪ್ಯಾನೆಲ್ (Solar Panel) ಗಳನ್ನ ಅಳವಡಿಸಲು SBI ನಿಂದ ಕೇವಲ 10.15% ವಾರ್ಷಿಕ ಬಡ್ಡಿ ದರದ ಆಧಾರದ ಮೇಲೆ ಆರು ಲಕ್ಷ ಹಣವನ್ನು ಸಾಲದ ರೀತಿ ಅರ್ಜಿದಾರರಿಗೆ ನೀಡಲಾಗುತ್ತದೆ.
  • 60 ರಿಂದ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೂ (Senior Citizen) ಕೂಡ ಈ ಸಾಲ ಸೌಲಭ್ಯವಿದ್ದು, ಸಾಲವನ್ನು ಮಂಜೂರು ಮಾಡಲು ಯಾವುದೇ ರೀತಿಯ ಎಕ್ಸ್ಟ್ರಾ ಚಾರ್ಜರ್ಸ್ ಗಳನ್ನು ಹಾಕುವುದಿಲ್ಲ

advertisement

Leave A Reply

Your email address will not be published.