Karnataka Times
Trending Stories, Viral News, Gossips & Everything in Kannada

Ration Card: ಶ್ರೀಮಂತರು ಮಾತ್ರವಲ್ಲ! ಇಂತಹವರ ರೇಷನ್ ಕಾರ್ಡ್ ಕೂಡ ಕ್ಯಾನ್ಸಲ್, ಕರ್ನಾಟಕ ಸರ್ಕಾರದ ಅಧಿಕೃತ ಆದೇಶ

advertisement

Ration Card Cancelled and Suspended List:  ಇಂದು ಬಡವರ್ಗದ ಜನತೆಗೆ ಮೂಲಭೂತ ಸೌಕರ್ಯಗಳು ಸಿಗುವಂತೆ ಆಗಬೇಕು ಎಂಬ ನಿಟ್ಟಿನಲ್ಲಿ ಸರಕಾರ ಹಲವು ರೀತಿಯ ಯೋಜನೆಗಳನ್ನು ರೂಪಿಸುತ್ತಲೆ ಬಂದಿದೆ. ಅದರಲ್ಲಿ ಮುಖ್ಯ ವಾಗಿ ಪಡಿತರ ಯೋಜನೆ ಅಂದರೆ ರೇಷನ್ ಕಾರ್ಡ್ ಇರುವ ಸದಸ್ಯರಿಗೆ ಸಿಗುವಂತಹ ಆಹಾರ ಧಾನ್ಯ ‌ಕೂಡ ಒಂದಾಗಿದೆ. ಈ ಪಡಿತರ ಕಾರ್ಡ್‌ ಅನ್ನು,‌ ಎಪಿಎಲ್ ಬಿಪಿಎಲ್, ಅಂತ್ಯೋದಯ(APL and BPL Ration cards) ಎಂದು ಮೂರು ವಿಧಗಳಾಗಿ ವಿಂಗಡಣೆ ಮಾಡಿದ್ದು ಬಡವರ್ಗದ ಜನತೆಗೆ ಈ ಕಾರ್ಡ್ ಬಹಳ ಸಹಕಾರಿ ಯಾಗುತ್ತಿದೆ.

ಕಾರ್ಡ್ ರದ್ದು
ಹೆಚ್ಚಿನ ಪಡಿತರ ದಾರರು ಬಿಪಿಎಲ್ ಕಾರ್ಡ್ ಹೊಂದಿದ್ದರೂ ಕೂಡ ಆಹಾರ ಧಾನ್ಯಗಳನ್ನು ಖರೀದಿ ಮಾಡುತ್ತಿಲ್ಲ. ಬಡವರಿಗೆ ಮಾರುಕಟ್ಟೆ ದರದಲ್ಲಿ ಅಕ್ಕಿಯನ್ನು ಖರೀದಿಸುವುದು ಕಷ್ಟ,ಎಂಬ ಕಾರಣಕ್ಕೆ ಸರಕಾರ ಬಿಪಿಎಲ್‌ ಕಾರ್ಡುದಾರರಿಗೆ ಅಕ್ಕಿ ವಿತರಣೆ ಮಾಡುತ್ತಿದೆ.‌ಆದ್ರೆ ಕೇವಲ ಸರಕಾರಿ ಸೌಲಭ್ಯ ಗಳನ್ನು ಪಡೆದುಕೊಳ್ಳಲು ಮಾತ್ರ ರೇಷನ್ ಕಾರ್ಡ್ ಅನ್ನು ಬಳಕೆ ಮಾಡುತ್ತಿದ್ದಾರೆ. ಇಂತಹ ಪಡಿತರ ಕಾರ್ಡ್ ಗಳನ್ನು ಪರಿಶೀಲನೆ ಮಾಡಿ ಇಂತವರ ಕಾರ್ಡ್ ಅನ್ನು ಸರಕಾರ ರದ್ದು ಮಾಡಲಿದೆ.‌ಈಗಾಗಲೇ ಕೆಲವು ಜನರ ಕಾರ್ಡ್ ಕೂಡ ರದ್ದು ಆಗಿದೆ.

How can I cancel my ration card in Karnataka?How can I remove my name from ration card in Karnataka?
What are the rules for ration card in Karnataka?
How can I check my ration card status in Karnataka?
Image Source: India Today

advertisement

ಇವರ ಕಾರ್ಡ್ ರದ್ದು
ಈಗಾಗಲೇ ಆರು ತಿಂಗಳಿಂದ ಒಟ್ಟು 3.26 ಲಕ್ಷ ಕುಟುಂಬಗಳು ಪಡಿತರವನ್ನೇ ಪಡೆದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದ್ದು ಈ ಹಿನ್ನೆಲೆ ರೇಷನ್ ಕಾರ್ಡ್ ಅಮಾನತಿಗೆ ಸರಕಾರ ಆದೇಶ ನೀಡಿದೆ. ಅದೇ ರೀತಿ ಅರ್ಹರಲ್ಲದ ಮತ್ತು ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಮಾಡಿಕೊಂಡವರ ಕಾರ್ಡ್ ಗಳನ್ನು ಕೂಡ ರದ್ದುಪಡಿಸಲು ಸರಕಾರ ತಿರ್ಮಾನ ಮಾಡಿದೆ.

ರದ್ದು ಆಗಿದೆಯೆ? ತಿಳಿದುಕೊಳ್ಳಿ
ಮೊದಲಿಗೆ ನೀವು ಆಹಾರ ಇಲಾಖೆಯ ಲಿಂಕ್
https://ahara.kar.nic.in ಇಲ್ಲಿ ಕ್ಲಿಕ್ ಮಾಡಿ, ಇ ಪಡಿತರ ಚೀಟಿ ಎಂಬ ಆಯ್ಕೆಯಲ್ಲಿ ರದ್ದು ಮಾಡಲಾದ ,ತಡೆಹಿಡಿಯಲಾದ ಆಯ್ಕೆ ಇರಲಿದ್ದು ಅದರಲ್ಲಿ ನಿಮ್ಮ ಜಿಲ್ಲೆ, ತಾಲೂಕನ್ನು ಆಯ್ಕೆ ಮಾಡಿಕೊಳ್ಳಬೇಕು.ಇದರಲ್ಲಿ ಕಾರ್ಡ್ ರದ್ದು ಆದ ಹೆಸರು ಮತ್ತು ರದ್ದು ಆಗಲು ಇದ್ದ ಕಾರಣ ಕೂಡ ಸಿಗಲಿದೆ

ಅಕ್ಕಿ ಜೊತೆ ಹಣವೂ ಜಮೆ
ಈಗಾಗಲೇ ಅನ್ನಭಾಗ್ಯ ಯೋಜನೆಯ ಮೂಲಕ ಕುಟುಂಬದ ಅತ್ಯಂತ ಹಿರಿಯ ಸದಸ್ಯರ ಬ್ಯಾಂಕ್‌ ಖಾತೆಗೆ 5 ಕೆ.ಜಿ. ಅಕ್ಕಿ ಬದಲಿಗೆ 170 ರೂ ಅನ್ನು‌ಕೂಡ ಖಾತೆ ಗೆ ಜಮೆ ಮಾಡುತ್ತಿದ್ದು ಹೆಚ್ಚಿನ ಜನರು ಈ ಸೌಲಭ್ಯ ಪಡೆಯಲು ಕೂಡ ಕಾರ್ಡ್ ಅನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಆಹಾರ ಇಲಾಖೆಯು ಪಡಿತರ ಕಾರ್ಡ್ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು ಶೀಘ್ರವಾಗಿ ಹೆಚ್ಚಿನ ಕಾರ್ಡ್ ರದ್ದು ಆಗುವ ಸಾಧ್ಯತೆ ಇದೆ.

How can I cancel my ration card in Karnataka?How can I remove my name from ration card in Karnataka?
What are the rules for ration card in Karnataka?
How can I check my ration card status in Karnataka?
Image Source: India Today

advertisement

Leave A Reply

Your email address will not be published.