Karnataka Times
Trending Stories, Viral News, Gossips & Everything in Kannada

Tractor: ಟ್ರ್ಯಾಕ್ಟರ್ ಖರೀದಿಸಲು ಹಣ ಹೊಂದಿಸಲಾಗದ ರೈತರಿಗೆ ಸಿಹಿಸುದ್ದಿ! ಇಲ್ಲಿದೆ ಡೈರೆಕ್ಟ್ ಲಿಂಕ್

advertisement

ರೈತರಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಹಲವು ರೀತಿಯ ಯೊಜನೆಗಳನ್ನು ರೂಪಿಸುತ್ತಲೇ ಬಂದಿದೆ.‌ ಈಗಾಗಲೇ ಕೇಂದ್ರ ಸರಕಾರವು‌ ರೈತರಿಗಾಗಿ ಕಿಸಾನ್ ಯೋಜನೆ (Kisan Yojana) ಯನ್ನು ಜಾರಿಗೆ ತಂದಿದ್ದು ರೈತರಿಗೆ ಆರ್ಥಿಕ ಸೌಲಭ್ಯ ವನ್ನು ಒದಗಿಸುತ್ತಿದೆ. ಅದೇ ರೈತರಿಗೆ ಕೆಲಸ ಸುಲಭವಾಗಬೇಕು.ಕೃಷಿಯೇತರ ಚಟುವಟಿಕೆ ಬೇಗನೆ ಪೂರೈಸಲು ಸರಕಾರವು ಆಧುನಿಕ ಕೃಷಿ ವಿಧಾನ ಅಳವಡಿಕೆಗೂ‌ ಹೆಚ್ಚಿನ ಪ್ರೋತ್ಸಾಹ ವನ್ನು ನೀಡುತ್ತ ಬರುತ್ತಿದೆ. ಮುಖ್ಯವಾಗಿ ವಿವಿಧ ಸಲಕರಣೆ ಅಳವಡಿಕೆ ಮಾಡುವ ಮೂಲಕ ಕೃಷಿ ಕ್ಷೇತ್ರ ಅಭಿವೃದ್ಧಿ ಯಾಗುತ್ತಿದೆ. ಅದೇ ರೀತಿ ಕೇಂದ್ರ ಸರಕಾರ ಹೊಸ ಯೋಜನೆಯನ್ನು ರೂಪಿಸಿದೆ.

ಯಾವುದು ಯೋಜನೆ?

 

Image Source: GMRIT

 

ಕೇಂದ್ರ ಸರಕಾರವು ಕಿಸಾನ್ ಟ್ರ್ಯಾಕ್ಟರ್ ಯೋಜನೆ (PM Kisan Tractor Yojana) ಯನ್ನು ಜಾರಿಗೆ ತಂದಿದ್ದು ಈ ಯೋಜನೆ ಅಡಿಯಲ್ಲಿ ರೈತರು ಯಾವುದೇ ಕಂಪನಿಯ ಟ್ಯಾಕ್ಟರ್ (Tractor) ಅನ್ನು ಖರೀದಿ ಮಾಡಲು ಅವಕಾಶ ಇದ್ದು ಟ್ರಾಕ್ಟರ್ ಖರೀದಿಸಲು ರೈತರಿಗೆ ಶೇಕಡಾ 50 ರಷ್ಟು ಸಬ್ಸಿಡಿ ಮೊತ್ತ ಸಿಗಲಿದ್ದು ದೇಶದ ಎಲ್ಲಾ ರೈತರಿಗೆ ಈ ಯೋಜನೆಯ ಸೌಲಭ್ಯ ಸಿಗಲಿದೆ.

ಸಬ್ಸಿಡಿ ವಿತರಣೆ:

 

Image Source: IBC24

 

advertisement

ರೈತರು ಟ್ರಾಕ್ಟರ್ (Tractor) ಅನ್ನು ಖರೀದಿ ಮಾಡಲು ಇದರ ಬೆಲೆಯ ಅರ್ಧದಷ್ಟು ಮಾತ್ರ ಪಾವತಿ ಮಾಡಿದರೆ ಸಾಕು. ಇನ್ನುಳಿದ ಅರ್ಧದಷ್ಟು ಹಣವನ್ನು ಕೇಂದ್ರ ಸರ್ಕಾರ ಪಾವತಿ ಮಾಡುತ್ತದೆ. ಈ ಯೋಜನೆಯು ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಲಿದ್ದು ಆಧುನಿಕ ಬೇಸಾಯಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಪ್ರೇರಣೆ ನೀಡಲಿದೆ. ಈ ಯೋಜನೆಯ ಸೌಲಭ್ಯ ಸಿಗಬೇಕಿದ್ರೆ ರೈತನು‌ ಕನಿಷ್ಠ ಕೃಷಿಯಾದರೂ ಹೊಂದಿರಬೇಕು.

ಈ ನಿಯಮ‌ ಇರಲಿದೆ:

ರೈತನು ಟ್ರ್ಯಾಕ್ಟರ್ (Tractor) ಖರೀದಿ ಮಾಡಲು ಅರ್ಜಿದಾರನು‌ ಭಾರತೀಯ ನಾಗರೀಕರನಾಗಿದ್ದರೆ ಅರ್ಜಿ‌ ಹಾಕಬಹುದಾಗಿದೆ.ಇನ್ನು ಅರ್ಜಿ‌ ದಾರನ ವಯಸ್ಸು 18 ವರ್ಷ ಹೆಚ್ಚು ಇರಬೇಕು ಮತ್ತು 60 ವರ್ಷ ಮೀರಿರಬಾರದು. ಇನ್ನು ಟ್ರಾಕ್ಟರ್ ಖರೀದಿಸುವ ರೈತ ತನ್ನ ಹೆಸರಿನಲ್ಲಿ ಕೃಷಿ ಭೂಮಿ ಹೊಂದಿದ್ದರೆ ಅರ್ಜಿ ಹಾಕಬಹುದಾಗಿದೆ.

ಈ ದಾಖಲೆ ಬೇಕು:

  • Aadhaar Card
  • Bank Account Information
  • PAN Card
  • Voter ID Card
  • Land Records
  • Photo
  • etc. Documents are Required.

ಪ್ರಧಾನಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆಗೆ (PM Kisan Tractor Yojana) ಅರ್ಜಿ ಹಾಕಲು ಈ ವೆಬ್‌ಸೈಟ್ www.pmkisan.gov.in ಮತ್ತು pmkisan.nic.in ನಲ್ಲಿ ಅರ್ಜಿ ಹಾಕಬಹುದಾಗಿದೆ.

advertisement

Leave A Reply

Your email address will not be published.