Karnataka Times
Trending Stories, Viral News, Gossips & Everything in Kannada

BPL Card: ಇಂಥವರ ಮನೆಯಲ್ಲಿ ಬಿಪಿಎಲ್ ಕಾರ್ಡ್ ಇರುವಂತಿಲ್ಲ ಹೊಸ ಆದೇಶ! ರಾಜ್ಯ ಸರ್ಕಾರದ ಘೋಷಣೆ

advertisement

ಸರ್ಕಾರ ಪ್ರತಿಯೊಂದು ಯೋಜನೆಗಳನ್ನು ಕೂಡ ಸರಿಯಾದ ರೀತಿಯಲ್ಲಿ ಸರಿಯಾದ ಜನರಿಗೆ ಸಿಗಲಿ ಎನ್ನುವ ಉದ್ದೇಶದಲ್ಲಿ ಜಾರಿಗೆ ತರುತ್ತದೆ. ಅದರಲ್ಲೂ ವಿಶೇಷವಾಗಿ ಸರ್ಕಾರ ತರುವಂತಹ ಬಹುತೇಕ ಎಲ್ಲಾ ಯೋಜನೆಗಳು ಕೂಡ ಸಮಾಜದ ಮಧ್ಯಮ ಹಾಗೂ ಬಡ ವರ್ಗದ ಜನರಿಗಾಗಿ. ಬಡವರ ಜನರು ಕೂಡ ಸಮಾಜದಲ್ಲಿ ಸ್ಥಿತಿವಂತರಿಗೆ ಸಮಾನಾಂತರವಾಗಿ ಆರ್ಥಿಕ ಪ್ರಾಬಲ್ಯವನ್ನು ಪಡೆದುಕೊಳ್ಳಲಿ ಏನು ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ ಹಾಗೂ ಅವರಿಗೆ ಸಾಲ ಸೌಲಭ್ಯ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡುವ ಬಗ್ಗೆ ಕೂಡ ಸರ್ಕಾರ ಕಾರ್ಯರೂಪಕ್ಕೆ ಬರುತ್ತದೆ.

ಇಂಥವರ ಮನೆಗೆ ಬಿಪಿಎಲ್ ರೇಷನ್ ಕಾರ್ಡ್ ಇಲ್ಲ:

 

Image Source: DNA India

 

ಇನ್ನು ರೇಷನ್ ಕಾರ್ಡ್ (Ration Card) ವಿಚಾರಕ್ಕೆ ಬಂದರೆ ಅದರಲ್ಲಿ ಕೂಡ ಸಾಕಷ್ಟು ವಿಧಗಳಿರುತ್ತವೆ. ಎಪಿಎಲ್ ರೇಷನ್ ಕಾರ್ಡ್ ಅಂದರೆ Above Poverty Line. ಅಂದರೆ ಬಡತನದ ರೇಖೆಗಿಂತ ಮೇಲಿರುವವರಿಗೆ ನೀಡುವಂತಹ ರೇಷನ್ ಕಾರ್ಡ್ ಆಗಿದೆ.

ಬಿಪಿಎಲ್ ರೇಷನ್ ಕಾರ್ಡ್ (BPL Card) ಬಗ್ಗೆ ಮಾತನಾಡುವುದಾದರೆ Below Poverty Line ಆಗಿದೆ. ಬಿಪಿಎಲ್ ರೇಷನ್ ಕಾರ್ಡ್ ಅನ್ನು ಕೆಲವೊಂದು ಮಾನದಂಡಗಳ ಮೂಲಕ ಬಡತನದ ರೇಖೆಗಿಂತ ಕೆಳಗಿರುವಂತಹ ಜನರಿಗೆ ಸರ್ಕಾರದ ಯೋಜನೆಗಳು ಸಿಗಲಿ ಹಾಗೂ ಉಚಿತ ರೇಷನ್ ಸಿಗಲಿ ಎನ್ನುವ ಕಾರಣಕ್ಕಾಗಿ ನೀಡಲಾಗುತ್ತದೆ.

advertisement

ಆದರೆ ಬೇಸರ ಮಾಡಿಕೊಳ್ಳುವಂತಹ ಮತ್ತೊಂದು ವಿಚಾರ ಏನಂದ್ರೆ? ಇಂದಿನ ಸಮಾಜದಲ್ಲಿ ಇದನ್ನ ಬಡತನದ ರೇಖೆಗಿಂತ ಮೇಲಿರುವವರು ಕೂಡ ಬಳಸಿಕೊಳ್ಳುತ್ತಿದ್ದು ಬಡತನದ ರೇಖೆಗಿಂತ ಕೆಳಗಿರುವವರಿಗೆ ಈ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳದೆ ಇರುವ ಹಾಗೆ ಆಗಿದೆ.

 

Image Source: Daijiworld

 

ಇನ್ನು ಬಿಪಿಎಲ್ ರೇಷನ್ ಕಾರ್ಡ್ (BPL Card) ಅನ್ನು ವಿಶೇಷವಾಗಿ ಕೆಲವೊಂದು ವರ್ಗದ ಜನರು ಪಡೆದುಕೊಳ್ಳುವ ಹಾಗೆ ಇಲ್ಲ ಎಂಬುದಾಗಿ ಈಗಾಗಲೇ ಸರ್ಕಾರ ನಿಯಮಗಳನ್ನು ಜಾರಿಗೆ ತಂದು ಸಾಕಷ್ಟು ವರ್ಷಗಳ ಕಳೆದಿದೆ. ಅವರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವವರು ಸರ್ಕಾರಿ ಕೆಲಸದಲ್ಲಿರುವಂತಹ ವ್ಯಕ್ತಿಗಳು.

ಸರ್ಕಾರಿ ಕೆಲಸದಲ್ಲಿರುವಂತಹ ವ್ಯಕ್ತಿ ನಿಮ್ಮ ಕುಟುಂಬದಲ್ಲಿದ್ದರೆ ನೀವು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹಾಗೂ ಅದರ ಸೇವೆಗಳನ್ನು ಪಡೆದುಕೊಳ್ಳಲು ಅರ್ಹರಾಗಿರುವುದಿಲ್ಲ. ಕೇವಲ ಇಷ್ಟು ಮಾತ್ರವಲ್ಲದೆ ನಿಮ್ಮ ಬಳಿ ಇರುವಂತಹ ಕಾರ್ಡ್ ಕೂಡ ಇರುವ ಹಾಗಿಲ್ಲ. ಕುಟುಂಬದ ವಾರ್ಷಿಕ ಆದಾಯ 1.2 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರಬೇಕು. ಅವರ ಹೆಸರಿನಲ್ಲಿ ಮೂರು ಹೆಕ್ಟರ್ಗಳಿಗಿಂತ ಹೆಚ್ಚಿನ ಭೂಮಿ ಇರಬಾರದು.

ಈ ರೀತಿಯ ಸವಲತ್ತುಗಳನ್ನು ಹೊಂದಿರುವಂತಹ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಅರ್ಹತೆಯನ್ನು ಹೊಂದಿರುವುದಿಲ್ಲ ಎಂಬುದಾಗಿ ಸರ್ಕಾರ ಈಗಾಗಲೇ ಮಾನದಂಡವನ್ನು ಸಿದ್ಧಪಡಿಸಿದ್ದು ಅದೇ ಮಾನದಂಡದ ಅಡಿಯಲ್ಲಿ ಯಾರಿಗೆ ಯಾವ ರೇಷನ್ ಕಾರ್ಡ್ ನೀಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ.

advertisement

Leave A Reply

Your email address will not be published.