Karnataka Times
Trending Stories, Viral News, Gossips & Everything in Kannada

Jasprit Bumrah: ಭಾರತದಲ್ಲಿ ಆಗದಿದ್ರೆ ಈ ದೇಶಕ್ಕಾಗಿ ಕ್ರಿಕೆಟ್ ಆಡ್ತಿದ್ರಂತೆ ಜಸ್ಪ್ರೀತ್ ಬೂಮ್ರಾ!

advertisement

ಸದ್ಯದ ಮಟ್ಟಿಗೆ ಭಾರತ ಕ್ರಿಕೆಟ್ ತಂಡವನ್ನು ನಾವು ನೋಡುವುದಾದರೆ ಪ್ರಮುಖವಾಗಿ ಈ ಆಟಗಾರ ಇರಲೇಬೇಕು ಅಂತ ಲೆಕ್ಕಾಚಾರ ಹಾಕಿದ್ರೆ ಅದರಲ್ಲಿ ಜಸ್ಪ್ರೀತ್ ಬೂಮ್ರಾ (Jasprit Bumrah) ಖಂಡಿತವಾಗಿ ಕಾಣಿಸಿಕೊಳ್ಳುತ್ತಾರೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಅವರು ಕಾಲಿಟ್ಟ ಮೇಲಿಂದ ಬೌಲಿಂಗ್ ವಿಭಾಗದಲ್ಲಿ ಭಾರತೀಯ ಕ್ರಿಕೆಟ್ ತಂಡ ಹಿಂದಿಗಿಂತಲೂ ಸ್ಟ್ರಾಂಗ್ ಆಗಿ ಕಾಣಿಸಿಕೊಳ್ಳುತ್ತಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಭಾರತದ ಬೌಲಿಂಗ್ ಜೀವಾಳ ಅವರು ಅಂತ ಹೇಳಿದರು ಕೂಡ ತಪ್ಪಾಗಲ್ಲ. ಅಷ್ಟರ ಮಟ್ಟಿಗೆ ತಮ್ಮ ಯಾರ್ಖರ್ ಸ್ಪೆಷಲಿಸ್ಟ್ ಬೌಲಿಂಗ್ ಮೂಲಕ ಜಸ್ಪ್ರೀತ್ ಬೂಮ್ರಾ ರವರು ಪರಿಣಾಮ ಬೀರಿದ್ದಾರೆ.

ಭಾರತ ದೇಶಕ್ಕೆ ಅಲ್ದೆ ಇದ್ರೆ ಈ ದೇಶಕ್ಕಾಗಿ ಕ್ರಿಕೆಟ್ ಆಡ್ತಿದ್ರಂತೆ:

ಈ ಮೇಲಿನ ಹೇಳಿಕೆಯನ್ನು ನೋಡಿ ನೀವು ಜಸ್ಪ್ರೀತ್ ಬೂಮ್ರಾ (Jasprit Bumrah) ಅವರ ಬಗ್ಗೆ ಅಸಮಾಧಾನ ಪಡೋದಕ್ಕೆ ಹೋಗ್ಬೇಡಿ ಅದಕ್ಕೆ ಒಂದು ಕಾರಣ ಕೂಡ ಇದ್ದು ಆ ಕಾರಣದ ಜೊತೆಗೆ ಈ ವಿಚಾರವನ್ನು ಕೇಳಿದರೆ ನೀವು ಕೂಡ ಓಹೋ ಇರಬಹುದು ಅನ್ನುವುದಾಗಿ ಒಪ್ಪಿಕೊಳ್ಳುತ್ತೀರಿ.

ಹೌದು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗುವಂತಹ ಸಮಯಕ್ಕಿಂತ ಮುಂಚೆ ಜಸ್ಪ್ರೀತ್ ಬೂಮ್ರಾ (Jasprit Bumrah) ರವರ ಜೀವನದಲ್ಲಿ ಕ್ರಿಕೆಟ್ ನಲ್ಲಿ ಭವಿಷ್ಯ ಕಾಣೋದು ಅನುಮಾನವೇ ಸರಿ ಎನ್ನುವಂತಹ ನಿರ್ಧಾರ ಕೂಡ ಇತ್ತಂತೆ. ಇದನ್ನು ಅವರು ತಮ್ಮ ಪತ್ನಿ ಆಗಿರುವಂತಹ ಸಂಜನಾ ಗಣೇಶನ್ ರವರ ಜೊತೆಗೆ ನಡೆದಿರುವಂತಹ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

 

Image Source: Cricket Times

 

advertisement

ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪಂಜಾಬ್ (Punjab) ಮೂಲದ ಕುಟುಂಬದಿಂದ ಬಂದವರಾಗಿರುತ್ತಾರೆ ಹೀಗಾಗಿ ಸಾಮಾನ್ಯವಾಗಿ ಹೆಚ್ಚಿನ ಪಂಜಾಬ್ ಕುಟುಂಬದ ಜನರು ಉತ್ತಮ ಜೀವನವನ್ನು ಅರಸಿಕೊಂಡು ಕೆನಡಾ ದೇಶಕ್ಕೆ ಹೋಗುವಂತಹ ಸಂಪ್ರದಾಯ ಕಳೆದ ಸಾಕಷ್ಟು ದಶಕ ಗಳಿಂದಲೂ ಕೂಡ ನಡೆದುಕೊಂಡು ಬಂದಿದೆ. ಈಗಲೂ ಕೂಡ ಅದು ಮುಂದುವರೆದುಕೊಂಡು ಹೋಗಿದೆ.

ಒಂದು ಸಂದರ್ಭದಲ್ಲಿ ಜಸ್ಪ್ರೀತ್ ಬೂಮ್ರಾ ಸೇರಿದಂತೆ ಅವರ ಎಲ್ಲಾ ಕುಟುಂಬದವರು ಕೆನಡಾ ದೇಶಕ್ಕೆ ಹೋಗುವ ನಿರ್ಧಾರ ಮಾಡಿರುತ್ತಾರೆ ಆದರೆ ಜಸ್ಪ್ರೀತ್ ಬೂಮ್ರಾ ತಾಯಿಗೆ ಮಾತ್ರ ಭಾರತದಲ್ಲಿಯೇ ಇರಬೇಕು ಎನ್ನುವಂತಹ ಆಸೆ ಇರುತ್ತದೆ. ಭಾರತದ ಸಂಸ್ಕೃತಿ ಹಾಗೂ ಇಲ್ಲಿನ ಜನಜೀವನದ ಬಗ್ಗೆ ಅವರ ತಾಯಿಗೆ ಇದ್ದ ಒಲವು ಕನ್ನಡ ದೇಶಕ್ಕೆ ಹೋದಮೇಲೆ ಬದಲಾಗಬಹುದು ಎನ್ನುವಂತಹ ಆತಂಕದಿಂದ ಅವರು ಕೆನಡಾ ದೇಶಕ್ಕೆ ಹೋಗಲು ನಿರಾಕರಿಸುತ್ತಾರೆ.

 

Image Source: CricnScore

 

ಜಸ್ಪ್ರೀತ್ ಬೂಮ್ರಾ (Jasprit Bumrah) ಸಂದರ್ಶನದಲ್ಲಿ ಹೇಳಿರುವ ಪ್ರಕಾರ ಒಂದು ವೇಳೆ ಅವತ್ತು ಏನಾದರೂ ನಾನು ಕೆನಡಾ ದೇಶಕ್ಕೆ ಹೋಗಿದ್ದೆ, ಬಹುಶಃ ನಾನು ಕೆನಡಾ ದೇಶದಲ್ಲಿ ಯಾವುದಾದರೂ ಕೆಲಸವನ್ನು ಮಾಡಬೇಕಾಗಿತ್ತು ಅಥವಾ ಆದೇಶದ ಕ್ರಿಕೆಟ್ ತಂಡವನ್ನು ಸೇರಿಕೊಳ್ಳಬೇಕಾಗಿತ್ತು ಎನ್ನುವುದಾಗಿ ಹಾಸ್ಯಾಸ್ಪದವಾಗಿ ಮಾತನಾಡಿದ್ದಾರೆ.

ಜಸ್ಪ್ರೀತ್ ಬೂಮ್ರಾ ಇವತ್ತು ಯಾವ ರೀತಿಯಲ್ಲಿ ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡದ ಪರವಾಗಿ ಆಡುವ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಇಂದು ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಪ್ರಮುಖ ಆಟಗಾರರಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರ ಸಾರಥ್ಯದಲ್ಲಿ ಭಾರತೀಯ ಬೌಲಿಂಗ್ ಅಟ್ಯಾಕ್ ಇನ್ನಷ್ಟು ಪರಿಣಾಮಕಾರಿಯಾಗಿ ಕಾಣಿಸಿಕೊಳ್ಳಲು ಅನ್ನುವಂತಹ ಹಾರೈಕೆಯನ್ನು ಬಯಸೋಣ.

advertisement

Leave A Reply

Your email address will not be published.