Karnataka Times
Trending Stories, Viral News, Gossips & Everything in Kannada

PM Surya Ghar Yojana: 300 ಯೂನಿಟ್ ಉಚಿತ ಮೋದಿ ಗ್ಯಾರಂಟಿಯ ವಿದ್ಯುತ್ ಬೇಕಿದ್ದರೆ ಕೂಡಲೇ ಹೀಗೆ ಮಾಡಿ

advertisement

ಸೌರ ವಿದ್ಯುತ್ ಶಕ್ತಿ ಬೆಂಬಲಿಸುವ ಸಲುವಾಗಿ ಕೇಂದ್ರ ಸರಕಾರವು ಮಹತ್ವದ ನಿರ್ಣಯಕ್ಕೆ ಬರಲಾಗಿದ್ದು ಸೋಲಾರ್ ವಿದ್ಯುತ್ ಸ್ಥಾಪನೆಗೆ ಸೋಲಾರ್ (Solar) ಅಳವಡಿಕೆ ಮಾಡಲು ಸಬ್ಸಿಡಿ ನೀಡಲು ಸರಕಾರ ಮುಂದಾಗಿದೆ. ಈ ಯೋಜನೆಗೆ ಸೌರ ಫಲಕ ಹಾಕಲು ಬೇಕಾದ ಆರ್ಥಿಕ ಯೋಜನೆ ನೀಡಲು ಸರಕಾರ ಮುಂದಾಗಿದ್ದು ಸರಕಾರದಿಂದ ಇಂತಿಷ್ಟು ಮೊತ್ತದ ಸಬ್ಸಿಡಿ ಸಿಗಲಿದೆ‌. ಮನೆ ಮ‌ನೆಗಳಿಗೆ ಉಚಿತ ವಿದ್ಯುತ್ (Free Electricity) ಪೂರೈಕೆ ಆಗುವ ಕೇಂದ್ರದ ಈ ಯೋಜನೆ ಸದ್ಯ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು ದೊಡ್ಡ ಮಟ್ಟಿಗೆ ಜನರು ಇದನ್ನು ಬೆಂಬಲಿಸುತ್ತಲಿದ್ದಾರೆ.

ಪಿಎಂ ಸೂರ್ಯ ಘರ್ ಯೋಜನೆ (PM Surya Ghar Yojana) ಸರಕಾರ ಅನೇಕ ವರ್ಷದಿಂದ ಸರಕಾರದಿಂದ ಅನುಷ್ಠಾನಕ್ಕೆ ತರಬೇಕು ಅಂದು ಕೊಂಡಿದ್ದ ಒಂದು ಯೋಜನೆ ಆಗಿದೆ. ಇದು ಪ್ರಬಲವಾಗಿ ಜಾರಿಗೆ ಬಂದರೆ ವಿದ್ಯುತ್ ಶಕ್ತಿ ಮೀಗುವ ಜೊತೆಗೆ ಅನೇಕ ರೀತಿಯಲ್ಲಿ ಕೂಡ ಲಾಭ ನಿಮಗೆ ಸಿಗಲಿದೆ. ಪಿಎಂ ಮಫ್ತ್ ಬಿಜಿಲಿ ಯೋಜನೆ (PM Muft Bijli Yojana) ಯನ್ನು ಸರಕಾರ ಜಾರಿಗೆ ತರಲಾಗುವ ಕಾರಣ ಜನರಿಗೆ ಇದರ ನೋಂದಣಿ ಪ್ರಕ್ರಿಯೆ ಬಗ್ಗೆ ಅನೇಕ ಗೊಂದಲ ಏರ್ಪಟ್ಟಿದ್ದು ಇದಕ್ಕೆ ಸಂಪೂರ್ಣ ಲೇಖನ ನಿಮಗೆ ಉತ್ತರವಾಗಿ ಸಿಗಲಿದೆ.

ಸಬ್ಸಿಡಿ ವಿತರಣೆ:

 

 

advertisement

ಪಿಎಂ ಸೂರ್ಯ ಘರ್ ಯೋಜನೆ (PM Surya Ghar Yojana) ಅನುಷ್ಠಾನಕ್ಕೆ ದೊಡ್ಡ ಮೊತ್ತದ ಸಹಾಯಧನ ನಿಮಗೆ ಸಿಗಲಿದೆ. 1 kW ಗೆ(Kilowatt) 30,000 ರೂಪಾಯಿ, 2KW ಗೆ 60,000 ಹಾಗೂ 3KW ಗೆ 78,000 ದಂತೆ ಸಬ್ಸಿಡಿ ಮೊತ್ತ ಸಿಗಲಿದೆ. ಉಳಿದ ಮೊತ್ತ ನೀವು ಬರಿಸಿದರೆ ಸೌರ ವಿದ್ಯುತ್ ಸೋಲಾರ್ ಚಾವಣಿಯನ್ನು ನೀವು ಹಾಕಿಕೊಳ್ಳಬಹುದು, ಸೋಲಾರ್ ಚಾವಣಿ ಹಾಕುವ ಮೂಲಕ ವಿದ್ಯುತ್ ಮೀಗಿದರೆ ಅದನ್ನು ನೀವು ವಿದ್ಯುತ್ ಘಟಕಕ್ಕೆ ಮಾರಾಟ ಮಾಡಬಹುದು.

ಎಲ್ಲಿ ಅರ್ಜಿ ಹಾಕಬೇಕು?

ಈಗಾಗಲೇ ಪಿಎಂ ಸೂರ್ಯ ಯೋಜನೆ (PM Surya Ghar Yojana) ನೋಂದಣಿ ಪ್ರಕ್ರಿಯೆ ಆರಂಭ ಆಗಿದ್ದು ಅಪಾರ ಪ್ರಮಾಣದಲ್ಲಿ ಜನ ಬೆಂಬಲಿಸುತ್ತಿದ್ದಾರೆ. ಇದರಲ್ಲಿ ಉಚಿತ 300 ಯುನಿಟ್ ವಿದ್ಯುತ್ ಪೂರೈಕೆ ಆಗಲಿದ್ದು ಈಗಾಗಲೇ ಇದಕ್ಕೆ ಅರ್ಜಿ ಪ್ರಕ್ರಿಯೆ ಕೂಡ ಆರಂಭ ಆಗಿದೆ. ಇದಕ್ಕೆ ಅರ್ಜಿ ಸಲ್ಲಿಸಲು ನೀವು ಅಂಚೆ ಕಚೇರಿ ಇಲಾಖೆಯ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಅದಕ್ಕಾಗಿ ನೀವು https://pmsuryaghar.in/ ಗೆ ಭೇಟಿ ನೀಡಿ ಅರ್ಜಿ ಹಾಕಬಹುದು.

ವಿಧಾನ ಹೇಗೆ?

ಪೋರ್ಟಲ್ ನಲ್ಲಿ ನೋಂದಾಯಿಸಲು https://pmsuryaghar.in/ಭೇಟಿ ನೀಡಿ ಬಳಿಕ ವಿದ್ಯುತ್ ಗ್ರಾಹಕರ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗು ಇಮೇಲ್ ವಿಳಾಸ ನೋಂದಾಯಿಸಿಕೊಳ್ಳಿ, ಅದರಲ್ಲಿ ರೂಫ್ ಟಾಪ್ ಫಾರ್ಮ್ ಗೆ ಅರ್ಜಿ ಸಲ್ಲಿಸಿ. ಎಲ್ಲ ಸರಿ ಇದ್ದರೆ ನಿಮಗೆ ಅನುಮೋದನೆ ಸಿಗಲಿದೆ‌. ಆಗ ನೀವು ನಿಮ್ಮ ವಿದ್ಯುತ್ ಘಟಕದಿಂದ ನೋಂದಾಯಿತ ಮಾರಾಟಗಾರರಿಂದ ಸ್ಥಾವರ ಸ್ಥಾಪಿಸಿ. ಈ ಪ್ರಕ್ರಿಯೆ ಆದ ಬಳಿಕ ನೆಟ್ ಮೀಟರ್ ಗೆ ಅರ್ಜಿ ಸಲ್ಲಿಸಿ ಆಗ ಪೋರ್ಟಲ್ ನಿಂದ ಕಮಿಷನ್ ಪ್ರಮಾಣ ಪತ್ರ ರಚಿಸಲಾಗುವುದು. ಬ್ಯಾಂಕ್ ಖಾತೆ ವಿವರ ಹಾಗೂ ರದ್ದುಗೊಳಿಸಿದ್ದ ಚೆಕ್ ಅನ್ನು ಪೋರ್ಟಲ್ ಮೂಲಕ ಸಲ್ಲಿಸಿ, ಈ ಸಬ್ಸಿಡಿಯನ್ನು ನೀವು 30 ದಿನದ ಒಳಗೆ ಬ್ಯಾಂಕ್ ಖಾತೆಗೆ ಪಡೆಯಬಹುದಾಗಿದೆ.

advertisement

Leave A Reply

Your email address will not be published.